Rakhi Sawanth Life: ಹೀರೋಯಿನ್ ಆಗಲು ಮನೆ ಬಿಟ್ಟು ಬಂದು, ಐಟಂ ಗರ್ಲ್ ಆದ ನಟಿ!
ಬಾಲಿವುಡ್‌ನ (Bollywood) ವಿವಾದಗಳ ರಾಣಿ ಎಂದೇ ಖ್ಯಾತಿ ಪಡೆದಿರುವ ರಾಖಿ ಸಾವಂತ್ (Rakhi Sawant) 43 ವರ್ಷ ಪೂರೈಸಿದ್ದಾರೆ. 25 ನವೆಂಬರ್ 1978 ರಂದು ಮುಂಬೈನಲ್ಲಿ ಜನಿಸಿದ ರಾಖಿ ಬಾಲಿವುಡ್‌ನ ಫೇಮಸ್ ಹೆಸರು. ಅವರು ನಟನೆಯಲ್ಲಿ ಹೆಸರ ಮಾಡಿಲ್ಲವಾದರೂ ತಮ್ಮ ನೃತ್ಯದಿಂದ ಬಾಲಿವುಡ್‌ನಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿವರೆಗೆ ತಲುಪಲು ಅವರು ಸಾಕಷ್ಟು ಕಷ್ಟಪಡಬೇಕಾಯಿತು. ಅವರು ತಮ್ಮ ಕಠಿಣ ಪರಿಶ್ರಮದಿಂದ ಹೆಸರು ಮತ್ತು ಖ್ಯಾತಿಯನ್ನು ಪಡೆದರು. ಬಡತನದಿಂದ ಹಿಡಿದು ರಾಖಿ ತಮ್ಮ ಜೀವನದಲ್ಲಿ ಅನೇಕ ನೋವುಗಳನ್ನು ಎದುರಿಸಿದ್ದಾರೆ. ರಾಖಿಯ ನಿಜವಾದ ಹೆಸರು ನೀರು ಭೇದ ಎಂಬುವುದು ಬಹುಶಃ ಜನರಿಗೆ ತಿಳಿದಿಲ್ಲ. ಅವರು ಉದ್ಯಮಕ್ಕೆ ಪ್ರವೇಶಿಸಲು ತಮ್ಮ ಹೆಸರನ್ನು ಬದಲಾಯಿಸಿಕೊಂಡರು.
ಕೆಲವು ವರ್ಷಗಳ ಹಿಂದೆ, ರಾಖಿ ರಾಜೀವ್ ಖಂಡೇಲ್ವಾಲ್ ಅವರ ಜಜ್ಬಾತ್ ಶೋಗೆ ಹೋಗಿದ್ದರು, ಅದರಲ್ಲಿ ಅವರು ತಮ್ಮ ಜೀವನದ ನೋವನ್ನು ಹೇಳಿ ಕೊಂಡಿದ್ದರು. ಈ ನೋವನ್ನು ಹೇಳುವಾಗ ಅವರು ಅಳಲು ಪ್ರಾರಂಭಿಸಿದರು. ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾಗದಷ್ಟು ಭಾವುಕಳಾದರು.
ನನ್ನ ಕೈಗಳು ನಡುಗುತ್ತಿವೆ. ಸತ್ಯ ಹೇಳಲು ಭಯವಾಗುವುದಿಲ್ಲ. ನಾನು ತೀವ್ರ ಬಡತನದಲ್ಲಿ ಬೆಳೆದೆ. ನಾನು ತಾಯಿಯ ಹೊಟ್ಟೆಯಲ್ಲಿದ್ದಾಗ ನನ್ನ ತಾಯಿ ಕಲ್ಲುಗಳ ಮೇಲೆ ಅಡುಗೆ ಮಾಡುತ್ತಿದ್ದರು. ಬಾಲ್ಯದಲ್ಲಿ ನಮಗೆ ತಿನ್ನಲು ಆಹಾರ ಇರಲಿಲ್ಲ ಎಂದು ರಾಖಿ ಸಾವಂತ್ ಹೇಳಿದ್ದರು .
ಅಕ್ಕ ಪಕ್ಕ ಮನೆಯವರು ಮಾಡಿದ ಅಡುಗೆಯನ್ನು ತಾಯಿ ನಮಗೆ ಉಣಿಸಿ ಬೆಳೆಸಿದ್ದಾರೆ . ಹಾಗೇ ಹಿಂದೆ ತನ್ನ ಕುಟುಂಬವು ನನಗೆ ಚಿತ್ರರಂಗಕ್ಕೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಸಹ ರಾಖಿ ಬಹಿರಂಗಪಡಿಸಿದರು.
ಅವರು ಬಾಲ್ಯದಿಂದಲೂ ನೃತ್ಯ ಮತ್ತು ನಟನೆಯನ್ನು ತುಂಬಾ ಇಷ್ಟಪಡುತ್ತಿದ್ದರು. ಆದರೆ ಅವಳು ನೃತ್ಯ ಮಾಡುತ್ತಿದ್ದರೆ, ಅವರ ತಾಯಿಯ ಚಿಕ್ಕಪ್ಪ ಅವಳನ್ನು ತುಂಬಾ ಹೊಡೆಯುತ್ತಿದ್ದರು. ಏಕೆಂದರೆ ಅವರ ಕುಟುಂಬದಲ್ಲಿ ಹುಡುಗಿಯರು ನೃತ್ಯ ಮಾಡಲು ಅವಕಾಶವಿರಲಿಲ್ಲ ಎಂದು ರಾಖಿ ಸಂದರ್ಶನವೊಂದರಲ್ಲಿ ಹೇಳಿದರು.
ನಾನು ಯಾವಾಗಲೂ ಈ ಉದ್ಯಮದ ಭಾಗವಾಗಲು ಬಯಸುತ್ತಿದ್ದೆ. ಆದರೆ ನನ್ನ ಪೋಷಕರು ನನ್ನ ಮದುವೆ ಮಾಡಲು ಬಯಸಿದ್ದರು. ಹಾಗಾಗಿ ಮನೆಯಿಂದ ಓಡಿ ಹೋದೆ. ತಂದೆ-ತಾಯಿಯ ಹಣವನ್ನು ಕದ್ದು ಓಡಿಹೋದೆ. ಮನೆಯಿಂದ ತಪ್ಪಿಸಿಕೊಂಡ ನಂತರ, ಕುಟುಂಬವು ನನ್ನೊಂದಿಗೆ ಸಂಬಂಧವನ್ನು ಮುರಿದುಕೊಂಡಿತು, ಎಂದು ನೋವು ತೋಡಿಕೊಂಡರು.
ರಾಖಿ ಇಂಡಸ್ಟ್ರಿಗೆ ಬರಲು ಮನೆ ಬಿಟ್ಟಿದ್ದರು.ಆದರೆ ನಟನೆಯ ಬಗ್ಗೆ ಏನೂ ತಿಳಿದಿರಲಿಲ್ಲ, ಫೋಟೋಶೂಟ್ ಮಾಡಲು ತಿಳಿದಿರಲಿಲ್ಲ, ಅವರಿಗೆ ವಿದ್ಯಾಭ್ಯಾಸ ಸಹ ಇರಲಿಲ್ಲ, ಅಥವಾ ಐಟಂ ಹಾಡುಗಳು ಎಂದರೆ ಏನು ಎಂದು ತಿಳಿದಿರಲಿಲ್ಲ, ಅವರು ಹೀರೋಯಿನ್ ಆಗಬೇಕೆಂಬ ಆಸೆಯ ಕಾರಣ ಆಡಿಷನ್‌ಗೆ ಹೋಗಿದ್ದರು.
ಇಲ್ಲಿಗೆ ಬರಲು ಹಲವು ನಿರಾಕರಣೆಗಳನ್ನು ಎದುರಿಸಿದ್ದೇನೆ ಎಂದು ರಾಖಿ ಹೇಳಿದರು. ಅನೇಕ ನಿರಾಕರಣೆಗಳನ್ನು ಎದುರಿಸಿದ ನಂತರ, ರಾಖಿ ತನ್ನ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ನಿರ್ಧರಿಸಿದರು. ರಾಖಿ ಮೂಗು ಮತ್ತು ಸ್ತನ ಸರ್ಜರಿ ಮಾಡಿಸಿಕೊಂಡಿದ್ದಾರೆ.
ಅದರ ನಂತರ ಮತ್ತೆ ಆಡಿಷನ್ ಗೆ ಹೋದರು .ಇದರ ನಂತರ ರಾಖಿಗೆ ಜೋರು ಕಾ ಗುಲಾಮ್, ಜಿಸ್ ದೇಶ್ ಮೇ ಗಂಗಾ ರಹಾ ಹೈ, ಯೇ ರಾಸ್ತೆ ಮುಂತಾದ ಕೆಲವು ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನೀಡಲಾಯಿತು.
ಅವರ ಪರದೇಸಿಯಾ ಹಾಡು 2005ರಲ್ಲಿ ಬಿಡುಗಡೆಯಾಯಿತು, ಇದು ದೊಡ್ಡ ಹಿಟ್ ಆಯಿತು. ಇದು ಹಳೆಯ ಹಾಡಿನ ರೀಮಿಕ್ಸ್ ಆಗಿತ್ತು. ಈ ಹಾಡು ರಾಖಿಯನ್ನು ಐಟಂ ಗರ್ಲ್ ಆಗಿ ಫೇಮಸ್ ಮಾಡಿತ್ತು. ರಾಖಿಯ ಈ ಹಾಡು ರಾತ್ರೋರಾತ್ರಿ ಹಿಟ್ ಆಯಿತು, ಇಲ್ಲಿಯವರೆಗೆ ರಾಖಿ ಬಾಲಿವುಡ್‌ಗೆ ಹಲವು ಹಿಟ್ ಹಾಡುಗಳನ್ನು ನೀಡಿದ್ದಾರೆ.
2006 ರಲ್ಲಿ, ರಾಖಿ ಸಾವಂತ್ ಬಿಗ್ ಬಾಸ್ ಪ್ರವೇಶ ಪಡೆದರು ಮತ್ತು ಕೊನೆಯ ನಾಲ್ಕು ಫೈನಲಿಸ್ಟ್ ಒಬ್ಬರಾಗಿದ್ದರು. ಇದಾದ ನಂತರ ರಾಖಿ ಬಾಲಿವುಡ್ ನಲ್ಲಿ ಫೇಮಸ್ ಆದರು. ಬಿಗ್ ಬಾಸ್‌ನಿಂದ ಹೊರಬಂದ ನಂತರ ರಾಖಿ ಸಾವಂತ್ ಡ್ಯಾನ್ಸರ್ ಅಭಿಷೇಕ್ ಅವಸ್ಥಿ ಅವರೊಂದಿಗೆ ಮೂರು ವರ್ಷಗಳ ಕಾಲ ಸಂಬಂಧ ಹೊಂದಿದ್ದರು.