ಆಲಿಯಾ -ರಣಬೀರ್, ದೀಪಿಕಾ- ರಣವೀರ್; ಬಾಲಿವುಡ್‌ನ ಫೇಮಸ್ ಕಪಲ್ ಬಾಲ್ಯದ ಫೋಟೋಸ್
ನವೆಂಬರ್ 14 ರಂದು ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ, ಬಾಲಿವುಡ್ (Bollywood) ಸೂಪರ್‌ಸ್ಟಾರ್‌ಗಳು ಮತ್ತು ಬಾಲಿವುಡ್‌ನ ಫೇಮಸ್ ಕಪಲ್‌ಗಳ ಬಾಲ್ಯದ ಫೋಟೋಗಳು ಇಂಟರೆನೆಟ್‌ನಲ್ಲಿ ಸಖತ್ ವೈರಲ್ ಆಗಿವೆ. ಶಾರುಖ್ ಖಾನ್‌ನಿಂದ ಹಿಡಿದು ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಸೇರಿ ಆಲಿಯಾ ರಣಬೀರ್, ದೀಪಿಕಾ- ರಣವೀರ್, ಕತ್ರಿನಾ- ವಿಕ್ಕಿ ಅವರ ಬಾಲ್ಯದ ಫೋಟೋಗಳು ಇಲ್ಲಿವೆ.
ಈ ಫೋಟೋದಲ್ಲಿ ಸಹೋದರ ಮತ್ತು ಸಹೋದರಿಯೊಂದಿಗೆ ನಿಂತಿರುವ ಸೂಪರ್‌ಸ್ಟಾರ್ ಯಾರು ಎಂದು ಗುರುತಿಸಲು ಸಾಧ್ಯವಾ ? ಇದರಲ್ಲಿ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರರಾದ ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಅವರೊಂದಿಗೆ ಇದ್ದಾರೆ.
ಈ ಫೋಟೋಗಳು ಬಾಲಿವುಡ್‌ನ ಮೊಸ್ಟ್ ಪವರ್‌ಫುಲ್ ಕಪಲ್ ಎಂದು ಪರಿಗಣಿಸಲಾಗುವ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರದ್ದಾಗಿದೆ. ಇಬ್ಬರೂ ಬಾಲ್ಯದಲ್ಲಿ ತುಂಬಾ ಮುದ್ದಾಗಿದ್ದರು.
ಈ ಫೋಟೋದಲ್ಲಿರುವ ಬಾಲಿವುಡ್‌ನ ಕಿಂಗ್ ಶಾರುಖ್ ಖಾನ್ ಅವರನ್ನು ಯಾರೂ ಗುರುತಿಸಲು ಸಾಧ್ಯವಿಲ್ಲ. ಶಾರುಖ್ ಬಾಲ್ಯದಲ್ಲಿ ಕೂಡ ಸಖತ್ ಕ್ಯೂಟ್ ಆಗಿ ಕಾಣುತ್ತಿದ್ದರು.
ವಿಕ್ಕಿ ಕೌಶಲ್ ಮತ್ತು ಅವರ ಪತ್ನಿ ಕತ್ರಿನಾ ಕೈಫ್ ಅವರ ಬಾಲ್ಯದ ಫೋಟೋಗಳು ಇಲ್ಲಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಬಾಲ್ಯದಲ್ಲಿ ವಿಕ್ಕಿ ಮುದ್ದಾಗಿ ಕಾಣುತ್ತಿದ್ದರೆ, ಕತ್ರಿನಾ ಗೊಂಬೆಯಂತೆ ಇದ್ದರು.
ಈ ಫೋಟೋದಲ್ಲಿರುವ ಪುಣಾಣಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆಯನ್ನು ಗುರುತಿಸುವುದು ಕಷ್ಟವಾಗಬಹುದು. ರಣವೀರ್ ಅವರನ್ನು ಸ್ವಲ್ಪಮಟ್ಟಿಗೆ ಗುರುತಿಸಬಹುದಾದರೂ, ಬೇಬಿ ದೀಪಿಕಾರನ್ನು ಗುರುತಿಸಲು ಸಾಧ್ಯವಿಲ್ಲ.
ಈ ಫೋಟೋದಲ್ಲಿರುವ ಮಗು ಯಾರು ಎಂದು ಗೆಸ್ ಮಾಡಲು ಸಾಧ್ಯವೇ? ಇದು ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಪೋಟೋ. ಇತ್ತೀಚಿನ ದಿನಗಳಲ್ಲಿ ತಮ್ಮ ಚಲನಚಿತ್ರಗಳಿಗಾಗಿ ಹೆಡ್‌ಲೈನ್‌ಗಳಲ್ಲಿದ್ದಾರೆ ಅಕ್ಷಯ್.
ಇದು ಬಾಲಿವುಡ್‌ನ ಮೋಸ್ಟ್ ಅಡರೋಬಲ್ ಕಪಲ್ ಕಾಜೋಲ್ ಮತ್ತು ಅಜಯ್ ದೇವಗನ್ ಅವರ ಫೋಟೋ. ಕಾಜೋಲ್ ತಮ್ಮ ಬಾಲ್ಯದಲ್ಲಿ ತುಂಬಾ ಚೇಷ್ಟೆ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ, ಅಜಯ್ ಬಾಲ್ಯದಿಂದಲೂ ಅಪಾಯಗಳ ಜೊತೆ ಆಟವಾಡಲುಇಷ್ಟಪಡುತ್ತಿದ್ದರು.
ಈ ಫೋಟೋಗಳು ಬಾಲಿವುಡ್‌ನ ಲವ್ಲಿ ಕಪಲ್‌ಗಳಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಆಗಿವೆ. ಈ ದಂಪತಿಗಳು ಇತ್ತೀಚೆಗಷ್ಟೇ ಮಗಳ ಪೋಷಕರಾದರು.
ಈ ಫೋಟೋದಲ್ಲಿರುವ ಬಾಲಕ ಯಾವ ಸ್ಟಾರ್ ಎಂದು ತಿಳಿಯಿತೇ. ಈ ಮಗು ನವಾಬರ ಕುಟುಂಬಕ್ಕೆ ಸೇರಿದ ಸೈಫ್ ಅಲಿ ಖಾನ್. ಸೈಫ್ ಬಾಲ್ಯದಲ್ಲಿ ತುಂಬಾ ಚೇಷ್ಟೆ ಮಾಡುತ್ತಿದ್ದರಂತೆ.
ಹೃತಿಕ್ ರೋಷನ್ ಅವರನ್ನು ಗುರುತಿಸುವುದು ಕಷ್ಟವಿಲ್ಲ. ಹೃತಿಕ್ ತಮ್ಮ ಬಾಲ್ಯದ್ಲಲೂ ತುಂಬಾ ಮುದ್ದಾಗಿದ್ದರು ಮತ್ತು ಅವರು ಕೆಲವು ಸಿನಿಮಾಗಳಲ್ಲಿ ಬಾಲ ಕಲಾವಿದನ ಪಾತ್ರವನ್ನು ಸಹ ಮಾಡಿದ್ದಾರೆ.