MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • 'ಅಮ್ಮ'ನ ಮನೆಗೆ ಶಿಫ್ಟ್ ಆಗ್ತಾರಾ ದಳಪತಿ? ಜಯಲಲಿತಾರ ಪೊಯಸ್ ಗಾರ್ಡನ್ ಬಂಗಲೆಯಲ್ಲಿ ವಿಜಯ್ ರಾಜವೈಭವ ಶುರು?

'ಅಮ್ಮ'ನ ಮನೆಗೆ ಶಿಫ್ಟ್ ಆಗ್ತಾರಾ ದಳಪತಿ? ಜಯಲಲಿತಾರ ಪೊಯಸ್ ಗಾರ್ಡನ್ ಬಂಗಲೆಯಲ್ಲಿ ವಿಜಯ್ ರಾಜವೈಭವ ಶುರು?

ತಮಿಳುನಾಡಿನ ರಾಜಕಾರಣದಲ್ಲಿ 'ಪೋಯಸ್ ಗಾರ್ಡನ್' ಎನ್ನುವ ಹೆಸರಿಗೇ ಒಂದು ತೂಕವಿದೆ. ಅದು ದಿವಂಗತ ಮಾಜಿ ಸಿಎಂ, ತಮಿಳು ಜನರ ಪ್ರೀತಿಯ 'ಅಮ್ಮ' ಜಯಲಲಿತಾ ಅವರು ವಾಸವಿದ್ದ ಶಕ್ತಿ ಕೇಂದ್ರ. ಈಗ ಅದೇ 'ವೇದಾ ನಿಲಯಂ' ಬಂಗಲೆಯನ್ನು ಖರೀದಿ ಮಾಡಲು ಸಿಎಂ ವಿಜಯ್ ಪ್ಲಾನ್ ಮಾಡಿದ್ದಾರಾ? ಈ ಸ್ಟೋರಿ ನೋಡಿ..

2 Min read
Author : Shriram Bhat
Published : Jul 17 2026, 12:01 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

Thalapathy Vijay-J. Jayalalithaa: "ಅಮ್ಮನ ಅರಮನೆಗೆ ದಳಪತಿ ಎಂಟ್ರಿ: 350 ಕೋಟಿಯ ಆ ಬೃಹತ್ ಡೀಲ್ ಹಿಂದಿರುವ ಅಸಲಿ ಕಥೆ ಇಲ್ಲಿದೆ!"

ತಮಿಳುನಾಡು ಅಂದ್ರೆ ಅಲ್ಲಿ ಸಿನಿಮಾ ಮತ್ತು ರಾಜಕೀಯಕ್ಕೆ ಅವಿನಾಭಾವ ಸಂಬಂಧ. ಈಗ ಈ ಎರಡೂ ಕ್ಷೇತ್ರಗಳ 'ಅಧಿಪತಿ'ಯಾಗಿ ಮೆರೆಯುತ್ತಿರೋದು ದಳಪತಿ ವಿಜಯ್ ಜೋಸೆಫ್. ಇಷ್ಟು ದಿನ ಬೆಳ್ಳಿತೆರೆಯ ಮೇಲೆ ಅಬ್ಬರಿಸುತ್ತಿದ್ದ ವಿಜಯ್ (Vijay Joseph), ಈಗ ಸಿಎಂ ಕುರ್ಚಿಯಲ್ಲಿ ಕುಳಿತು ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ. ಇವರ ಆಡಳಿತ ವೈಖರಿ ಕಂಡು ಇಡೀ ದೇಶವೇ ಹುಬ್ಬೇರಿಸಿದೆ. ಆದರೆ, ಈಗ ಸುದ್ದಿಯಾಗುತ್ತಿರೋದು ಅವರ ಆಡಳಿತವಲ್ಲ, ಬದಲಿಗೆ ಅವರು ಮಾಡ ಹೊರಟಿರುವ ಒಂದು 'ಮಾಸ್' ರಿಯಲ್ ಎಸ್ಟೇಟ್ ಡೀಲ್! ಅದು ಮಾಜಿ ಸಿಎಂ ಹಾಗೂ ತಮಿಳಿಗರ ಪ್ರೀತಿಯ 'ಅಮ್ಮ' ಜಯಲಲಿತಾ ಬಂಗಲೆ ಖರೀದಿ ಪ್ರಯತ್ನ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Asianet News

ಪೋಯಸ್ ಗಾರ್ಡನ್‌ನತ್ತ ದಳಪತಿ ಚಿತ್ತ!

ತಮಿಳುನಾಡಿನ ರಾಜಕಾರಣದಲ್ಲಿ 'ಪೋಯಸ್ ಗಾರ್ಡನ್' ಎನ್ನುವ ಹೆಸರಿಗೇ ಒಂದು ತೂಕವಿದೆ. ಅದು ದಿವಂಗತ ಮಾಜಿ ಸಿಎಂ, ತಮಿಳು ಜನರ ಪ್ರೀತಿಯ 'ಅಮ್ಮ' ಜಯಲಲಿತಾ ಅವರು ವಾಸವಿದ್ದ ಶಕ್ತಿ ಕೇಂದ್ರ. ಈಗ ಅದೇ 'ವೇದಾ ನಿಲಯಂ' ಬಂಗಲೆಯನ್ನು ಖರೀದಿ ಮಾಡಲು ಸಿಎಂ ವಿಜಯ್ ಪ್ಲಾನ್ ಮಾಡಿದ್ದಾರೆ ಎಂಬ ಸುದ್ದಿಯಿದೆ. ಹೌದು, ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವವಾಗಿದ್ದ ಜಯಲಲಿತಾ ಅವರ ಮನೆಯನ್ನು ಈಗಿನ 'ದಳಪತಿ' ತನ್ನದಾಗಿಸಿಕೊಳ್ಳಲು ಮುಂದಾಗಿರುವುದು ಕಾಲಿವುಡ್‌ನಿಂದ ಹಿಡಿದು ದಿಲ್ಲಿಯವರೆಗೂ ಸಂಚಲನ ಮೂಡಿಸಿದೆ. ಸುದ್ದಿ ನಿಜವೇ ಆಗಿದ್ದರೆ ಇದು ತಮಿಳುನಾಡಿನಲ್ಲಿ ಭಾರೀ ಸಂಚಲನ ಸೃಷ್ಟಿಸಲಿದೆ.

Related Articles

Related image1
Karuru Stampede Victims: ಕರೂರು ಕಾಲ್ತುಳಿದ ರಹಸ್ಯ ಬಿಚ್ಚಿಟ್ಟ ವಿಜಯ್; 'ಕೊಲೆಗಾರರಿಗೆ ಕ್ಷಮೆಯಿಲ್ಲ' ಎಂದು ಗುಡುಗಿದ ದಳಪತಿ!
Related image2
Viral Trisha Post: ಸಿಎಂ ವಿಜಯ್ ಹುಟ್ಟುಹಬ್ಬಕ್ಕೆ ತ್ರಿಷಾ ಸ್ಪೆಷಲ್ ವಿಶ್; ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ!
36
Image Credit : KVN Productions

ದೂರದ ಪ್ರಯಾಣ.. ಟ್ರಾಫಿಕ್ ಕಿರಿಕಿರಿ!

ಸದ್ಯ ವಿಜಯ್ ಅವರು ಚೆನ್ನೈನ ನೀಲಂಗರೈನಲ್ಲಿರುವ ತಮ್ಮ ಸುಸಜ್ಜಿತ ಮನೆಯಲ್ಲಿ ವಾಸವಿದ್ದಾರೆ. ಆದರೆ, ಅಲ್ಲಿಂದ ಪ್ರತಿದಿನ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಬರಬೇಕೆಂದರೆ ಬರೋಬ್ಬರಿ 17 ಕಿಲೋಮೀಟರ್ ದೂರ ಪ್ರಯಾಣಿಸಬೇಕು. ಸಿಎಂ ಕಾರು ಸಾಲು ಬಂತೆಂದರೆ ಸಾಕು, ಟ್ರಾಫಿಕ್ ಜಾಮ್ ಆಗುವುದು ಸಹಜ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ವಿಜಯ್ ಅವರು ನಗರದ ಹೃದಯಭಾಗದಲ್ಲಿರುವ ಪೋಯಸ್ ಗಾರ್ಡನ್‌ಗೆ ಶಿಫ್ಟ್ ಆಗಲು ನಿರ್ಧರಿಸಿದ್ದಾರಂತೆ. ಆದರೆ, ಆ ಮನೆಯ ಡೀಲ್ ಇನ್ನೂ ಕಂಪ್ಲೀಟ್ ಆಗಿಲ್ಲ, ಮಾತುಕತೆ ಹಂತದಲ್ಲೇ ಇದೆ ಎನ್ನಲಾಗುತ್ತಿದೆ.

46
Image Credit : Instagram

350 ಕೋಟಿಯ ಬೃಹತ್ ಡೀಲ್!

ಜಯಲಲಿತಾ ಅವರ ನಿಧನದ ನಂತರ ಈ ಬಂಗಲೆಯ ವಾರಸುದಾರರ ಬಗ್ಗೆ ದೊಡ್ಡ ಕಾನೂನು ಹೋರಾಟವೇ ನಡೆದಿತ್ತು. ಸದ್ಯ ಈ ಮನೆಯ ಮಾಲೀಕತ್ವ ಜಯಲಲಿತಾ ಅವರ ಅಣ್ಣನ ಮಗಳು ಜೆ. ದೀಪಾ ಅವರ ಕೈಯಲ್ಲಿದೆ. ಮೂಲಗಳ ಪ್ರಕಾರ, ವಿಜಯ್ ಅವರ ತಂಡ ಈಗಾಗಲೇ ದೀಪಾ ಅವರ ಜೊತೆ ಮಾತುಕತೆ ಆರಂಭಿಸಿದೆ. ಈ ಐತಿಹಾಸಿಕ ಬಂಗಲೆಯ ಸದ್ಯದ ಮಾರುಕಟ್ಟೆ ಮೌಲ್ಯ ಸರಿಸುಮಾರು 350 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಈ ಡೀಲ್ ಕುದುರಿದರೆ, ವಿಜಯ್ ಅವರು ರಜನಿಕಾಂತ್ ಮತ್ತು ಧನುಷ್ ಅವರ ನೆರೆಹೊರೆಯವರಾಗಲಿದ್ದಾರೆ. ಜಯಲಲಿತಾ ಮನೆಯಲ್ಲಿ ಹಾಲಿ ಸಿಎಂ ಇರಲಿದ್ದಾರೆ.

56
Image Credit : Asianet News

ಪವರ್ ಸೆಂಟರ್ ಆಗುತ್ತಾ ವೇದಾ ನಿಲಯಂ?

ಜಯಲಲಿತಾ ಬದುಕಿದ್ದಾಗ ಪೋಯಸ್ ಗಾರ್ಡನ್ ಕೇವಲ ಮನೆಯಾಗಿರಲಿಲ್ಲ, ಅದು ಇಡೀ ತಮಿಳುನಾಡಿನ ಪವರ್ ಸೆಂಟರ್ ಆಗಿತ್ತು. ಈಗ ವಿಜಯ್ ಅಲ್ಲಿಗೆ ಹೋದರೆ, ಮತ್ತೆ ಆ ಮನೆಗೆ ರಾಜಕೀಯ ಮೆರುಗು ಬರಲಿದೆ. ಒಂದು ವೇಳೆ ಈ ಖರೀದಿ ಪ್ರಕ್ರಿಯೆ ವಿಫಲವಾದರೆ, ವಿಜಯ್ ಅವರು ಪಟ್ಟಿನಪಾಕಂನಲ್ಲಿರುವ ತಮ್ಮದೇ ಸ್ವಂತ ಜಾಗದಲ್ಲಿ ಮನೆ ಕಟ್ಟಬಹುದು ಅಥವಾ ಸರ್ಕಾರಿ ಬಂಗಲೆಗೆ ವಾಸ್ತವ್ಯ ಬದಲಿಸಬಹುದು ಎನ್ನಲಾಗುತ್ತಿದೆ. ಸದ್ಯಕ್ಕೆ ಯಾವುದೇ ಸುದ್ದಿ ನಿರ್ಧಾರದ ಹಂತ ತಲುಪಿಲ್ಲ ಎನ್ನಲಾಗುತ್ತಿದೆ.

66
Image Credit : Asianet News

ಒಟ್ಟಿನಲ್ಲಿ, ದಳಪತಿ ವಿಜಯ್ ಅವರ ಈ 'ಮನೆ'ಯ ಸುದ್ದಿ ಈಗ ತಮಿಳುನಾಡಿನಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಅಮ್ಮನ ಅರಮನೆಯಲ್ಲಿ ದಳಪತಿ ರಾಜವೈಭವ ಶುರುವಾಗುತ್ತಾ? ಕಾದು ನೋಡಬೇಕು!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ದಳಪತಿ ವಿಜಯ್
ತಮಿಳುನಾಡು
ರಾಜಕೀಯ ಸುದ್ದಿ
ಮನರಂಜನಾ ಸುದ್ದಿ

Latest Videos
Recommended Stories
Recommended image1
Namitha Weight Loss: ಅದೊಂದು ಸೀಕ್ರೆಟ್‌ನಿಂದಲೇ ಅವಳಿ ಮಕ್ಕಳನ್ನು ಹೆತ್ತ ಬಳಿಕವೂ ಬಳುಕುವ ಬಳ್ಳಿಯಂತಾದ ನಟಿ ನಮಿತಾ
Recommended image2
'ಇದು ನನ್ನ ಕೊನೆಯ ಸಿನಿಮಾ ನಿರ್ಮಾಣ'... ಡಾಲಿ ಧನಂಜಯ ಹೀಗೆ ಹೇಳಿದ್ದೇಕೆ?
Recommended image3
ಸಿನಿಮಾದಲ್ಲಿ ಕುಳ್ಳಗಿರುವ ಹೀರೋಗಳು ಎತ್ತರವಾಗಿ ಕಾಣೋದು ಹೇಗೆ? ಈ ರಹಸ್ಯ ಗೊತ್ತಾ?
Related Stories
Recommended image1
Karuru Stampede Victims: ಕರೂರು ಕಾಲ್ತುಳಿದ ರಹಸ್ಯ ಬಿಚ್ಚಿಟ್ಟ ವಿಜಯ್; 'ಕೊಲೆಗಾರರಿಗೆ ಕ್ಷಮೆಯಿಲ್ಲ' ಎಂದು ಗುಡುಗಿದ ದಳಪತಿ!
Recommended image2
Viral Trisha Post: ಸಿಎಂ ವಿಜಯ್ ಹುಟ್ಟುಹಬ್ಬಕ್ಕೆ ತ್ರಿಷಾ ಸ್ಪೆಷಲ್ ವಿಶ್; ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved