ಅಷ್ಟು ಹಾರಾಡುತ್ತಿದ್ದ ಅರ್ಜುನ್ ಕಪೂರ್-ಮಲೈಕಾ ಬ್ರೇಕ್ ಅಪ್ ಆಗಿದ್ದೇಕೆ?
18 ವರ್ಷದ ಮಗನಿದ್ದರೂ ತನಗಿಂತ ಸಣ್ಣವನಾದ ಅರ್ಜುನ್ ಕಪೂರ್ ಜೊತೆ ಡೇಟಿಂಗ್ (Dating) ಮಾಡುತ್ತಿದ್ದ ಮಲೈಕಾ ಆರೋರಾ (Malaika Arora) ಸಂಬಂಧ (Relationship) ಕಡಿದುಕೊಂಡಿದ್ದಾರೆಂಬ ಸುದ್ದಿ ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಮೊನ್ನೆ ತಾನೇ ಒಟ್ಟಿಗೆ ವೆಕೇಷನ್ ಮಾಡಿದ ಈ ಜೋಡಿಗೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಆಗ ಮದುವೆಯಾಗುತ್ತಾರೆ, ಈಗ ಮದುವೆಯಾಗುತ್ತಾರೆ ಎಂಬ ಸುದ್ದಿ ನಡುವೆಯೇ ಇದೀಗ ಬ್ರೇಕ್ ಅಪ್ ಆದರೆಂಬ ಸುದ್ದಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಜೋಡಿ ನಡುವೆ ಏನಾಗಿರಬಹುದು?
ಕಳೆದ ವರ್ಷ ತಮ್ಮ ಸಂಬಂಧವನ್ನು ಇನ್‌ಸ್ಟಾಗ್ರಾಮ್ ಮೂಲಕ ಅಧಿಕೃತಗೊಳಿಸಿದ ಮತ್ತು ಪರಸ್ಪರರ ಬಹಿರಂಗವಾಗಿ ಮಾತನಾಡಿದ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಇನ್ನು ಮುಂದೆ ಒಟ್ಟಿಗೆ ಇರುವುದಿಲ್ಲ ಎಂದು ಮನರಂಜನಾ ವೆಬ್‌ಸೈಟ್‌ನ ವರದಿ ಹೇಳುತ್ತಿದೆ.
Image: Instagram
ಸಾಮಾಜಿಕ ಮಾಧ್ಯಮ ಬಳಕೆದಾರರು ಚರ್ಚಿಸುವ ಅವರ ವಯಸ್ಸಿನ ಅಂತರ ಮತ್ತು ಟ್ರೋಲ್‌ಗಳಿಂದ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಇತ್ತೀಚೆಗೆ ಅರ್ಜುನ್ ಮತ್ತು ಮಲೈಕಾ ತಿಳಿಸಿದ್ದರು. ಆದರೆ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರ ಸಂಬಂಧವು ಹಳಸಿದೆ ಎಂದು ಹಲವು ಮನೋರಂಜನಾ ಮಾಧ್ಯಮಗಳು ವರದಿ ಮಾಡುತ್ತಿವೆ.
ಅರೋರಾ ಅವರ ಮನೆಗೆ ಸಮೀಪದಲ್ಲಿರುವ ತನ್ನ ಸಹೋದರಿ ರಿಯಾ ಕಪೂರ್ ಅವರ ಮನೆಯ ಹೊರಗೆ ಅರ್ಜುನ್ ಕಾಣಿಸಿಕೊಂಡಿದ್ದರೂ, ಮಲೈಕಾ ಅವರನ್ನು ಹಲವು ದಿನಗಳಿಂದ ಭೇಟಿ ಮಾಡಿಲ್ಲವಂತೆ. ಅದೇ ಸಮಯದಲ್ಲಿ ಮಲೈಕಾ ಕೂಡ ತನ್ನ ಮನೆಯಿಂದ ಹೊರಬರದೆ ತನ್ನನ್ನು ತಾನು ಪ್ರತ್ಯೇಕಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಹತ್ತಿರದಲ್ಲಿರುವಾಗ ಅರ್ಜುನ್ ಯಾವಾಗಲೂ ಮಲೈಕಾ ಮನೆಗೆ ಭೇಟಿ ನೀಡುತ್ತಾರೆ. ಕಳೆದ ಕೆಲವು ವಾರಗಳಿಂದ ನಗರದಲ್ಲಿ ಡಿನ್ನರ್ ಅಥವಾ ಕಾಫಿ ಡೇಟ್‌ಗಳಲ್ಲಿ ಅವರಿಬ್ಬರು ಕಾಣಿಸಿಕೊಂಡಿಲ್ಲ. ಸದಾ ಒಬ್ಬರಿಗೊಬ್ಬರು ಅಂಟಿಕೊಂಡಿರುತ್ತಿದ್ದರು. ಅದೇನಾಯಿತೋ ಎಂದು ಬಾಲಿವುಡ್ ಮಾತನಾಡುತ್ತಿದೆ.
ಹಾಗಾಗಿ ಅರ್ಜುನ್ ಮತ್ತು ಮಲೈಕಾ ನಡುವೆ ಎಲ್ಲವೂ ಸರಿಯಿಲ್ಲ ಎಂದು ಸ್ಪಷ್ಟವಾಗಿ ಸುಳಿವು ನೀಡಬಹುದು ಎಂದು ಮೂಲಗಳು ತಿಳಿಸಿವೆ. ಆದರೆ, ಇದು ಕೋವಿಡ್ 19 ಕಾರಣದಿಂದ ಸಹ ಇರಬಹುದು ಮತ್ತು ಅರ್ಜುನ್ ಇತ್ತೀಚೆಗೆ ಕೊರೋನಾ ವೈರಸ್ ಪಾಸಿಟಿವ್ ಆಗಿದ್ದರು.
ಅರ್ಜುನ್ ಮತ್ತು ಮಲೈಕಾ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆ ಹರಿಸುತ್ತಾರೆ ಮತ್ತು ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಎಂದು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಏಕೆಂದರೆ ಈ ಬ್ರೇಕಪ್ ದ್ದಿಯು ಅನೇಕ ಅಭಿಮಾನಿಗಳ ಹೃದಯಕ್ಕೆ ಅಘಾತ ನೀಡಿದಂತಾಗಿದೆ.
ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಮೂರು ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್ ಮಾಡುತ್ತಿದ್ದಾರೆ. ಅವರು ಇತ್ತೀಚೆಗೆ ಮಾಲ್ಡೀವ್ಸ್‌ಗೆ ಹಾಲಿಡೇಗಾಗಿ ಸಹ ಹೋಗಿದ್ದರು ಮತ್ತು ಆ ಸಮಯದ ರೋಮ್ಯಾಂಟಿಕ್ ಫೋಟೋ ಮತ್ತು ವೀಡಿಯೊಗಳನ್ನು ಅವರ Instagram ಪುಟಗಳಲ್ಲಿ ಹಂಚಿಕೊಂಡಿದ್ದಾರೆ.