- Home
- Entertainment
- Cine World
- ಕೊನೆಗೂ ಸುಳ್ಳು ಸುದ್ದಿಗೆ ಸ್ಪಷ್ಟನೆ ಕೊಟ್ಟ ರಾಕಿಂಗ್ ಸ್ಟಾರ್: ಟಾಕ್ಸಿಕ್ ಬಳಿಕ ರಾಮಾಯಣಕ್ಕೆ ಯಶ್!
ಕೊನೆಗೂ ಸುಳ್ಳು ಸುದ್ದಿಗೆ ಸ್ಪಷ್ಟನೆ ಕೊಟ್ಟ ರಾಕಿಂಗ್ ಸ್ಟಾರ್: ಟಾಕ್ಸಿಕ್ ಬಳಿಕ ರಾಮಾಯಣಕ್ಕೆ ಯಶ್!
ಮುಂಬೈನಲ್ಲಿ ನಡೆಯುತ್ತಿರುವ ‘ರಾಮಾಯಣ’ ಶೂಟಿಂಗ್‌ನಲ್ಲಿ ಯಶ್ ಭಾಗಿ ಆಗಿಲ್ಲ. ಸದ್ಯ ನಡೆಯುತ್ತಿರುವ ಟಾಕ್ಸಿಕ್ ಶೂಟಿಂಗ್ ಬಳಿಕವಷ್ಟೇ ರಾವಣನ ಪಾತ್ರಧಾರಿಯಾಗಲಿರುವ ರಾಮಾಯಣದಲ್ಲಿ ರಾಕಿಂಗ್ ಸ್ಟಾರ್ ಭಾಗಿ. ಚಿತ್ರತಂಡ ಸ್ಪಷ್ಟನೆ.

ನಿತೀಶ್ ತಿವಾರಿ ನಿರ್ದೇಶನದ ಬಹುಕೋಟಿ ಬಜೆಟ್‌ನ ‘ರಾಮಾಯಣ’ ಶೂಟಿಂಗ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರು ರಾವಣನ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.
ಸದ್ಯ ಯುದ್ಧದ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದ್ದು, ಮುಂಬೈನ ಅಕ್ಸ ಬೀಜ್ ಭಾಗದಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಯಶ್ ಅಭಿನಯಿಸುವ ರಾವಣನ ಪಾತ್ರಕ್ಕಾಗಿ ನೈಜ ಚಿನ್ನದಿಂದ ಉಡುಗೆಗಳನ್ನು ತಯಾರಿಸಲಾಗಿದ್ದು, ಹರ್‌ಪ್ರೀತ್ ಹಾಗೂ ರಿಂಪಲ್ ಡಿಸೈನ್ ಮಾಡಿದ್ದಾರೆ.
ಎರಡು ಭಾಗಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದ್ದು, ಮೊದಲ ಭಾಗ 2026ರ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿದೆ. ರಣ್‌ಬೀರ್ ಹಾಗೂ ಸಾಯಿ ಪಲ್ಲವಿ ನಾಯಕ ನಾಯಕಿಯಾಗಿರುವ ಈ ಸಿನಿಮಾವನ್ನು ನಮಿತ್ ಮಲ್ಹೋತ್ರ ಹಾಗೂ ಯಶ್ ನಿರ್ಮಿಸುತ್ತಿದ್ದಾರೆ.
ಈಗಾಗಲೇ ರಾವಣನ ಅವತಾರದಲ್ಲಿ ಯಶ್ AI ಫೋಟೋಗಳು ವೈರಲ್ ಆಗಿದೆ. ರಾವಣನಾಗಿ ರಾಕಿಂಗ್ ಸ್ಟಾರ್ ಆರ್ಭಟ ಹೇಗಿರುತ್ತದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಮುಂದಿನ ವರ್ಷ ದೀಪಾವಳಿ ಸಂಭ್ರಮದಲ್ಲಿ ಮೊದಲ ಭಾಗ ಪ್ರೇಕ್ಷಕರ ಮುಂದೆ ಬರಲಿದೆ.
ಈ ಹಿಂದೆ ಮುಂಬೈನಲ್ಲೇ ಸೆಟ್ ಹಾಕಿ ರಾಮ- ಶ್ರೀತೆಯಾಗಿ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಭಾಗದ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ಇದೀಗ ರಾವಣನಾಗಿ ಯಶ್ ಯುದ್ಧದ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುವ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ.