ಚತ್ರದ ಚಿತ್ರೀಕರಣ ಶುರುವಾಗಿದ್ದು, ಚಿತ್ರದ ಸಾಹಸ ಸಂಯೋಜನೆ ನಿರ್ದೇಶನಕ್ಕೆ ತೆಲುಗಿನಿಂದ ರಾಮ್ ಲಕ್ಷ್ಮಣ್ ಬರುವುದು ಖಚಿತವಾಗಿದೆ. ಈ ನಡುವೆ ಚಿತ್ರದಲ್ಲೊಂದು ಮುಖ್ಯ ಪಾತ್ರವಿದ್ದು, ಅದನ್ನು ನಿರ್ದೇಶಕರು ಬೊಮನ್ ಇರಾನಿ ಅವರಿಂದ ಮಾಡಿಸಲಿದ್ದಾರೆಂಬ ಸುದ್ದಿ ಬಂದಿದೆ.

ಆದರೆ, ಚಿತ್ರತಂಡದ ಇದನ್ನು ಅಧಿಕೃತವಾಗಿ ಹೇಳುತ್ತಿಲ್ಲ. ಇನ್ನೂ ‘ರಾಜಕುಮಾರ’ ಚಿತ್ರದ ನಂತರ ವಿಜಯ್ ಕಿರಗಂದೂರು ಬ್ಯಾನರ್‌ನಲ್ಲಿ ಸಂತೋಷ್ ಆನಂದ್‌ರಾಮ್ ನಿರ್ದೇಶಿಸುತ್ತಿರುವ ಚಿತ್ರ ಇದಾಗಿದ್ದು, ‘ಯುವರತ್ನ’ ಕೂಡ ಹಿಂದಿನ ಚಿತ್ರದಷ್ಟೆ ದೊಡ್ಡ ಮಟ್ಟದಲ್ಲಿ ಗೆಲ್ಲಿಸಬೇಕೆಂಬ ಯೋಜನೆ ಹಾಕಿಕೊಂಡಿದ್ದಾರೆ.