- Home
- Entertainment
- Cine World
- ಉತ್ತರಾಖಂಡಲ್ಲಿ ನನ್ನ ಹೆಸರಿನ ದೇವಸ್ಥಾನ ಇದೆ… ಸೌತ್’ನಲ್ಲೂ ಬೇಕು… ಮತ್ತೊಮ್ಮೆ ಟ್ರೋಲ್ ಆಗ್ಬಿಟ್ಳು ಐರಾವತ ಬೆಡಗಿ
ಉತ್ತರಾಖಂಡಲ್ಲಿ ನನ್ನ ಹೆಸರಿನ ದೇವಸ್ಥಾನ ಇದೆ… ಸೌತ್’ನಲ್ಲೂ ಬೇಕು… ಮತ್ತೊಮ್ಮೆ ಟ್ರೋಲ್ ಆಗ್ಬಿಟ್ಳು ಐರಾವತ ಬೆಡಗಿ
ಊರ್ವಶಿ ರೌಟೇಲಾ ತಮ್ಮ ವಿಚಿತ್ರ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಇದೀಗ ನಟಿ ಉತ್ತರಾಖಂಡದಲ್ಲಿ ತಮ್ಮ ಹೆಸರಿನಲ್ಲಿ ಒಂದು ದೇವಸ್ಥಾನವಿದೆ ಮತ್ತು ದಕ್ಷಿಣದಲ್ಲಿಯೂ ಇದೇ ರೀತಿಯದ್ದನ್ನು ಬಯಸುತ್ತೇನೆ ಎಂದು ಹೇಳುವ ಮೂಲಕ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.

ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ತಮ್ಮ ಚಿತ್ರ ವಿಚಿತ್ರ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ನಟಿ ಊರ್ವಶಿ, ಇದೀಗ ಹೊಸ ಹೇಳಿಕೆಯಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಡಾಕು ಮಹಾರಾಜ್ ಚಿತ್ರದಿಂದಾಗಿ ನಗೆಪಾಟಲಿಗೆ ಈಡಾಗಿದ್ದ ನಟಿ ಈಗ ಮತ್ತೊಂದು ವಿಚಿತ್ರ ಹೇಳಿಕೆ ನೀಡಿದ್ದಾರೆ. ಉರ್ವಶಿ ಇತ್ತೀಚೆಗೆ ಮೀಡಿಯಾ ಜೊತೆ ಮಾತನಾಡುತ್ತಾ, ಉತ್ತರಾಖಂಡದಲ್ಲಿ ನನ್ನ ಹೆಸರಿನಲ್ಲಿ ಒಂದು ದೇವಸ್ಥಾನವಿದೆ ಮತ್ತು ದಕ್ಷಿಣ ಭಾರತದಲ್ಲೂ ನನ್ನ ಹೆಸರಿನಲ್ಲಿ ಒಂದು ದೇವಸ್ಥಾನ ನಿರ್ಮಿಸಬೇಕೆಂದು ಹೇಳಿದ್ದಾರೆ.
ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂಭಾಷಣೆಯಲ್ಲಿ ಉರ್ವಶಿ ರೌಟೇಲಾ, 'ಉತ್ತರಾಖಂಡದಲ್ಲಿ ನನ್ನ ಹೆಸರಿನಲ್ಲಿ ಉರ್ವಶಿ ಎಂಬ ದೇವಾಲಯ (Urvashi Temple) ಈಗಾಗಲೇ ಇದೆ. ನೀವು ಬದರಿನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಹೋದಾಗ, ಅದರ ಪಕ್ಕದಲ್ಲಿಯೇ ಒಂದು ದೇವಸ್ಥಾನವಿರುತ್ತದೆ, ಅದರ ಹೆಸರು ಊರ್ವಶಿ. ಮತ್ತು ಇದು ನನಗೆ ಸಮರ್ಪಿಸಲಾಗಿದೆ ಎಂದಿದ್ದಾರೆ.
Urvashi Rautela
ಸುಮಾರು ಒಂದೂವರೆ ವರ್ಷಗಳ ಅಂತರದ ನಂತರ, ಮೆಗಾ ಸ್ಟಾರ್ ಚಿರಂಜೀವಿ (Mega Star Chiranjeevi) ಅವರೊಂದಿಗೆ ನಾನು ಪಾದಾರ್ಪಣೆ ಮಾಡಿದೆ. ನಂತರ ನಾನು ಪವನ್ ಕಲ್ಯಾಣ್ ಅವರ ಜೊತೆ ಕೆಲಸ ಮಾಡಿದೆ. ನಂತರ ನಾನು ಬಾಲಾ ಬಾಬು ಜೊತೆ ಕೆಲಸ ಮಾಡಿದೆ. ಈಗ ನನ್ನ ಒಂದೇ ಆಸೆ ಏನೆಂದರೆ, ಅವರಿಗಾಗಿ ದೇವಾಲಯಗಳಿದ್ದರೆ, ದಕ್ಷಿಣದಲ್ಲಿರುವ ನನ್ನ ಅಭಿಮಾನಿಗಳಿಗಾಗಿ, ನನಗಾಗಿ ಅಲ್ಲೂ ಇಂತಹದ್ದೇನಾದರೂ ಆಗಬೇಕು.
ಜನರು ದರ್ಶನ ಪಡೆಯಲು ನಿಮ್ಮ ದೇವಸ್ಥಾನಕ್ಕೆ ಹೋಗುತ್ತಾರೆಯೇ ಎನ್ನುವ ಪ್ರಶ್ನೆಗೆ ಊರ್ವಶಿ ನಗುತ್ತಾ, "ಈಗಾಗಲೇ ದೇವಸ್ಥಾನ ಇರೋದರಿಂದ ಅವರು ಅದನ್ನೇ ಮಾಡುತ್ತಾರೆ" ಎಂದು ಉತ್ತರಿಸಿದರು. ಜನರು ನಿಮ್ಮಿಂದ ಆಶೀರ್ವಾದ ಪಡೆಯುತ್ತಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಊರ್ವಶಿ ಜನರು ದೇವಾಲಯದಲ್ಲಿ ಪ್ರಾರ್ಥಿಸುತ್ತಾರೆ, ಅಷ್ಟೇ ಅಲ್ಲ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ ಅವರಿಗೆ ಪ್ರಾರ್ಥಿಸುತ್ತಾರೆ ಮತ್ತು ಅವರ ಫೋಟೋಗಳಿಗೆ ಹೂಮಾಲೆಗಳನ್ನು ಅರ್ಪಿಸುತ್ತಾರೆ ಎಂದು ಉತ್ತರಿಸಿದ್ದಾರೆ.
ಊರ್ವಶಿ ಹೇಳುವಂತೆ ಜನರು ಆಕೆಯನ್ನು 'ದಂದಮಾ ಮಾಯಿ' ಎಂದು ಕರೆಯುತ್ತಾರಂತೆ. ಇದಕ್ಕೆ ಸಂದರ್ಶಕರು ನೀವು ನಿಮ್ಮನ್ನು ದೇವರೆಂದು ಪರಿಗಣಿಸುತ್ತೀರಾ ಎಂದು ಕೇಳಿದಾಗ, ಊರ್ವಶಿ ಪ್ರತಿ ಹುಡುಗಿಯನ್ನು ದೇವರ ರೂಪವೆಂದು ಪರಿಗಣಿಸುತ್ತೇನೆ, ಹಾಗಾಗಿ ಯಾವುದೇ ಹುಡುಗಿ ದೇವತೆಯಾಗಬಹುದು ಎಂದಿದ್ದಾರೆ.
ಊರ್ವಶಿ ರೌತೆಲಾ ಸದ್ಯ ಸನ್ನಿ ಡಿಯೋಲ್ (Sunney Deol) ಮತ್ತು ರಣದೀಪ್ ಹೂಡಾ ಅವರ ಜಾತ್ ಚಿತ್ರದಲ್ಲಿ ಐಟಂ ಸಾಂಗ್ ಮಾಡಿದ್ದಾರೆ ಮತ್ತು ಇದರಿಂದಾಗಿ ಅವರು ಸುದ್ದಿಯಲ್ಲಿದ್ದಾರೆ. ಅವರು ಕೊನೆಯದಾಗಿ ನಂದಮೂರಿ ಬಾಲಕೃಷ್ಣ ಅಭಿನಯದ ಡಾಕು ಮಹಾರಾಜ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.