ನೇರಳೆ ಬಣ್ಣದ ಬ್ಯಾಕ್ಲೆಸ್ ಡ್ರೆಸ್‌ನಲ್ಲಿ ನಟಿ Urfi ಟ್ರೋಲ್, ಸೀರೆ ಅಥವಾ ದುಪಟ್ಟಾ ಅನ್ನೋದೇ ಪ್ರಶ್ನೆ?
ಮತ್ತೊಂದು ಸ್ಟೈಲಿಷ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡು ನೆಟ್ಟಿಗರಿಗೆ ಶಾಕ್ ಕೊಟ್ಟ ನಟಿ ಉರ್ಫಿ. ಡಿಸೈನರ್ ಹುಡುಕಾಟದಲ್ಲಿ ನೆಟ್ಟಿಗರು...
ಹಿಂದಿ ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸಿ, ಬಿಗ್ ಬಾಸ್ ಓಟಿಟಿಯಲ್ಲಿ ಕಾಣಿಸಿಕೊಂಡ ನಂತರ ದೊಡ್ಡ ಮಟ್ಟದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವುವ ಉರ್ಫಿ.
ಶುಕ್ರವಾರ ವೀರಾ ದೇಸಾಯಿ ಇಂಡಸ್ಟ್ರಿಯಲ್ ಎಸ್ಟೇಟ್ ಮುಂಬೈಗೆ (Mumbai) ಆಗಮಿಸಿದ ನಟಿ ಉರ್ಫಿ ನೇರಳೆ ಬಣ್ಣದ ಉಡುಪು ಧರಿಸಿದ್ದರು.
ಈ ಡ್ರೆಸ್ ನೋಡಲು ಮ್ಯಾಕ್ಸಿ ಅಥವಾ ಗೌನ್ ರೀತಿ ಕಾಣಿಸುತ್ತಿದೆ ಆದರೆ ಇದು ಫುಲ್ ಬ್ಯಾಕ್ಲೆಸ್. ಒಂದು ಸೆಕೆಂಡ್ ಇದು ದುಪಟ್ಟಾದಿಂದ ಮಾಡಿರುವ ಬಟ್ಟೆ ಅನಿಸುತ್ತದೆ.
ಉರ್ಫಿ ಎಲ್ಲಿ ಹೋಗುತ್ತಾರೆ ಯಾರನ್ನು ಭೇಟಿ ಮಾಡಲು ಈ ರೀತಿ ಉಡುಪು ಧರಿಸುತ್ತಾರೆಂದು ಯಾರಿಗೂ ಗೊತ್ತಿಲ್ಲ ಆದರೆ ಡಿಫರೆಂಟ್ ಆಗಿ ಪ್ಯಾಪರಾಜಿಗಳ ಕಣ್ಣಿಗೆ ಬೀಳುತ್ತಾರೆ.
ಉರ್ಫಿ ವಿಚಿತ್ರ ಡ್ರೆಸ್ಸಿಂಗ್‌ಗೆ ಕೆಲವು ಪ್ರತಿಷ್ಟಿತ ಡಿಸೈನರ್‌ಗಳು ಕೂಡ ಶಾಕ್ ಆಗಿದ್ದಾರೆ. ಅಲ್ಲದೆ ಕೆಲವು ನೆಟ್ಟಿಗರು ಆಕೆ ಧರಿಸುವ ಬಟ್ಟೆಯನ್ನು ಯಾರು ಡಿಸೈನ್ ಮಾಡುತ್ತಾರೆ ಎಂದು ಹುಡುಕುವ ಪ್ರಯತ್ನ ಕೂಡ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಸ್ನೇಹಿತನ ಜೊತೆ ಹೋಟೆಲ್‌ನಲ್ಲಿ ಕಾಣಿಸಿಕೊಂಡು ಉರ್ಫಿ ಮೊಬೈಲ್ ನೋಡಿಕೊಂಡು ಅತ್ತಿದ್ದಾರೆ. ಉರ್ಫಿಗೆ ಯಾರೋ ಹಾರ್ಟ್ ಬ್ರೇಕ್ ಮಾಡಿದ್ದಾರೆ ಇಲ್ಲವಾದರೆ ರಾಖಿ ಸಾವಂತ್ ರೀತಿ ನಾಟಕ ಮಾಡುತ್ತಿದ್ದಾಳೆ ಎಂದು ಕಾಲೆಳೆದಿದ್ದರು.