ಮರಾಠಿ ವಾಹಿನಿವೊಂದರಲ್ಲಿ ಪ್ರಸಾರವಾಗುವ ಸೀರಿಯಲ್‌ವೊಂದರಲ್ಲಿ ಅಭಿನಯಿಸುತ್ತಿರುವ ಲಕ್ಷ್ಮಿ ಎಂಬ ಮಹಿಳೆ ಜೀವನ ನಡೆಸಲು ಪಾರ್ಟ್‌ ಟೈಂ ಕೆಲಸಗಳನ್ನು ಮಾಡುತ್ತಾರೆ. ಅದರಲ್ಲಿ ಸ್ಟ್ರಾಂಗ್‌ ಮಹಿಳೆಯಾಗಿ ರಾತ್ರಿ ಆಟೋ ಡ್ರೈವರ್‌ ಮಾಡುತ್ತಾರೆ.

ಈಕೆಯ ಶ್ರಮ ಹಾಗೂ ಜೀವನದ ಗುರಿಯನ್ನು ಕಂಡು ಬಾಲಿವುಡ್‌ ನಟ ಬೊಮ್ಮನ್‌ ಇರಾನಿ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಆಕೆಯೊಂದಿಗಿರುವ ಒಂದು ಫೋಟೋ ಹಾಕಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಔಟ್ ಆಫ್ ಔಟ್ ಮಾರ್ಕ್ಸ್ ತೆಗೆದರೆ 'Shake Hand with Ramesh' ಪಟ್ಟಿಯಲ್ಲಿ!

'ಅಮೇಜಿಂಗ್ ಸೂಪರ್ ಲೇಡಿ ಲಕ್ಷ್ಮಿಯನ್ನು ಭೇಟಿಯಾದೆ. ಈಕೆ ಮರಾಠಿ ಸೀರಿಯಲ್‌ ನಟಿ ಹಾಗೂ ರಿಕ್ಷಾ ಡ್ರೈವರ್‌. ರಿಯಲ್‌ ಲೈಫ್‌ ಹೀರೋ ಹಾಗೂ ಸ್ಫೂರ್ತಿ. ನಿಮ್ಮಲ್ಲರಿಗೂ ಆಕೆಯೊಂದಿಗೆ ಒಂದು ಡ್ರೈವ್‌ ಮಾಡುವ ಅವಕಾಶ ಸಿಗಲಿ. ಆಕೆ ಒಂದು ಎನರ್ಜಿ ಬಂಡಲ್‌. So proud of you lakshmi ಗುಡ್‌ ಲಕ್‌ ' ಎಂದು ಬರೆದುಕೊಂಡಿದ್ದಾರೆ.