- Home
- Entertainment
- Cine World
- ಹೊಟ್ಟೆ ತುಂಬಾ ತಿನ್ನಬೇಕು ಮಾರನೇ ದಿನ ವರ್ಕೌಟ್ ಮಾಡಬೇಕು; Pooja Hegde ಡಯಟ್ ಮಂತ್ರ!
ಹೊಟ್ಟೆ ತುಂಬಾ ತಿನ್ನಬೇಕು ಮಾರನೇ ದಿನ ವರ್ಕೌಟ್ ಮಾಡಬೇಕು; Pooja Hegde ಡಯಟ್ ಮಂತ್ರ!
ಮಂಗಳೂರು ಬೆಡಗಿ ಪೂಜಾ ಹೆಗ್ಡೆ ಡಯಟ್ ಏನೆಂದು ಎಲ್ಲರೂ ಪದೇ ಪದೇ ಕೇಳುತ್ತಿದ್ದಾರೆ. ಹೀಗಾಗಿ ನಟಿ ಫಾಲೋ ಮಾಡುವ ಸಿಂಪಲ್ ಟಿಪ್ಸ್ ಕೊಟ್ಟಿದ್ದಾರೆ.

ಸಾಮಾನ್ಯವಾಗಿ ಬಾಡಿ ಶೇಪ್‌ನಲ್ಲಿ ಇಟ್ಟುಕೊಳ್ಳಲು ಪೂಜಾ ಹೆಗ್ಡೆ ಕಾರ್ಡಿಯೋ, ಬಾಕ್ಸಿಂಗ್, ವೇಟ್ ಟ್ರೈನಿಂಗ್ ಮತ್ತು pilatesನ ದಿನ ತಪ್ಪದೆ ಮಾಡುತ್ತಾರಂತೆ.
ದಿನ ಯೋಗ ಟ್ರೈನರ್ ಸಹಾಯದಿಂದ ತಪ್ಪದೆ ಯೋಗ ಮಾಡುತ್ತಾರೆ. ಲಾಕ್‌ಡೌನ್ ಸಮಯದಲ್ಲಿ ದೇಹ ಫಿಟ್ ಆಗಿ ಇಟ್ಟುಕೊಳ್ಳಲು ಸಹಾಯ ಮಾಡಿದ್ದು ಯೋಗವಂತೆ.
ಚೆನ್ನಾಗಿ ತಿನ್ನಬೇಕು ಚೆನ್ನಾಗಿ ವ್ಯಾಯಾಮ ಮಾಡಬೇಕು. ಎಲ್ಲಾ ರೀತಿಯ ರೆಸಿಪಿಗಳನ್ನು ಟ್ರೈ ಮಾಡಬೇಕು ನಮ್ಮ ನಾಲಿಗೆಗೆ ಎಲ್ಲಾ ಮಸಾಲ ಬೀಳಬೇಕು ಎಂದಿದ್ದಾರೆ ಪೂಜಾ.
ಡ್ಯಾನ್ಸ್ ಸಿಕ್ಕಾಪಟ್ಟೆ ಇಷ್ಟ ಪಡುವ ಪೂಜಾ ಫ್ರೀ ಇದ್ದಾಗಲೆಲ್ಲಾ ಡ್ಯಾನ್ಸ್ ಮಾಡುತ್ತಾರಂತೆ. ಅಲಾ ವೈಕುಂಟಪುರಮುಲೂ ಸಿನಿಮಾದಲ್ಲಿ ಅಲ್ಲುಗೆ ಸಾಟಿಯಾಗಿ ಡ್ಯಾನ್ಸ್ ನೀವೇ ನೋಡಿದ್ದೀರಾ!
ದಿನ ತಪ್ಪದೆ 3-4 ಲೀಟರ್ ನೀಡು ಕುಡಿಯುವುದಾಗಿ ಹೇಳಿಕೊಂಡಿದ್ದಾರೆ. ನಮ್ಮ ದೇಹ ಸಾಕು ಎನ್ನುವಷ್ಟು ನೀರು ಕುಡಿಯಬೇಕು. ವ್ಯಾಯಾಮ ಮಾಡುವಾಗ ಸಣ್ಣ ವಿಚಾರ ತೆಗೆದುಕೊಂಡು ಸ್ವಲ್ಪ ನೀರು ಸೇವಿಸೇಕು ಎಂದಿದ್ದಾರೆ.
ಸರಿಯಾದ ಸಮಯಕ್ಕೆ ಊಟ ಮಾಡಿದರೆ ದೇಹ ನಮ್ಮ ಮಾತು ಕೇಳುತ್ತದೆ. ಬಹುತೇಕ ಸಮಯ ಮನೆಯಲ್ಲಿ ಮಾಡಿರುವ ಆಹಾರವನ್ನೇ ಸೇವಿಸುವುದಾಗಿ ಪೂಜಾ ಹೇಳಿಕೊಂಡಿದ್ದಾರೆ.
ತಪ್ಪದೆ ತೆಂಗಿನ ಎಣ್ಣೆ ಬಳಸಬೇಕಂತೆ. ಕೂದಲಿಗೆ ಮಾತ್ರವಲ್ಲದೆ ನಾನು ಅಡುಗೆಗೂ ತೆಂಗಿನ ಎಣ್ಣೆ ಹೆಚ್ಚು ಉಪಯೋಗಿಸುತ್ತೇನೆ. ಆರೋಗ್ಯಕ್ಕೆ ಒಳ್ಳೆಯದು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.