ಬಾಕ್ಸ್ ಆಫೀಸ್ ರಾಣಿಯಾದ ಕೊಡಗಿನ ಬೆಡಗಿ: ಒಟ್ಟೊಟ್ಟಿಗೆ 3 ಸಿನಿಮಾ ಹಿಟ್, 3000 ಕೋಟಿ ಕಲೆಕ್ಷನ್
ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ ಮೂರು ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸೂಪರ್ ಹಿಟ್ ಆಗಿ, ಬಾಕ್ಸ್ ಆಫೀಸ್‌ನಲ್ಲಿ 3000 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಭಾರತದ ಬಾಕ್ಸ್ ಆಫೀಸ್ ರಾಣಿ
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈಗ ಬ್ಯುಸಿಯಾಗಿರುವ ನಟಿ, ಟೀಕಿಸುವವರಿಗೆ ನಗುವಿನಿಂದಲೇ ಉತ್ತರ ಕೊಡುವ ಈ ನಟಿ ಕಾಲೆಳೆಯುವವರ ನಡುವೆಯೇ ಮೇಲೆದ್ದು, ಯಾರೂ ತಲುಪಲಾರದಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಇವರು ತಮಿಳಿನಲ್ಲೂ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಒಂದು ದಳಪತಿ ವಿಜಯ್ ಜೊತೆ. ಆ ಎರಡೂ ಸಿನಿಮಾಗಳು ಚೆನ್ನಾಗಿ ಕಲೆಕ್ಷನ್ ಮಾಡಿವೆ.
3 ಪ್ಯಾನ್ ಇಂಡಿಯಾ ಹಿಟ್ ನಟಿ
ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಮಂದಣ್ಣ ಕೈಯಲ್ಲಿ ಅರ್ಧ ಡಜನ್ ಸಿನಿಮಾಗಳಿವೆ. ಹೀಗಾಗಿ ಅವರಿಗೆ ಭಾರೀ ಡಿಮ್ಯಾಂಡ್ ಇದೆ. ಈ ನಟಿ ಮೊದಲ ಸಿನಿಮಾದಲ್ಲೇ ಗೆಲುವು ಕಂಡು, ಆ ಸಿನಿಮಾದ ಹೀರೋನನ್ನೇ ಪ್ರೀತಿಸಿದ ವಿಚಾರ ಎಲ್ಲರಿಗೂ ಗೊತ್ತು.
3000 ಕೋಟಿ ಕಲೆಕ್ಷನ್ ನಟಿ
ಆ ಪ್ರೀತಿ ಸಕ್ಸಸ್ ಆಗಿ, ಮನೆಯವರ ಒಪ್ಪಿಗೆಯೊಂದಿಗೆ ನಿಶ್ಚಿತಾರ್ಥವೂ ಆಯಿತು. ಆದರೆ ಮದುವೆಯಿಂದ ಕೆರಿಯರ್‌ಗೆ ತೊಂದರೆಯಾಗಬಹುದೆಂದು ಮದುವೆಯನ್ನೇ ನಿಲ್ಲಿಸಿಬಿಟ್ಟರು. ಈ ನಿರ್ಧಾರ ಅವರ ಸಿನಿಮಾ ಜೀವನದಲ್ಲಿ ದೊಡ್ಡ ತಿರುವು ನೀಡಿತು. ಈ ಮದುವೆ ಮುರಿದ ಕಾರಣಕ್ಕೆ ಕನ್ನಡಿಗರ ಕಣ್ಣಿಗೆ ವಿಲನ್ ಆದವರು ರಶ್ಮಿಕಾ. ಆದರೆ ರಶ್ಮಿಕಾ ನಿರ್ಧಾರ ಅವರ ಪಾಲಿಗೆ ಸರಿಯಾಗಿಯೇ ಇದ್ದು, ಇಂದು ನಿರ್ದೇಶಕರು ಕ್ಯೂ ನಿಲ್ಲುವಷ್ಟು ಬ್ಯುಸಿಯಾಗಿದ್ದಾರೆ ರಶ್ಮಿಕಾ.
ರಶ್ಮಿಕಾ ಮಂದಣ್ಣ
ಮದುವೆ ಮುರಿದ ನಂತರ ನಟಿಸಿದ ಸಿನಿಮಾಗಳೆಲ್ಲ ಹಿಟ್ ಆಗಿ, ಲಕ್ಕಿ ನಟಿ ಅನ್ನಿಸಿಕೊಂಡ ರಶ್ಮಿಕಾ, ಸತತವಾಗಿ 3 ಪ್ಯಾನ್ ಇಂಡಿಯಾ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಈ ಮೂರು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ 3000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿವೆ.
ಬಾಕ್ಸ್ ಆಫೀಸ್ ರಾಣಿ ರಶ್ಮಿಕಾ
ಈ ಮೂರು ಸಿನಿಮಾಗಳಲ್ಲೂ ರಶ್ಮಿಕಾ ಪಾತ್ರ ಕೇವಲ ಶೇ.20ರಷ್ಟು ಮಾತ್ರ. ಆದರೂ ಜನಮನ ಗೆದ್ದಿದ್ದಾರೆ. 2023 ಮತ್ತು 2024ರಲ್ಲಿ ನಟಿಸಿದ ಈ ಮೂರು ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿವೆ.
ರಶ್ಮಿಕಾ ಹಿಟ್ ಸಿನಿಮಾಗಳು
ರಶ್ಮಿಕಾ ನಟಿಸಿದ ಒಂದು ತಮಿಳು, ಒಂದು ಹಿಂದಿ, ಇನ್ನೊಂದು ತೆಲುಗು ಸಿನಿಮಾ ಹಿಟ್ ಆಗಿದೆ. ವಿಜಯ್ ಜೊತೆ ನಟಿಸಿದ 'ವಾರಿಸು' 310 ಕೋಟಿ, ರಣಬೀರ್ ಕಪೂರ್ ಜೊತೆ ನಟಿಸಿದ 'ಅನಿಮಲ್' 917 ಕೋಟಿ, ಅಲ್ಲು ಅರ್ಜುನ್ ಜೊತೆ ನಟಿಸಿದ 'ಪುಷ್ಪ 2' 1800 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿವೆ.
ರಶ್ಮಿಕಾ ಪ್ಯಾನ್ ಇಂಡಿಯಾ ಸಕ್ಸಸ್
ರಶ್ಮಿಕಾ ನಟಿಸಿದ ಕೊನೆಯ ಮೂರು ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿರೋದ್ರಿಂದ ಅವರು ಬಾಕ್ಸ್ ಆಫೀಸ್ ರಾಣಿಯಾಗಿದ್ದಾರೆ. ಈ ನಡುವೆ ರಶ್ಮಿಕಾ ಮದುವೆ ಸುದ್ದಿ ಆಗಾಗ ಮುನ್ನೆಲೆಗೆ ಬರುತ್ತಿದ್ದು, ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಇದೆ.