ಬಟ್ಟೆ ಸ್ಟೈಲ್ ಬದಲಾಯಿಸಮ್ಮ: ಅನಾರ್ಕಲಿ ಧರಿಸಿದ ಐಶ್ವರ್ಯ ರೈ ಟ್ರೋಲ್
ಮತ್ತೊಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಐಶ್ವರ್ಯ ರೈ. ಮಾಡ್ರನ್ ಡ್ರೆಸ್ ಧರಿಸಿದ್ದರೂ ಟ್ರೋಲ್ ಸೆಲ್ವಾರ್ ಧರಿಸಿದ್ದರೂ ಟ್ರೋಲ್.....

ಬಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿರುವ ಮಂಗಳೂರು ಸುಂದರಿ ಐಶ್ವರ್ಯ ರೈ ಪದೇ ಪದೇ ತಮ್ಮ ಸ್ಟೈಲಿಂಗ್‌ಗೆ ಟ್ರೋಲ್ ಆಗುತ್ತಿದ್ದಾರೆ.
ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯ ರೈ ಧರಿಸಿದ ಡ್ರೆಸ್ ಮತ್ತು ಮೇಕಪ್ ಚೆನ್ನಾಗಿಲ್ಲ ಎಂದು ಸಖತ್ ಟ್ರೋಲ್ ಆಗಿದ್ದರು.
ಕಾನ್ಸ್ ನಂತರ ಡೆಲ್ಲಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ಈ ವೇಳೆ ಬಿಳಿ ಬಣ್ಣದ ಅನಾರ್ಕಲಿಗೆ ಕೆಂಪು ಮತ್ತು ಕಪ್ಪು ಬಣ್ಣದ ಡಿಸೈನ್‌ಗಳಿದೆ.
ಈ ಕಾರ್ಯಕ್ರಮ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ. ಆಕೆಯ ಡ್ರೆಸ್ ಮತ್ತು ಮೇಕಪ್ ಬಗ್ಗೆ ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ.
'ಐಶ್ವರ್ಯ ರೈ ನೀವು ಮೊದಲು ನಿಮ್ಮ ಡ್ರೆಸಿಂಗ್ ಸ್ಟೈಲ್ ಬದಲಾಯಿಸಿ'ಮತ್ತು 'ಐಶ್ವರ್ಯ ಮೊದಲ ಒಳ್ಳೆ ಡಿಸೈನರ್‌ನ ಆಯ್ಕೆ ಮಾಡಬೇಕು. ಡಯಟ್ ಕೂಡ ಸರಿ ಇಲ್ಲ ಮುಖದಲ್ಲಿ ರಿಂಕಲ್ಸ್ ಎದ್ದು ಕಾಣುತ್ತಿದೆ' ಎಂದು ಕಾಮೆಂಟ್ ಮಾಡಿದ್ದಾರೆ
ಐಶ್ವರ್ಯ ರೈ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾರೂ ಪುತ್ರಿ ಆರಾಧ್ಯಾರನ್ನು ಕರೆದುಕೊಂಡು ಹೋಗುತ್ತಾರೆ. ಹೀಗಾಗಿ ಮಗಳನ್ನು ಕ್ಯಾಮೆರಾಯಿಂದ ದೂರ ಇಡಬೇಕು ಎಂದು ಸಲಹೆ ಕೊಡುತ್ತಿದ್ದಾರೆ.