1 ಟ್ರೈಮಿಸ್ಟರ್‌ನಲ್ಲಿ ಕೊರೋನಾ,ಕೇರ್ ಮಾಡದೆ ಚೆನ್ನಾಗಿ ತಿನ್ನಿ: ಬ್ಯಾಗಿನಲ್ಲಿರುವ ಸತ್ಯ ಬಿಚ್ಚಿಟ್ಟ ಸೋನಂ ಕಪೂರ್
ನಟಿ ಸೋನಂ ಕಪೂರ್ ಹ್ಯಾಂಡ್‌ಬ್ಯಾಗ್ ಅಪ್‌ಗ್ರೇಡ್ ವರ್ಶನ್ ರಿವೀಲ್. ತಿನ್ನೋ ಐಟಂ ಕಡಿಮೆ ಆಗುತ್ತೆ ನೋಡಿ ಎಂದ ನಟಿ.....
ಬಾಲಿವುಡ್ ಬ್ಯೂಟಿ ಸೋನಂ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ಆಗಸ್ಟ್ 20ರಂದು ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದು ಬರುತ್ತಿದೆ.
ಇದೇ ಸಮಯಕ್ಕೆ ಸೋನಂ ತಮ್ಮ ಹ್ಯಾಂಡ್‌ಬ್ಯಾಗ್‌ನಲ್ಲಿ ಏನಿದೆ ಎಂದು Vogue ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಮೊದಲು ಬ್ಯಾಗಿನಿಂದ ತಿನ್ನುವ ಆಹಾರವನ್ನು ತೆಗೆದಿದ್ದಾರೆ.
ಪ್ರೆಗ್ನೆನ್ಸಿ ಸಮಯದಲ್ಲಿ ನಾನು ಹೆಚ್ಚಿಗೆ ಬೇವರುತ್ತಿದ್ದ ಕಾರಣ ಪೇಪರ್ ಫ್ಯಾನ್ ಕ್ಯಾರಿ ಮಾಡುತ್ತೀನಿ. ನನ್ನ ದೇಹ ತುಂಬಾ ಹೀಟ್ ಪ್ರಡ್ಯೂಸ್ ಮಾಡುತ್ತದೆ.
ಗ್ಲಾಸ್ ಮತ್ತು ಎರಡು ರೀತಿಯ ಹೇರ್ ಬ್ರಶ್. ನನ್ನ ತಂದೆಯಿಂದ ಹೇರ್ ಗ್ರೂತ್ ಹೆಚ್ಚಿಗೆ ಪಡೆದುಕೊಂಡಿರುವೆ. ಗರ್ಭಿಣಿ ಆದಾಗ ಇನ್ನೂ ಹೆಚ್ಚಾಗುತ್ತದೆ ಎಂದು ಹೇಳಿದ್ದರು ಆದರೆ ಆಗಲಿಲ್ಲ ಎಂದಿದ್ದಾರೆ ಸೋನಂ.
ಮಾಸ್ಕ್ ಇರಲೇಬೇಕು ಏಕೆಂದರೆ ನನಗೆ ಮೊದಲ ಟ್ರೈಮಿಸ್ಟರ್‌ನಲ್ಲಿ ಕೊರೋನಾ ಸೊಂಕು ತಗುಲಿತ್ತು. ಆದಷ್ಟು ಜಾಗೃತೆ ವಹಿಸಿದ್ದರೂ ಕೊರೋನಾ ಬಂದಿತ್ತು.
ಪಾದಗಳು ಊದಿರುವ ಕಾರಣ ನಾನು ಆಹಾರ ಹೆಚ್ಚಿಗೆ ಸೇವಿಸುತ್ತಿರುವೆ. ಈ ಸಮಯದಲ್ಲಿ ಕೂದಲು ಹಾರೈಕೆ ಮುಖ್ಯ ಸ್ಯಾಟಿನ್ ಹೇರ್‌ಬ್ಯಾಂಡ್ ಬಳಸುತ್ತಿರುವೆ.
ಗರ್ಭಿಣಿ ಸಮಯದಲ್ಲಿ ನನಗೆ ವಾಕರಿಕೆ ಬರುವಂತಾದಾಗ ಬಾಯಿಗೆ ಏನಾದರೂ ಹಾಕಿಕೊಳ್ಳಬೇಕಿತ್ತು. ಏನಾದರೂ ತಿನ್ನಬೇಕಿತ್ತು. ಯಾರು ಏನೇ ಹೇಳಿದ್ದರೂ ಕಲೆ ಕೆಡಿಸಿಕೊಳ್ಳಬೇಡಿ ಆರೋಗ್ಯ ತುಂಬಾನೇ ಮುಖ್ಯ.
Pregnancy is not sexy..ಸಂದರ್ಶನದಲ್ಲಿ ನಾನು ಕೂಲ್ ಆಗಿ ಕಾಣಿಸಬಹುದು ಆದರೆ ಸತ್ಯ ಬೆರೆನೇ ಇದೆ. ನಾನು ಸರಿಯಾದ ಸಮಯಕ್ಕೆ ಮಲಗುತ್ತಿಲ್ಲ ಎಂದಿದ್ದಾರೆ ಸೋನಂ.