ಅಪ್ಪ ಮಗ ಇಬ್ಬರ ಜೊತೆಯಲ್ಲೂ ನಟಿಸಿದ ಬಾಲಿವುಡ್ ತಾರೆಯರು
ವಿನೋದ್ ಖನ್ನಾ ಅವರ ಪುತ್ರ ಅಕ್ಷಯ್ ಖನ್ನಾ ಅವರಿಗೆ 45 ವರ್ಷ. ಮಾರ್ಚ್ 28, 1975 ರಂದು ಮುಂಬೈನಲ್ಲಿ ಜನಿಸಿದ ಅಕ್ಷಯ್ ಖನ್ನಾ 23 ವರ್ಷಗಳ ಹಿಂದೆ 1997 ರ 'ಹಿಮಾಲಯ ಪುತ್ರ' ಚಿತ್ರದ ಮೂಲಕ ಕರಿಯರ್ ಶುರುಮಾಡಿದ್ದರು. ಅಕ್ಷಯ್ ಖನ್ನಾ 'ಮೊಹಬ್ಬತ್' ಚಿತ್ರದಲ್ಲಿ, ಮಾಧುರಿ ದೀಕ್ಷಿತ್ ಜೊತೆ ನಟಿಸಿದ್ದಾರೆ. ಮಾಧುರಿ ದೀಕ್ಷಿತ್ ಅಕ್ಷಯ್ ಖನ್ನಾ ಮತ್ತು ತಂದೆ ವಿನೋದ್ ಖನ್ನಾ ಇಬ್ಬರೊಂದಿಗೂ ನಟಿಸಿದ ತಾರೆ. ಮಾಧುರಿ ವಿನೋದ್ ಖನ್ನಾ ಅವರೊಂದಿಗೆ 'ದಯಾವನ್' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಮಾಧುರಿ ಮಾತ್ರವಲ್ಲ, ತಂದೆ ಮತ್ತು ಮಗ ಇಬ್ಬರೊಂದಿಗೂ ಸ್ಕ್ರೀನ್ ಶೇರ್ ಮಾಡಿಕೊಂಡ ಹಲವು ನಟಿಯರು ಬಾಲಿವುಡ್ನಲ್ಲಿದ್ದಾರೆ. ಅವರು ಯಾರು ತಿಳಿಯೋಣ ಬನ್ನಿ.
ಮಾಧುರಿ ದೀಕ್ಷಿತ್ ಅಪ್ಪ ವಿನೋದ್ ಖನ್ನಾ ಮತ್ತು ಮಗ ಅಕ್ಷಯ್ ಖನ್ನಾ ಇಬ್ಬರ ಜೊತೆ ಚಿತ್ರದಲ್ಲಿ ರೊಮ್ಯಾನ್ಸ್ ಮಾಡಿದ ಬಾಲಿವುಡ್ ಬ್ಯೂಟಿ.
ಐಶ್ವರ್ಯಾ ರೈ: ಅಮಿತಾಬ್ (ಮೊಹಬ್ಬತೆ) - ಅಭಿಷೇಕ್ (ಗುರು)
ಅನುಷ್ಕಾ ಶರ್ಮಾ: ಪಂಕಜ್ ಕಪೂರ್ (ಮಾಟ್ರು ಕಿ ಬಿಜಲಿ ಕಾ ಮನ್ ಡೋಲಾ) - ಶಾಹಿದ್ ಕಪೂರ್ (ಬಾದ್ಮಾಶ್ ಕಂಪನಿ)
ದೀಪಿಕಾ ಪಡುಕೋಣೆ: ಅಮಿತಾಬ್ (ಪಿಕು) - ಅಭಿಷೇಕ್ (ಕೇಲೆ ಹಮ್ ಜಿ ಜಾನ್ ಸೆ)
ಡಿಂಪಲ್ ಕಪಾಡಿಯಾ: ಧರ್ಮೇಂದ್ರ (ಇನ್ಸಾನಿಯತ್ ಕೆ ದುಶಮನ್) - ಸನ್ನಿ ಡಿಯೋಲ್ (ಮಂಜಿಲ್ ಮಂಜಿಲ್ )
ಡಿಂಪಲ್ ಕಪಾಡಿಯಾ: ವಿನೋದ್ ಖನ್ನಾ (ಕೂನ್ ಕಾ ಕರ್ಜ್) - ಅಕ್ಷಯ್ ಖನ್ನಾ (ದಿಲ್ ಚಾಹತಾ ಹೈ)
ಕರೀನಾ ಕಪೂರ್: ಪಂಕಜ್ ಕಪೂರ್ (ಮೆ ಪ್ಯಾರ್ ಕಿ ದಿವಾನಿ ಹೂ) - ಶಾಹಿದ್ ಕಪೂರ್ (ಜಬ್ ವಿ ಮೆಟ್)
ಕರಿಷ್ಮಾ ಕಪೂರ್: ಅಮಿತಾಬ್ (ಹಾ ಮೇನೆ ಭಿ ಪ್ಯಾರ್ ಕಿಯಾ) - ಅಭಿಷೇಕ್ (ಏಕ್ ರಿಶ್ತಾ)
ಪ್ರೀತಿ ಜಿಂಟಾ - ಅಮಿತಾಬ್ - ಅಭಿಷೇಕ್
ಪ್ರಿಯಾಂಕಾ ಚೋಪ್ರಾ: ಅಮಿತಾಬ್ (ವಕ್ತ್) - ಅಭಿಷೇಕ್ (ದೋಸ್ತಾನಾ)
ರಾಣಿ ಮುಖರ್ಜಿ: ಅಮಿತಾಬ್ (ಬ್ಲಾಕ್) - ಅಭಿಷೇಕ್ (ಯುವ)
ರೇಖಾ: ರಾಕೇಶ್ ರೋಶನ್ (ಕುಬ್ಸೂರತ್) - ಹೃತಿಕ್ ರೋಷನ್ (ಕ್ರಿಶ್ 2)
ಸೋನಮ್ ಕಪೂರ್: ರಿಷಿ ಕಪೂರ್ (ಬೇವಾಕುಫಿಯಾ) - ರಣಬೀರ್ ಕಪೂರ್ (ಸವಾರಿಯಾ)
ಶ್ರೀದೇವಿ: ಧರ್ಮೇಂದ್ರ (ಫರಿಷ್ತೆ) - ಸನ್ನಿ ಡಿಯೋಲ್ (ರಾಮ್ ಅವತಾರ್)