- Home
- Entertainment
- Cine World
- Celebrities Love Lives: ಒಂದಲ್ಲ ಎರಡಲ್ಲ ಮೂರು ಮದುವೆ ಸೆಲೆಬ್ರಿಟಿಗಳಿಗೆ ಕಾಮನ್, 70ನೇ ವಯಸ್ಸಿನಲ್ಲಿ ನಾಲ್ಕನೇ ಮದುವೆ ಆದವರ್ಯಾರು ಗೊತ್ತಾ?
Celebrities Love Lives: ಒಂದಲ್ಲ ಎರಡಲ್ಲ ಮೂರು ಮದುವೆ ಸೆಲೆಬ್ರಿಟಿಗಳಿಗೆ ಕಾಮನ್, 70ನೇ ವಯಸ್ಸಿನಲ್ಲಿ ನಾಲ್ಕನೇ ಮದುವೆ ಆದವರ್ಯಾರು ಗೊತ್ತಾ?
ಒಂದು ಮದುವೆ ಆದವರು ಅಪ್ಪಿತಪ್ಪಿಯೂ ಎರಡನೇ ಮದುವೆ ಆಗೋದಿಲ್ಲ ಎನ್ನುವ ಮಾತೊಂದಿದೆ. ಆದ್ರೆ ಕೆಲ ಸೆಲೆಬ್ರಿಟಿಗಳು ಒಂದು- ಎರಡು ಅಲ್ಲ, ಬರೋಬ್ಬರಿ ಮೂರು ಮದುವೆ ಆಗಿ ಲೈಫ್ ಕಲರ್ ಫುಲ್ ಮಾಡ್ಕೊಂಡಿದ್ದಾರೆ.

ಅಮೀರ್ ಖಾನ್
ಈಗಿನ ಕಾಲದಲ್ಲಿ ಒಂದು ಮದುವೆ ಆಗೋದೇ ಕಷ್ಟ. ಹಾಗಿರುವಾಗ ಈ ಸೆಲೆಬ್ರಿಟಿಗಳು ಎರಡು- ಮೂರು ಮದುವೆ ಆಗ್ತಿದ್ದಾರೆ. ಸದ್ಯ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಶೀಘ್ರದಲ್ಲೇ ಗೌರಿ ಅವರನ್ನು ಮದುವೆ ಆಗ್ತಿದ್ದಾರೆ. ಜುಲೈ 5 ರಂದು ಅವರ ಮದುವೆ ನಡೆಯಲಿದೆ. ಎಲ್ಲರಿಗೂ ಗೊತ್ತಿರೋ ಹಾಗೆ ಇದು ಅವರ ಮೂರನೇ ಮದುವೆ.
ಶೋಯಬ್ ಮಲಿಕ್
ಕ್ರಿಕೆಟ್ ಮೈದಾನದಲ್ಲಿ ಛಾಪು ಮೂಡಿಸಿದ ಶೋಯಬ್ ಮಲಿಕ್ ಮದುವೆ ವಿಷ್ಯದಲ್ಲೂ ಹಿಂದೆ ಬಿದ್ದಿಲ್ಲ. ಅವರ ಮ್ಯಾರೇಜ್ ಸ್ಟೋರಿ ಇಂಟರೆಸ್ಟಿಂಗ್ ಆಗಿದೆ. ಅವರು ಮೊದಲು ಆಯೇಷಾ ಸಿದ್ದಿಕಿ ಅವರನ್ನು ಮದುವೆ ಆಗಿದ್ರು. ನಂತ್ರ ಸಾನಿಯಾ ಮಿರ್ಜಾ ಕೈ ಹಿಡಿದ್ರು. 2024 ರಲ್ಲಿ, ಶೋಯಬ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಮದುವೆ ಆಗಿದ್ದಾರೆ.
ಕರಣ್ ಸಿಂಗ್ ಗ್ರೋವರ್
ಈ ಪಟ್ಟಿಯಲ್ಲಿ ಕರಣ್ ಸಿಂಗ್ ಗ್ರೋವರ್ ಸೇರಿದ್ದಾರೆ. ಇವರ ಮೊದಲ ಹೆಂಡ್ತಿ ಹೆಸರು ಶ್ರದ್ಧಾ ನಿಗಮ್. ಎರಡನೇ ಪತ್ನಿ ಹೆಸರು ಜೆನ್ನಿಫರ್ ವಿಂಗೆಟ್. ಇವರಿಬ್ಬರ ಮಧ್ಯೆ ಸಂಬಂಧ ಹೆಚ್ಚು ಸಮಯ ಉಳಿಯಲಿಲ್ಲ. ಕರಣ್ ಕೊನೆಯದಾಗಿ ನಟಿ ಬಿಪಾಶಾ ಬಸು ಅವರನ್ನು ಮದುವೆ ಆಗಿ, ಸುಖ ಸಂಸಾರ ನಡೆಸುತ್ತಿದ್ದಾರೆ. ಇಬ್ಬರೂ 2016 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಿಮ್ ಕಾರ್ಡಶಿಯಾನ್
ಉದ್ಯಮಿ ಮತ್ತು ರಿಯಾಲಿಟಿ ಟಿವಿ ತಾರೆ ಕಿಮ್ ಕಾರ್ಡಶಿಯಾನ್ ವೈಯಕ್ತಿಕ ಜೀವನ ಚರ್ಚೆಯಲ್ಲಿದೆ. ಅವರು ಮೊದಲು ಡ್ಯಾಮನ್ ಥಾಮಸ್ ಅವರನ್ನು ಮದುವೆ ಆಗಿದ್ರು. ನಂತ್ರ ಕ್ರಿಸ್ ಹಂಫ್ರೀಸ್ ಜೊತೆ ಸಂಸಾರ ನಡೆಸಿದ್ರು. ಅದು ಕೂಡ ತುಂಬಾ ದಿನ ಉಳಿಯಲಿಲ್ಲ. ಕಿಮ್ ಮೂರನೇ ಮದುವೆ ಆಗಿದ್ದು ಕಾನ್ಯೆ ವೆಸ್ಟ್ ಜೊತೆ. ಅವರಿಬ್ಬರು ನಾಲ್ಕು ಮಕ್ಕಳ ಪಾಲಕರಾಗಿದ್ದಾರೆ.
ಸಂಜಯ್ ದತ್
ಮುನ್ನಾಭಾಯಿ ಸಂಜಯ್ ದತ್ ವೈಯಕ್ತಿಕ ಜೀವನ ಈಗಾಗಲೇ ತೆರೆ ಮೇಲೆ ಬಂದಿದೆ. ಸಂಜಯ್ ದತ್ ಮೊದಲು ರಿಚಾ ಶರ್ಮಾ ಕೈ ಹಿಡಿದಿದ್ದರು. ನಂತ್ರ ರಿಯಾ ಪಿಳ್ಳೈ ಜೊತೆ ದಾಂಪತ್ಯ ಜೀವನ ಶುರು ಮಾಡಿದ್ದರು. ಎರಡೂ ಸಂಬಂಧ ಮುರಿದು ಬಿದ್ಮೇಲೆ 2008 ರಲ್ಲಿ, ಸಂಜಯ್ ಮಾನ್ಯತಾ ದತ್ ಮದುವೆ ಆದ್ರು. ಇಬ್ಬರೂ ಹಲವು ವರ್ಷಗಳಿಂದ ಒಟ್ಟಿಗಿದ್ದಾರೆ.
ಸಿದ್ಧಾರ್ಥ್ ರಾಯ್ ಕಪೂರ್
ಸಿನಿಮಾ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಕೂಡ ಮೂರು ಮದುವೆ ಆಗಿದ್ದಾರೆ. ಅವರ ಮೊದಲ ಎರಡು ಮದುವೆ ಬಗ್ಗೆ ಜನರಿಗೆ ಹೆಚ್ಚು ಮಾಹಿತಿ ಇಲ್ಲ. ಇಬ್ಬರು ಪತ್ನಿಯರು ಮೀಡಿಯಾದಿಂದ ದೂರ ಇದ್ರು. ಸಿದ್ದಾರ್ಥ್ ರಾಯ್ ಕಪೂರ್ ಈಗ ನಟಿ ವಿದ್ಯಾ ಬಾಲನ್ ಅವರೊಂದಿಗೆ ಮೂರನೇ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ.
ಕಬೀರ್ ಬೇಡಿ
ಕಬೀರ್ ಬೇಡಿ ಅವರ ಲವ್ ಸ್ಟೋರಿ ಸಿನಿಮಾಗಿಂತ ಕಡಿಮೆ ಏನಿಲ್ಲ. ಅವರು ಬರೀ ಮೂರನೇ ಬಾರಿ ಅಲ್ಲ ನಾಲ್ಕು ಬಾರಿ ಮದುವೆ ಆಗಿದ್ದಾರೆ. ಅವರ ಮೊದಲ ಮದುವೆ ಪ್ರೊತಿಮಾ ಬೇಡಿ ಜೊತೆ ನಡೆದಿತ್ತು. ನಂತರ ಅವರು ಸುಜೇನ್ ಹಂಫ್ರೀಸ್ ಮತ್ತು ನಿಕ್ಕಿ ಬೇಡಿ ಅವರನ್ನು ಮದುವೆ ಆದ್ರು. ಆದ್ರೆ ಈ ಸಂಬಂಧಗಳು ಹೆಚ್ಚು ಕಾಲ ಉಳಿಯಲಿಲ್ಲ. ಇಷ್ಟಕ್ಕೆ ಕಬೀರ್ ಬೇಡಿ ಸುಮ್ಮನಾಗ್ಲಿಲ್ಲ. ಅವರು 70 ನೇ ವಯಸ್ಸಿನಲ್ಲಿ, ಕಬೀರ್ ಬೇಡಿ ನಾಲ್ಕನೇ ಬಾರಿಗೆ ಪರ್ವೀನ್ ದೋಸಾಂಜ್ ಅವರನ್ನು ಮದುವೆ ಆಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

