ಅಮಿತಾಬ್,ಶಾರೂಕ್, ಸಲ್ಮಾನ್‌ಗಿಂತ ಹೆಚ್ಚು ಹಿಟ್ ಸಿನ್ಮಾ ನೀಡಿದ ನಟ, ಆದ್ರೂ ಫ್ಯಾನ್ಸ್ ಸೂಪರ್‌ಸ್ಟಾರ್ ಎಂದು ಕರೆಯಲೇ ಇಲ್ಲ!
ಅಮಿತಾಭ್ ಬಚ್ಚನ್, ಶಾರುಖ್ ಖಾನ್, ರಾಜೇಶ್ ಖನ್ನಾ ಮತ್ತು ಅಕ್ಷಯ್ ಕುಮಾರ್ ಅವರಂತಹ ನಟರು ಹಲವು ಸಕ್ಸಸ್‌ಫುಲ್ ಸಿನಿಮಾಗಳಲ್ಲಿ ಅಭಿನಯಿಸಿ ಸೂಪರ್‌ಸ್ಟಾರ್ ಎನಿಸಿಕೊಂಡಿದ್ದಾರೆ. ಆದರೆ ಬಾಲಿವುಡ್‌ನಲ್ಲಿ ಹೆಚ್ಚು ಹಿಟ್‌ಗಳನ್ನು ಹೊಂದಿರುವ ಈ ಬಾಲಿವುಡ್ ನಟ ಹೆಚ್ಚು ಅಭಿಮಾನಿಗಳಿದ್ದರೂ ಯಾವತ್ತೂ ಸೂಪರ್‌ಸ್ಟಾರ್ ಎಂದು ಗುರುತಿಸಿಕೊಳ್ಳಲ್ಲಿಲ್ಲ.
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಸೂಪರ್ ಸ್ಟಾರ್ ಎಂಬ ಪದವನ್ನು ಬೆರಳೆಣಿಕೆಯಷ್ಟು ನಟರಿಗೆ ಮಾತ್ರ ಬಳಸಲಾಗಿದೆ. ಕೆಲವೊಮ್ಮೆ ಇದು ಅತೀ ಹೆಚ್ಚು ಹಿಟ್ ಸಿನಿಮಾಗಳನ್ನು ನೀಡಿದ ನಟರಿಗೆ, ಇನ್ನು ಕೆಲವೊಮ್ಮೆ ಹೆಚ್ಚು ಫ್ಯಾನ್ ಫಾಲೋವಿಂಗ್ ಹೊಂದಿರುವ ನಟಿಯರಿಗೆ. ಹೀಗೆ ಹಲವು ಮಾನದಂಡಗಳಿಂದ ನಟ-ನಟಿಯರು ಸೂಪರ್‌ಸ್ಟಾರ್ ಎಂದು ಕರೆಸಿಕೊಳ್ಳುತ್ತಿದ್ದರು.
ಅಮಿತಾಭ್ ಬಚ್ಚನ್, ಶಾರುಖ್ ಖಾನ್, ರಾಜೇಶ್ ಖನ್ನಾ ಮತ್ತು ಅಕ್ಷಯ್ ಕುಮಾರ್ ಅವರಂತಹ ನಟರು ಹಲವು ಸಕ್ಸಸ್‌ಫುಲ್ ಸಿನಿಮಾಗಳಲ್ಲಿ ಅಭಿನಯಿಸಿ ಸೂಪರ್‌ಸ್ಟಾರ್ ಎನಿಸಿಕೊಂಡಿದ್ದಾರೆ. ಆದರೆ ಬಾಲಿವುಡ್‌ನಲ್ಲಿ ಹೆಚ್ಚು ಹಿಟ್‌ಗಳನ್ನು ಹೊಂದಿರುವ ಈ ಬಾಲಿವುಡ್ ನಟ ಹೆಚ್ಚು ಅಭಿಮಾನಿಗಳಿದ್ದರೂ ಯಾವತ್ತೂ ಸೂಪರ್‌ಸ್ಟಾರ್ ಎಂದು ಗುರುತಿಸಿಕೊಳ್ಳಲ್ಲಿಲ್ಲ.
ಹಿಂದಿ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನದಲ್ಲಿ ಅತಿ ಹೆಚ್ಚು ಹಿಟ್ ಚಿತ್ರಗಳನ್ನು ಹೊಂದಿರುವ ನಟ ಧರ್ಮೇಂದ್ರ. ಹಿರಿಯ ನಟ ಇತ್ತೀಚೆಗೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಈ ಮೂಲಕ ತನ್ನ 74ನೇ ಬಾಕ್ಸ್ ಆಫೀಸ್ ಹಿಟ್ ಸಿನಿಮಾ ನೀಡಿದರು. 60ಕ್ಕೂ ಹೆಚ್ಚು ಹಿಟ್ ಸಿನಿಮಾಗಳಲ್ಲಿ ನಟ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಧರ್ಮೇಂದ್ರ ತಮ್ಮ ವೃತ್ತಿಜೀವನದಲ್ಲಿ ಸುಮಾರು 240 ಚಿತ್ರಗಳಲ್ಲಿ ನಟಿಸಿದ್ದಾರೆ. ಧರ್ಮೇಂದ್ರ ಅವರು 1960ರ ದಶಕದ ಆರಂಭದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕೆಲವೇ ವರ್ಷಗಳಲ್ಲಿ ನಟರಾಗಿ ಸಕ್ಸಸ್ ಅನಿಸಿಕೊಂಡರು. ಆದರೆ ಮೊದಲ ಕೆಲವು ವರ್ಷಗಳ ಕಾಲ ಅವರು ದೊಡ್ಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ಸೀಮಿತರಾಗಿದ್ದರು. ವರ್ಷದ ಕೊನೆಯ ವರೆಗೂ ತುಂಬಾ ಸಕ್ಸಸ್ ನಟ ಅನಿಸಿಕೊಳ್ಳಲ್ಲಿಲ್ಲ. ನಂತರ ಸಾಲು ಸಾಲು ಹಿಟ್ ಸಿನಿಮಾ ನೀಡಿದರು.
ಶೋಲೆ, ಚುಪ್ಕೆ ಚುಪ್ಕೆ, ಸೀತಾ ಔರ್ ಗೀತಾ, ಮೇರಾ ಗಾಂವ್ ಮೇರಾ ದೇಶ್, ಧರಮ್ ವೀರ್, ಫೂಲ್ ಔರ್ ಪತ್ತರ್ ಮತ್ತು ಯಮ್ಲಾ ಪಾಗ್ಲಾ ದೀವಾನಾ ಸೇರಿದಂತೆ ಧರ್ಮೇಂದ್ರ ಅವರ ಕೆಲವು ದೊಡ್ಡ ಹಿಟ್ ಹಾಡುಗಳು ಸೇರಿವೆ. ನಟ ಹಲವಾರು ಬಹು ತಾರಾಗಣ ಮತ್ತು ಸಮಗ್ರ ಚಿತ್ರಗಳ ಭಾಗವಾಗಿದ್ದಾರೆ.
ಬಾಲಿವುಡ್‌ನಿಂದ ಹೆಚ್ಚು ಹಿಟ್‌ಗಳನ್ನು ಹೊಂದಿರುವ 209 ನಟರ ಪಟ್ಟಿಯಲ್ಲಿರಲ್ಲಿ 56 ಹಿಟ್ ನೀಡಿದ ಧರ್ಮೇಂದ್ರ 2ನೇ ಸ್ಥಾನದಲ್ಲಿದ್ದಾರೆ. 50ಕ್ಕೂ ಹೆಚ್ಚು ಹಿಟ್‌ಗಳನ್ನು ಹೊಂದಿರುವ ಇತರ ನಟರಲ್ಲಿ ಅಮಿತಾಬ್ ಬಚ್ಚನ್ ಮತ್ತು ಮಿಥುನ್ ಚಕ್ರವರ್ತಿ ಸೇರಿದ್ದಾರೆ.
42 ಹಿಟ್‌ಗಳನ್ನು ಹೊಂದಿದ್ದ ರಾಜೇಶ್ ಖನ್ನಾ ಅವರು ಉದ್ಯಮದ ಮೊದಲ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ವ್ಯಕ್ತಿ ಅಗ್ರ ಐದರಲ್ಲಿ ಸ್ಥಾನ ಪಡೆದಿದ್ದಾರೆ. ಟಾಪ್ 10 ರಲ್ಲಿ ಅಕ್ಷಯ್ ಕುಮಾರ್ (39), ಸಲ್ಮಾನ್ ಖಾನ್ (37), ರಿಷಿ ಕಪೂರ್ (34), ಶಾರುಖ್ ಖಾನ್ ಮತ್ತು ವಿನೋದ್ ಖನ್ನಾ (ಇಬ್ಬರೂ 33) ಸೇರಿದ್ದಾರೆ.