MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Boman Irani: ಅಂದು ಹೋಟಲ್‌ ಮಾಣಿ ಇಂದು ಫೇಮಸ್‌ ನಟ

Boman Irani: ಅಂದು ಹೋಟಲ್‌ ಮಾಣಿ ಇಂದು ಫೇಮಸ್‌ ನಟ

 '3 ಈಡಿಯಟ್ಸ್'  (3 Idiots) ಸಿನಿಮಾದ  'ವೈರಸ್' ಹಾಗೂ  'ಮುನ್ನಾಭಾಯಿ ಎಂಬಿಬಿಎಸ್'ನ (Munnabhai MBBS) ಡಾಕ್ಟರ್‌ ಅಸ್ಥಾನಾ ಪಾತ್ರಗಳು ಯಾವಾಗಲೂ ಜನರ ಮನದಲ್ಲಿ ಉಳಿಯುವಂತೆ ಮಾಡಿದ ಬೋಮನ್ ಇರಾನಿ (Boman Irani) ಬಾಲಿವುಡ್‌ನ (Bollywood) ಫೇಮಸ್‌ ಹಾಗೂ ಟ್ಯಾಲೆಂಟೆಡ್‌ ನಟರಲ್ಲಿ ಒಬ್ಬರು. ತನ್ನ ಪಾತ್ರದಿಂದ ಜನರನ್ನು ನಗಿಸುವ ಯಾವುದೇ ಪಾತ್ರದಲ್ಲಿ ತನ್ನನ್ನು ತಾನು ರೂಪಿಸಿಕೊಳ್ಳುವ ಅದ್ಭುತ ಕಲಾವಿದ ಇವರು.  2 ಡಿಸೆಂಬರ್ 1959 ರಂದು ಮಹಾರಾಷ್ಟ್ರದಲ್ಲಿ ಜನಿಸಿದಬೋಮನ್ ಇರಾನಿ ಬಾಲಿವುಡ್‌ಗೆ ಪ್ರವೇಶಿಸಿದಾಗ ಎಷ್ಟು ವರ್ಷ ಗೊತ್ತಾ? ಈ ನಟನ ಜೀವನದ ಕೆಲವು ಇಂಟರೆಸ್ಟಿಂಗ್‌ ಘಟನೆಗಳನ್ನು ಇಲ್ಲಿವೆ

2 Min read
Suvarna News
Published : Dec 02 2021, 10:54 PM IST| Updated : Dec 02 2021, 11:02 PM IST
Share this Photo Gallery
  • FB
  • TW
  • Linkdin
  • Whatsapp
18

ಬೊಮನ್ ಇರಾನಿ ಯಶಸ್ವಿ ನಟರಲ್ಲಿ ಒಬ್ಬರು. ಆದರೆ ಸಿನಿಮಾ ಜಗತ್ತಿಗೆ ಬರುವ ಮುನ್ನ ಹೋಟೆಲ್ ಒಂದರಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಮುಂಬೈನ ತಾಜ್ ಹೋಟೆಲ್‌ನಲ್ಲಿ 2 ವರ್ಷಗಳ ಕಾಲ ವೇಟರ್‌ ಮತ್ತು ರೂಮ್‌ ಸರ್ವೀಸ್‌ ಸಿಬ್ಬಂದಿಯಾಗಿ ಕೆಲಸ ಮಾಡಿದರು

28
Nawazuddin SiddiquiNawazuddin was a farmer who also had worked as a watchman before he came into acting. His father was also a farmer and he had a lot of struggle in his life. Then he came into movies and brought relief to his family.

Nawazuddin SiddiquiNawazuddin was a farmer who also had worked as a watchman before he came into acting. His father was also a farmer and he had a lot of struggle in his life. Then he came into movies and brought relief to his family.

ಇದಾದ ನಂತರ ಬೋಮನ್ ತನ್ನ ಕೆಲಸವನ್ನು ತೊರೆದು ತನ್ನ ಕುಟುಂಬದೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದನು. ಬೊಮನ್ ತನ್ನ ತಾಯಿಯೊಂದಿಗೆ 14 ವರ್ಷಗಳ ಕಾಲ ಬೇಕರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ವ್ಯಕ್ತಿಯ ಹಣೆಬರಹ ಯಾವಾಗ ಬದಲಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ ಎನ್ನುವುದಕ್ಕೆ ಬೊಮನ್ ಇರಾನಿ ಉತ್ತಮ ಉದಾಹರಣೆ. 

38

ಒಂದು ದಿನ ಅವರು ನೃತ್ಯ ನಿರ್ದೇಶಕ ಶ್ಯಾಮಕ್ ದಾವರ್ ಅವರನ್ನು ಭೇಟಿಯಾದರು. ಇಲ್ಲಿಂದ ಅವರ ಅದೃಷ್ಟ ತಿರುಗಿತು. ಶ್ಯಾಮಕ್  ದಾವರ್ ಅವರ ಆಜ್ಞೆಯ ಮೇರೆಗೆ ಅವರು ರಂಗ ಭೂಮಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. 

48

ಇಲ್ಲಿ ಅವರ ಅತ್ಯುತ್ತಮ ಅಭಿನಯದ ಚರ್ಚೆ ಎಲ್ಲೆಡೆ ಶುರುವಾಯಿತು. ಅವರು 2001 ರಲ್ಲಿ ಎರಡು ಇಂಗ್ಲಿಷ್ ಚಲನಚಿತ್ರಗಳನ್ನು ಪಡೆದರು. ಅವರು 'ಎವೆರಿಬಡಿ ಸೇಸ್ ಐ ಆಮ್ ಫೈನ್' ಮತ್ತು 'ಲೆಟ್ಸ್ ಟಾಕ್' ನಲ್ಲಿ ಕೆಲಸ ಮಾಡುವ ಮೂಲಕ ಗಮನ ಸೆಳೆದರು

58

ಮಹಾರಾಷ್ಟ್ರದಲ್ಲಿ ಜನಿಸಿದ ಬೊಮನ್ ಇರಾನಿ ತಮ್ಮ 42 ನೇ ವಯಸ್ಸಿನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರು ಆರಂಭಿಕ ಹಂತದಲ್ಲಿ ಜೋಶ್, ದರ್ನಾ ಮನ ಹೈನಲ್ಲಿ ಕೆಲಸ ಮಾಡಿದರು. ಆದರೆ ನಿಜವಾದ ಬ್ರೇಕ್‌  2003 ರ ಮುನ್ನಾ ಭಾಯ್ ಎಂಬಿಬಿಎಸ್ ಸಿನಿಮಾದ ಮೂಲಕ ದೊರೆಕಿತು. ಈ ಚಿತ್ರದಲ್ಲಿ, ಡಾ. ಅಸ್ಥಾನಾ ಪಾತ್ರವನ್ನು ಜನರು ಇಂದಿಗೂ ಮೆರೆತಿಲ್ಲ.

68

ಇದಾದ ನಂತರ ಬೊಮನ್ ಹಿಂತಿರುಗಿ ನೋಡಲಿಲ್ಲ. ಒಂದರ ಹಿಂದೆ ಒಂದರಂತೆ ಹಲವು ಚಿತ್ರಗಳು ಅವರಿಗೆ ಒಲಿಯಿತು. 'ಲಕ್ಷ್ಯ', 'ವೀರ್-ಜಾರಾ', 'ಪೇಜ್-3', 'ನೋ ಎಂಟ್ರಿ' ಹೀಗೆ ಹಲವು ಚಿತ್ರಗಳನ್ನು ಮಾಡಿದ ನಂತರ ಮತ್ತೊಮ್ಮೆ '3 ಈಡಿಯಟ್ಸ್' ಸಿನಿಮಾದ  ಮೂಲಕ ನಟನೆಯ ಹೊಸ ಎತ್ತರವನ್ನು ಮುಟ್ಟಿದರು. ಇದರಲ್ಲಿ ವೈರಸ್ ಹೆಸರಿನ ಅವರ ಪಾತ್ರವನ್ನು ಹೆಚ್ಚು ಪ್ರಶಂಸಿಸಲಾಯಿತು. 

78

42 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬೊಮನ್, ಇದುವರೆಗೆ 50 ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ. ಮುನ್ನಾ ಭಾಯಿ ಎಂಬಿಬಿಎಸ್‌ಗಾಗಿ ಫಿಲ್ಮ್‌ಫೇರ್‌ನಿಂದ ಬೊಮನ್ ಅತ್ಯುತ್ತಮ ಹಾಸ್ಯನಟ ಎಂದು ನಾಮನಿರ್ದೇಶನಗೊಂಡರು. ಅವರು 2010 ರಲ್ಲಿ ಸ್ಟಾರ್ ಸ್ಕ್ರೀನ್‌ನ ಅತ್ಯುತ್ತಮ ಖಳನಾಯಕ ಪ್ರಶಸ್ತಿಯನ್ನು ಗೆದ್ದರು.

 
 

88

ನಟನೆಯ ಹೊರತಾಗಿ ಬೊಮನ್ ಛಾಯಾಗ್ರಹಣದ ಬಗ್ಗೆ ಒಲವು ಹೊಂದಿದ್ದಾರೆ. ಶಾಲಾ ದಿನಗಳಲ್ಲಿ ಕ್ರಿಕೆಟ್ ಪಂದ್ಯಗಳ ಫೋಟೋ ತೆಗೆಯುತ್ತಿದ್ದರು. ಇದಾದ ನಂತರ ಪುಣೆಯಲ್ಲಿ ನಡೆದ ಬೈಕ್ ರೇಸ್ ಗೆ ವೃತ್ತಿಪರವಾಗಿ ಮೊದಲ ಬಾರಿಗೆ ಛಾಯಾಗ್ರಹಣ ಮಾಡಿದರು. ಇದಾದ ನಂತರ ಮುಂಬೈನಲ್ಲಿ ನಡೆದ ಬಾಕ್ಸಿಂಗ್ ವಿಶ್ವಕಪ್‌ನಲ್ಲಿ ಸಹ  ಫೋಟೋಗ್ರಾಫರ್‌ ಆಗಿದ್ದರು.

About the Author

SN
Suvarna News
ಬಾಲಿವುಡ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved