Asianet Suvarna News Asianet Suvarna News

ಮೇಲಿಂದೆಲ್ಲಾ ತೋರಿಸ್ತಿರೋದು ಓಕೆ... ಪದೇ ಪದೇ ಕೈ ಅಲ್ಲಿ ಹೋಗ್ತಿರೋದ್ಯಾಕೆ ಎಂದು ಪೂನಂಗೆ ಕೇಳಿದ ಫ್ಯಾನ್ಸ್​!

ಸತ್ತು ಹೋಗಿರುವುದಾಗಿ ಸುದ್ದಿ ಮಾಡಿ ಹಲ್​ಚಲ್​ ಸೃಷ್ಟಿಸಿದ್ದ ಬಾಲಿವುಡ್​ ನಟಿ ಪೂನಂ ಪಾಂಡೆಯ ಹೊಸ ವಿಡಿಯೋ ವೈರಲ್​ ಆಗಿದ್ದು, ಸಕತ್​ ಟ್ರೋಲ್​ ಆಗುತ್ತಿದೆ.  
 

Poonam Pandey had created a stir with the news of her death trolled for her dress suc
Author
First Published May 4, 2024, 6:31 PM IST

ಹಲವು ನಟಿಯರಿಗೆ ಅದೊಂದು ರೀತಿ ಹುಚ್ಚೋ ಅಥವಾ ಟ್ರೆಂಡೋ ಗೊತ್ತಿಲ್ಲ.   ಖಾಸಗಿ ಭಾಗಗಳನ್ನು ಚೂರುಪಾರು ಮುಚ್ಚಿಕೊಂಡು ಸಂಪೂರ್ಣ ದೇಹ ಪ್ರದರ್ಶನ ಮಾಡುತ್ತಾ ಬಂದರೂ ಬಟ್ಟೆಯನ್ನು ಎಳೆದುಕೊಳ್ಳುತ್ತಾ ವೇದಿಕೆಗೆ ಹೋಗುತ್ತಾರೆ. ಎಲ್ಲವೂ ಕಾಣಿಸುತ್ತಿದ್ದರೂ ಇನ್ನೇನೂ ಕಾಣಬಾರದು ಎಂದೋ ಅಥವಾ ಜನರ ಗಮನವನ್ನು ತಮ್ಮೆಡೆ ಹರಿಸಿಕೊಳ್ಳುವುದಕ್ಕೋ ಏನೋ ಒಟ್ಟಿನಲ್ಲಿ ಬಹುತೇಕ ನಟಿಯರು ಇಂಥದ್ದೊಂದು ಹವ್ಯಾಸ ರೂಢಿಸಿಕೊಂಡಿದ್ದಾರೆ. ಇನ್ನು ನಟಿ ಪೂನಂ ಪಾಂಡೆ ಅಂತೂ ಹೇಳುವುದೇ ಬೇಡ. ಎರಡು ತಿಂಗಳ ಹಿಂದೆ ಎಲ್ಲೆಲ್ಲೂ ಬಾಲಿವುಡ್​ ನಟಿ ಪೂನಂ ಪಾಂಡೆಯ ವಿಷಯ ಸದ್ದು ಮಾಡಿತ್ತು.   ಈಕೆ ಸತ್ತರೆಂಬ ಸುದ್ದಿ ಇಂಡಸ್ಟ್ರಿಗೆ ಬರಸಿಡಿಲು ಬಡಿದಿತ್ತು. 

ಹಾಟೆಸ್ಟ್​ ನಟಿ, ಮಾದಕ ತಾರೆ ಎಂದೇ ಖ್ಯಾತಿ ಪಡೆದ, ಸದಾ ತಮ್ಮ ಬಟ್ಟೆಗಳಿಂದಲೇ ವಿವಾದದಲ್ಲಿಯೂ ಇದ್ದ  ಪೂನಂ ಪಾಂಡೆ ಸಾವಿನ ಸುದ್ದಿ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡಿತು.  ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ ಎಂಬ ಸುದ್ದಿ ಬಂತು. ಗರ್ಭಕಂಠದ ಕ್ಯಾನ್ಸರ್​ ಅವರನ್ನು ಬಲಿ ತೆಗೆದುಕೊಂಡಿತು ಎನ್ನಲಾಗಿತ್ತು.  ಇದಕ್ಕೆ ಕಾರಣ, ಪೂನಂ ತಂಗಿ ಹೇಳಿದ ಮಾತು.  ಅಕ್ಕ ಗರ್ಭಕಂಠ ಕ್ಯಾನ್ಸರ್​ ಸತ್ತಿದ್ದಾಗಿ ಹೇಳಿದ್ದರು. ಆದರೆ ಆಕೆಯ ಮೃತದೇಹ ಸಿಗದ ಕಾರಣ ಹಾಗೂ ಕುಟುಂಬಸ್ಥರ ಫೋನ್​ಗಳು ಸ್ವಿಚ್​ ಆಫ್​ ಆಗಿದ್ದರಿಂದ ಅನುಮಾನ ಹುಟ್ಟಿದ ಬೆನ್ನಲ್ಲೇ ನಟಿ ಖುದ್ದು ವಿಡಿಯೋ ಮೂಲಕ ತಾನು ಸತ್ತಿಲ್ಲ ಎಂದು ಹೇಳಿದರು.

ನಿಜಕ್ಕೂ ಈ ಹಾಟ್​ ಬ್ಯೂಟಿ ಅದೇ ಜಾಹೀರಾತಿನ ಬಾಲಕಿನಾ? ಊಹಿಸಲು ಸಾಧ್ಯವೇ ಇಲ್ಲ ನೋಡಿ..!

ಸಾವಿನ ಸುಳ್ಳು ಸುದ್ದಿ ಹರಡಿದ್ದ ಈಕೆಯ ವಿರುದ್ಧ ಇದಾಗಲೇ ಹಲವಾರು ಕೇಸ್​ ದಾಖಲಾಗಿದೆ. 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯೂ ದಾಖಲಾಗಿದೆ. ಆದರೆ ಸದ್ಯ ಯಾವ ಕೇಸ್​ಗಳದ್ದೂ ಸುದ್ದಿ ಇಲ್ಲ. ಎಲ್ಲವೂ ಸೈಲೆಂಟ್​ ಆಗಿದೆ.  ಪೂನಂ ಸುಳ್ಳು ಸುದ್ದಿ ಹರಡಿದ್ದು ಗೊತ್ತಾಗುತ್ತಿದ್ದಂತೆಯೇ ಚಿತ್ರನಿರ್ಮಾಪಕ ಅಶೋಕ್​ ಪಂಡಿತ್​ ಅವರು ವಿಡಿಯೋ ಮೂಲಕ ನಟಿಯ ವಿರುದ್ಧ ಕೇಸ್​ ದಾಖಲು ಮಾಡಿ ಈಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.  ಭಾರತೀಯ ದಂಡ ಸಂಹಿತೆಯ 63ನೇ ಕಲಮಿನ ಪ್ರಕಾರ, ಯಾವುದೇ ವ್ಯಕ್ತಿ ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ನೀಡಿದರೆ, ಅದು ಅಪರಾಧವೆಂದು ಸಾಬೀತಾದರೆ ಅಂಥವರಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಅಥವಾ ಐವತ್ತು ಸಾವಿರದವರೆಗೆ ವಿಸ್ತರಿಸಬಹುದಾದ ದಂಡ ಹಾಗೂ ಎರಡೂ ವಿಧಿಸುವ ಅವಕಾಶವಿದೆ.  ಇದೇ ಹಿನ್ನೆಲೆಯಲ್ಲಿ ಕೇಸ್​ ದಾಖಲಾಗಿದ್ದರೂ ಇದುವರೆಗೆ ಏನೂ ಸುದ್ದಿಯಿಲ್ಲ.

ಆದರೆ ನಟಿಯ ವರ್ಚಸ್ಸಿಗೆ ಏನೂ ಕಡಿಮೆ ಇಲ್ಲ. ಇವೆಲ್ಲಾ ಸುದ್ದಿಗಳ ಬಳಿಕವೂ ಸೋಷಿಯಲ್​ ಮೀಡಿಯಾದಲ್ಲಿ ಹಾಟ್​ ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇದ್ದಾರೆ. ಜಾಹೀರಾತು ಕಂಪೆನಿಗಳಿಂದಲೂ ಒಳ್ಳೆಯ ಆಫರ್​ಗಳು ಬರುತ್ತಲೇ ಇವೆ. ಇದೀಗ ಹುಟ್ಟುಹಬ್ಬದ ಮುನ್ನಾ ದಿನ ಹಾಸಿಗೆಯ ಮೇಲೆ ಹಾಟ್​ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ವೇದಿಕೆ ಏರುತ್ತಾ ಬಂದಿರೋ ನಟಿ ಮಾಮೂಲಿನಂತೆ ಧಾರಾಳವಾಗಿ ಅಡಿಯಿಂದ ಮುಡಿಯವರೆಗೆ ದೇಹ ಪ್ರದರ್ಶನ ಮಾಡಿದ್ದಾರೆ. ಚೋಟುದ್ದ ಡ್ರೆಸ್​ ಅನ್ನು ಮುಂಭಾಗದಲ್ಲಿ ಎಳೆದುಕೊಂಡು ವೇದಿಕೆಗೆ ಬಂದಿದ್ದಾರೆ. ಆ ಡ್ರೆಸ್​ ಅದೆಷ್ಟು ಗಿಡ್ಡವಿದೆ ಎಂದರೆ ಕೈಗೂ ಸಿಗುತ್ತಿರಲಿಲ್ಲ. ಆದರೂ ಪದೇ ಪದೇ ಎಳೆದುಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. 

ಡ್ರೆಸ್​ನಿಂದ ಉದುರಿದ ಹೂವು, ಎಲೆಗಳು... ಅಬ್ಬಬ್ಬಾ ಉರ್ಫಿಗೆ ಉರ್ಫಿನೇ ಸಾಟಿ ಕಣ್ಲಾ ಅಂತಿದ್ದಾರೆ ಫ್ಯಾನ್ಸ್​..

Latest Videos
Follow Us:
Download App:
  • android
  • ios