Asianet Suvarna News Asianet Suvarna News

ಬೊಮನ್ ಇರಾನಿ ಅವರ ಹನಿಮೂನ್ ಆಗಿದ್ದು ಎಲ್ಲಿ ಗೊತ್ತೆ ? ಅವರೇ ಹೇಳಿದ ಸತ್ಯ

ತ್ರೀ ಈಡಿಯಟ್ಸ್ ಚಿತ್ರದಲ್ಲಿ ಚಿತ್ರರಸಿರನ್ನು ರಂಜಿಸಿದ್ದ ‘ವೈರಸ್’ ಬೊಮನ್ ಇರಾನಿ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ರಂಗಭೂಮಿಯ ಹಿನ್ನೆಲೆಯಿಂದ ಬಂದು ಬಾಲಿವುಡ್‌ನಲ್ಲಿ ವಿಶಿಷ್ಟ ಮೈಲುಗಲ್ಲನ್ನು ನೆಟ್ಟ ಕೆಲವೇ ಕೆಲವು ನಟರಲ್ಲಿ ಬೊಮನ್ ಒಬ್ಬರು. ಕ್ಯಾಮೆರಾ ಹಿಡಿದು ಆಟೋಗ್ರಾರ್ ಆಗಲು ಬಂದವರು, ಕ್ಯಾಮೆರಾದ ಮುಂದೆ ನಿಂತು ನಟ ಆಗಿಬಿಟ್ಟರು! ಪೋಷಕ ನಟನಾಗಿ, ಹಾಸ್ಯ ಕಲಾವಿದನಾಗಿ, ವಿಲನ್ ಆಗಿ ವಿಭಿನ್ನ ಅವತಾರ ತಾಳಿರುವ ಬೊಮನ್ ಬಗ್ಗೆ ‘ಜಿ3’ಯೊಂದಿಗೆ ತಮ್ಮ ಜೀವನಾನುಭವಗಳನ್ನು ಹಂಚಿಕೊಂಡಿದ್ದಾರೆ

Boman irani speak with KP

ತ್ರೀ ಈಡಿಯಟ್ಸ್ ಚಿತ್ರದಲ್ಲಿ ಚಿತ್ರರಸಿರನ್ನು ರಂಜಿಸಿದ್ದ ‘ವೈರಸ್’ ಬೊಮನ್ ಇರಾನಿ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ರಂಗಭೂಮಿಯ ಹಿನ್ನೆಲೆಯಿಂದ ಬಂದು ಬಾಲಿವುಡ್‌ನಲ್ಲಿ ವಿಶಿಷ್ಟ ಮೈಲುಗಲ್ಲನ್ನು ನೆಟ್ಟ ಕೆಲವೇ ಕೆಲವು ನಟರಲ್ಲಿ ಬೊಮನ್ ಒಬ್ಬರು. ಕ್ಯಾಮೆರಾ ಹಿಡಿದು ಆಟೋಗ್ರಾರ್ ಆಗಲು ಬಂದವರು, ಕ್ಯಾಮೆರಾದ ಮುಂದೆ ನಿಂತು ನಟ ಆಗಿಬಿಟ್ಟರು! ಪೋಷಕ ನಟನಾಗಿ, ಹಾಸ್ಯ ಕಲಾವಿದನಾಗಿ, ವಿಲನ್ ಆಗಿ ವಿಭಿನ್ನ ಅವತಾರ ತಾಳಿರುವ ಬೊಮನ್ ಬಗ್ಗೆ ‘ಜಿ3’ಯೊಂದಿಗೆ ತಮ್ಮ ಜೀವನಾನುಭವಗಳನ್ನು ಹಂಚಿಕೊಂಡಿದ್ದಾರೆ

;

1. ಜೀವನದಲ್ಲಿ ಯಶಸ್ಸು ಪಡೆಯಲು ಸಾಕಷ್ಟು ಸರ್ಕಸ್ ಮಾಡಿದ್ದೀರಿ. ಈಗಿನ ನಿಮ್ಮ ಸಿನಿ ಬದುಕಿನ ಸಾಧನೆ ಖುಷಿ ಕೊಟ್ಟಿದೆಯೇ?

ಖಂಡಿತವಾಗಿಯೂ ಖುಷಿ ಕೊಟ್ಟಿದೆ. ಯಾರಿಗೇ ಆಗಲಿ ಅತೃಪ್ತಿ ಇರಬಾರದು. ಆದರೆ, ಮತ್ತಷ್ಟು ಸಾಸುವ ಛಲವನ್ನು ಬಿಟ್ಟುಕೊಡಬಾರದು. ಹಿಂದೆ ಕಷ್ಟ ಪಟ್ಟಿದ್ದರ ಬಗ್ಗೆ ಬೇಸರವಿಲ್ಲ. ಜೀವನದಲ್ಲಿ ಸೈಕಲ್ ತುಳಿದಿದ್ದರಿಂದ ಒಳ್ಳೊಳ್ಳೆ ಪಾಠಗಳನ್ನು ಕಲಿತಿದ್ದೇನೆ. ಆದ್ದರಿಂದ ಆ ಕಷ್ಟಗಳಿಗೂ ಥ್ಯಾಂಕ್ಸ್ ಹೇಳಬಯಸುತ್ತೇನೆ.

2. ಹಲವು ಅಚ್ಚಳಿಯದೆ ಉಳಿಯುವಂಥ ಪಾತ್ರ ಮಾಡಿದ್ದೀರಿ. ಅದಕ್ಕೆಲ್ಲ ತಯಾರಿ ಹೇಗಿತ್ತು?

ಪ್ರತಿ ಪಾತ್ರಕ್ಕೂ ನಾನು ಮ್ಯಾನರಿಸಂ ಸ್ಪರ್ಶ ಕೊಡಲು ಬಯಸುತ್ತೇನೆ. ಹಾಗಾಗಿ, ನಾನು ಹೋದಲ್ಲಿ, ಬಂದಲ್ಲಿ ಜನಸಾಮಾನ್ಯರ ನಡೆ- ನುಡಿ, ಬಾಡಿ ಲಾಂಗ್ವೇಜ್‌ಗಳನ್ನು ಗಮನಿಸುತ್ತಿರುತ್ತೇನೆ. ‘ತ್ರೀ ಈಡಿಯಟ್ಸ್’ನ ವೈರಸ್, ‘ಲಗೇ ರಹೋ ಮುನ್ನಾಭಾಯಿ’ ಚಿತ್ರದ ಲಕ್ಕಿ ಸಿಂಗ್ ಪಾತ್ರಗಳಿಗೆ ವಿಶೇಷ ಮ್ಯಾನರಿಸಂ ಅಳವಡಿಸಿಕೊಂಡಿದ್ದೇ ಹೀಗೆ. ಹಾಗಾಗಿ, ಆ ಪಾತ್ರಗಳು ಜನರ ಮನಸ್ಸುಗಳನ್ನು ಗೆದ್ದಿವೆ.

3. ಕಲಾತ್ಮಕ ಅಥವಾ ವ್ಯಾಪಾರಿ ಉದ್ದೇಶದ ಚಿತ್ರಗಳಲ್ಲಿ ಯಾವುದು ನಿಮಗಿಷ್ಟ?

ನನಗೆ ಎಲ್ಲಾ ಬಗೆಯ ಚಿತ್ರಗಳೂ ಇಷ್ಟ. ಕಲಾತ್ಮಕವಾಗಿರಲಿ, ಕಮರ್ಷಿಯಲ್ ಆಗಿರಲಿ, ಡಾರ್ಕ್ ಮೂವೀಸ್ ಆಗಿರಲಿ, ಪ್ರತಿಯೊಂದೂ ಒಬ್ಬ ನಿರ್ದೇಶಕನ ಪರಿಕಲ್ಪನೆಯನ್ನು ಅವಲಂಬಿಸಿರುತ್ತವೆ. ಕಲಾವಿದರಾಗಿ ನಾವು ಆ ಪರಿಕಲ್ಪನೆಗಳಿಗೆ ಬಣ್ಣ ತುಂಬುವುದಷ್ಟೇ ನಮ್ಮ ಕೆಲಸವನ್ನಾಗಿಸಿಕೊಳ್ಳಬೇಕು. ಹಾಗೆ ಆಲೋಚಿಸಿದಾಗ, ಕಲಾತ್ಮಕ ಚಿತ್ರಗಳಲ್ಲಿನ ಪಾತ್ರವಷ್ಟೇ ಅಲ್ಲದೆ ಕಮರ್ಷಿಯಲ್ ಚಿತ್ರಗಳಲ್ಲಿ ಮಾಡಿದ ಪಾತ್ರಗಳಿಂದಲೂ ಜನರ ಮನಸ್ಸನ್ನು ಮುಟ್ಟಬಹುದು.

4. ಸಿನಿಮಾದಲ್ಲಿ ಬ್ಯುಸಿ ನಟರಾದ ಮೇಲೆ ರಂಗಭೂಮಿಯ ನಂಟು ತೆಳುವಾಯಿತಲ್ಲವೇ?

ಹೌದು. ರಂಗಭೂಮಿಯಲ್ಲಿ ಹೆಚ್ಚು ನಟಿಸಲಾಗುತ್ತಿಲ್ಲ. ಆದರೆ, ಆ ಬಗ್ಗೆ ಬೇಸರವಿಲ್ಲ. ಎಲ್ಲಿ ಮಾಡಿದರೂ ಅಭಿನಯ ತಾನೇ ಮಾಡೋದು? ರಂಗಭೂಮಿಯಲ್ಲಿ ಕ್ಯಾಮೆರಾ ಇರಲ್ಲ, ಸಿನಿಮಾ ಸೆಟ್‌ನಲ್ಲಿ ಕ್ಯಾಮೆರಾ ಇರುತ್ತೆ ಅನ್ನೋದು ಬಿಟ್ಟರೆ ಮಿಕ್ಕೆಲ್ಲಾ ವಿಚಾರಗಳಾದ ಲೈಟಿಂಗ್, ಕಾಸ್ಟ್ಯೂಮ್ ಇತ್ಯಾದಿ ಸೇಮ್ ಟು ಸೇಮ್. ಹಾಗಾಗಿ, ನಾನು ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

5. ಕೌಟುಂಬಿಕ ವೌಲ್ಯಗಳು ಕುಸಿದು ಬೀಳುತ್ತಿರುವ ಈ ಕಾಲಘಟ್ಟದಲ್ಲಿ ಯುವಜನತೆಗೆ ನಿಮ್ಮ ಕಿವಿಮಾತು?

ಜೀವನದಲ್ಲಿ ಏನೇ ಸಾಸಲಿ, ಮೊದಲ ಆದ್ಯತೆ ಕುಟುಂಬಕ್ಕೆ ಕೊಡಬೇಕು. ಹಣ ಗಳಿಸಬಹುದು, ಗಳಿಸದೇ ಇರಬಹುದು. ಸ್ಥಾನಮಾನ ಪಡೆಯಬಹುದು, ಅಥವಾ ಆ ಹಾದಿಯಲ್ಲಿ ವೈಲ್ಯ ಅನುಭವಿಸಬಹುದು. ಅದನ್ನು ದೊಡ್ಡದಾಗಿ ತೆಗೆದುಕೊಳ್ಳಬೇಡಿ. ಕುಟುಂಬದ ಸದಸ್ಯರಿಗೆ, ಹಿರಿಯರಿಗೆ ಗೌರವ ಕೊಡಿ, ಅವರೊಂದಿಗೆ ಪ್ರೀತಿಯಿಂದ ಇರಿ ಎಂದು ಹೇಳಬಯಸುತ್ತೇನೆ.

6. ಬೆಂಗಳೂರಿನ ನಂಟಿನ ಬಗ್ಗೆ ನಿಮ್ಮ ಅನಿಸಿಕೆ?

ಸುಮಾರು 50 ವರ್ಷಗಳಿಂದ ನಾನು ಬೆಂಗಳೂರಿಗೆ ಬಂದು ಹೋಗುತ್ತಿದ್ದೇನೆ. 1968ರಲ್ಲಿ ನನ್ನ ಮದುವೆಯಾದ ನಂತರ ಹನಿಮೂನ್‌ಗೆಂದು ನಾವು ಇಲ್ಲಿಗೇ ಬಂದಿದ್ದೆವು. ಆಗ, ಹನಿಮೂನ್‌ಗೆ ಹೇಳಿ ಮಾಡಿಸಿದಂಥ ನಗರವೆಂದು ಬೆಂಗಳೂರು ಹೆಸರು ಮಾಡಿತ್ತು. ಆದರೀಗ, ಹಾಗಿಲ್ಲ. ನಗರ ಸೌಂದರ್ಯ, ಹವಾಮಾನ ಮೊದಲಿನಂತಿಲ್ಲ. ಅತಿಯಾದ ಟ್ರಾಫಿಕ್ ಜನರ ತಾಳ್ಮೆಯನ್ನು ಕಿತ್ತು ತಿನ್ನುತ್ತಿದೆ. ಟ್ರಾಫಿಕ್ ವಿಚಾರ ಹೊರತುಪಡಿಸಿದರೆ ಮಿಕ್ಕೆಲ್ಲಾ ವಿಚಾರಗಳಲ್ಲಿ ನನಗೆ ಬೆಂಗಳೂರು ಹಿಡಿಸಿದೆ. ಹಾಗಾಗಿ, ಇಲ್ಲಿಗೆ ಬಂದು ಹೋಗಲು ಬೇಸರಿಸುವುದಿಲ್ಲ.

7. ಈಗಾಗಲೇ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದೀರಿ. ಕನ್ನಡದಲ್ಲಿ ಅವಕಾಶ ಸಿಕ್ಕರೆ ಬರುವಿರಾ?

ಖಂಡಿತವಾಗಿ. ನಾನೂ ಆ ಬಗ್ಗೆ ಆಸಕ್ತಿ ಹೊಂದಿದ್ದೇನೆ. ಉತ್ತಮ ಪಾತ್ರ ಸಿಕ್ಕರೆ ಖಂಡಿತವಾಗಿಯೂ ಕನ್ನಡದಲ್ಲಿ ಅಭಿನಯಿಸಲು ಸಿದ್ಧ.

(ಕನ್ನಡ ಪ್ರಭ)

Follow Us:
Download App:
  • android
  • ios