MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Anushka Sharma: ಹೆರಿಗೆ ನಂತ್ರ ತಮ್ಮ ದೇಹವನ್ನು ಹೇಟ್ ಮಾಡಿದ್ರು ಕೊಹ್ಲಿ ಪತ್ನಿ

Anushka Sharma: ಹೆರಿಗೆ ನಂತ್ರ ತಮ್ಮ ದೇಹವನ್ನು ಹೇಟ್ ಮಾಡಿದ್ರು ಕೊಹ್ಲಿ ಪತ್ನಿ

Anushka Sharma: ವಮಿಕಾಳಿಗೆ ಅಮ್ಮನಾದ ಮೇಲೆ ತಮ್ಮ ದೇಹವನ್ನು ಹೇಟ್ ಮಾಡ್ತಿದ್ರು ಅನುಷ್ಕಾ ಪ್ರೆಗ್ನೆನ್ಸಿ ನಂತರದ ಬಾಡಿ ಕುರಿತು ಮಾತನಾಡಿದ ನಟಿ

2 Min read
Author : Suvarna News
| Updated : Nov 14 2021, 12:24 PM IST
Share this Photo Gallery
  • FB
  • TW
  • Linkdin
  • Whatsapp
110

ನಟಿ-ನಿರ್ಮಾಪಕಿ ಅನುಷ್ಕಾ ಶರ್ಮಾ(Anushka Sharma) ಇತ್ತೀಚಿನ ಸಂದರ್ಶನದಲ್ಲಿ ದೇಹದ ಕುರಿತು ಪಾಸಿಟಿವ್ ಯೋಚನೆ ಅಳವಡಿಸಿಕೊಳ್ಳುವ ಬಗ್ಗೆ ಮಾತನಾಡಿ ಮಹಿಳೆಯರಿಗೆ ಸೌಂದರ್ಯದ ಮಾನದಂಡಗಳ ಬಗ್ಗೆ ಮಾತನಾಡಿದ್ದಾರೆ.

210

ಜನವರಿಯಲ್ಲಿ ಮಗಳು ವಮಿಕಾ(Vamika) ಅವರನ್ನು ಸ್ವಾಗತಿಸಿದ ಅನುಷ್ಕಾ ಶರ್ಮಾ ಅವರು ದೇಹದ ಸೌಂದರ್ಯ ಕುರಿತು ಮಾತನಾಡಿದ್ದಾರೆ. ಹೆರಿಗೆಯಾಗುವ ಮೊದಲು ಒಂದು ವಾರದ ಹಿಂದೆ, ನಾನು ತಾಯಿಯಾಗುವುದಕ್ಕಿಂತ ಮುಂಚೆಯೇ, ಗರ್ಭಿಣಿಯಾಗುವ ಮುನ್ನ ಹಾಗೂ ಹೆರಿಗೆ ಆದ ಮೇಲೆ ಒಂದು ನಿರ್ದಿಷ್ಟ ರೀತಿಯಲ್ಲಿ ಹೆಣ್ಣು ಕಾಣಬೇಕೆಂದು ಮಹಿಳೆಯರ ಮೇಲೆ ಹೇರುವ ಈ ಒತ್ತಡದಿಂದಾಗಿ ನಾನು ಹೆದರುತ್ತಿದ್ದೆ. ಇದನ್ನು ನಾನು ಸ್ನೇಹಿತರಿಗೆ ಹೇಳುತ್ತಿದ್ದೆ.

310

ಸಾಕಷ್ಟು ಸ್ವಯಂ-ಅರಿವು ಇದ್ದರೂ ಈ ಚಿಂತೆ ನನ್ನನ್ನೂ ಕಾಡಿತ್ತು. ನಾನು ಯೋಚಿಸುತ್ತಲೇ ಇದ್ದೆ. ನಾನು ನನ್ನ ದೇಹವನ್ನು ದ್ವೇಷಿಸುತ್ತೇನೆಯೇ? ಎಂದು ನನಗೆ ಅನಿಸಿತು.

ಮಗಳಿಗೆ ಅತ್ಯಾಚಾರ ಬೆದರಿಕೆ: ವಿಕೃತ ಮನಸ್ಸುಗಳಿಗೆ ಅನುಷ್ಕಾ ಶರ್ಮಾ ಹೇಳಿದ್ದಿಷ್ಟು!

410

ಈಗ ನಾನು ತನ್ನ ದೇಹದಲ್ಲಿ ಹಿಂದೆಂದಿಗಿಂತಲೂ ಆರಾಮದಾಯಕಳಾಗಿದ್ದೇನೆ ಎಂದಿದ್ದಾರೆ ನಟಿ. ಇದು ಮನಸ್ಸಿನ ಸ್ಥಿತಿ ಎಂದು ನಾನು ಅರಿತುಕೊಂಡೆ. ಅದಕ್ಕೂ ನಿಮ್ಮ ನೋಟಕ್ಕೂ ಯಾವುದೇ ಸಂಬಂಧವಿಲ್ಲಎಂದು ಅವರು ಹೇಳಿದ್ದಾರೆ.

510

ನನ್ನ ದೇಹವು ಮೊದಲಿನಂತಿಲ್ಲ, ಹಿಂದಿನಷ್ಟು ಟೋನ್ಡ್ ಆಗಿಲ್ಲ. ನಾನು ಫಿಟ್ ಆಗಿರಲು ಇಷ್ಟಪಡುವ ಕಾರಣ ನಾನು ಕೆಲಸ ಮಾಡುತ್ತಿದ್ದೇನೆ. ನನ್ನ ದೇಹದಲ್ಲಿ ಹೆಚ್ಚು ಆರಾಮದಾಯಕವಾಗಿದ್ದೇನೆ ಎಂದಿದ್ದಾರೆ.

610

ನಟಿ ತಾನು ಹೇಗೆ ಕಾಣುತ್ತೇನೆ ಎಂದು ಪರಿಶೀಲಿಸುವ ಗೀಳನ್ನು ನಿಲ್ಲಿಸಿದ್ದೇನೆ. ಅದನ್ನು ದಾಟಿ ನಾನು ಬಹಳ ದೂರ ಬಂದಿದ್ದೇನೆ ಎಂದಿದ್ದಾರೆ ಅನುಷ್ಕಾ.

710

ನಾನು ಇನ್ನು ಮುಂದೆ ಚಿಂತಿಸುವುದಿಲ್ಲ. ನಾನು ಫೋಟೋ ಕ್ಲಿಕ್ ಮಾಡುತ್ತೇನೆ. ನಾನು ಹೇಗೆ ಕಾಣುತ್ತೇನೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸದೆ ಅದನ್ನು ಪೋಸ್ಟ್ ಮಾಡುತ್ತೇನೆ ಎಂದಿದ್ದಾರೆ ನಟಿ.

810

ನಟಿ-ನಿರ್ಮಾಪಕಿ ಅನುಷ್ಕಾ ಶರ್ಮಾ ಈ ವರ್ಷ ಜನವರಿ 11 ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಸ್ಟಾರ್ ದಂಪತಿಗಳು ಆಕೆಗೆ ವಾಮಿಕಾ ಎಂದು ಹೆಸರಿಟ್ಟರು. ಶಾಂಪೂ ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ದಂಪತಿಗಳು ಭೇಟಿಯಾದರು. ಅವರು 2017 ರಲ್ಲಿ ಇಟಲಿಯ ಟಸ್ಕನಿಯಲ್ಲಿ ಕೆಲವು ಕುಟುಂಬ ಸದಸ್ಯರ ಸಮ್ಮುಖದಲ್ಲಿಖಾಸಗಿ ಸಮಾರಂಭದಲ್ಲಿ ವಿವಾಹವಾದರು.

910

ರಬ್ ನೇ ಬನಾ ದಿ ಜೋಡಿ, ಪಿಕೆ, ಬ್ಯಾಂಡ್ ಬಾಜಾ ಬಾರಾತ್, ಸುಲ್ತಾನ್ ಮತ್ತು ಏ ದಿಲ್ ಹೈ ಮುಷ್ಕಿಲ್‌ನಂತಹ ಸಿನಿಮಾಗಳಲ್ಲಿ ಮಿಂಚಿದ ನಟಿ ಅನುಷ್ಕಾ ಶರ್ಮಾ, ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಸಹ-ನಟರಾಗಿ 2018 ರ ಸಿನಿಮಾ ಝೀರೋದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

1010

ನಿರ್ಮಾಪಕಿಯಾಗಿ ಅವರ ಕೊನೆಯ ಪ್ರಾಜೆಕ್ಟ್ ನೆಟ್‌ಫ್ಲಿಕ್ಸ್ ಸಿನಿಮಾ ಬಲ್ಬುಲ್ ಭಾರಿ ಯಶಸ್ಸನ್ನು ಕಂಡಿತು. ಅವರು ಕಳೆದ ವರ್ಷ ಅಮೆಜಾನ್ ಪ್ರೈಮ್ ವೀಡಿಯೊದ ಸ್ಮ್ಯಾಶ್ ಹಿಟ್ ವೆಬ್-ಸರಣಿ ಪಾಟಲ್ ಲೋಕ್ ಅನ್ನು ಸಹ ನಿರ್ಮಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಅನುಷ್ಕಾ ಶರ್ಮಾ
ಬಾಲಿವುಡ್
ನಟಿ

Latest Videos
Recommended Stories
Recommended image1
ರಶ್ಮಿಕಾಗೆ ವಾರ್ನಿಂಗ್ ಮಾಡಿದ್ದ ಅತ್ತೆ.. ಅದೊಂದು ಕಂಡೀಷನ್‌ ಒಪ್ಪಿಯೇ ವಿಜಯ್ ಮನೆ ಸೇರಲು ಓಕೆ ಎಂದಿರೋ ರಶ್ಮಿಕಾ ಮಂದಣ್ಣ!
Recommended image2
'ಮೈ ಡಾರ್ಲಿಂಗ್ ರುಷಿ' ಎಂದು ಸೊಸೆಯನ್ನು ಕರೆದು ಮುದ್ದಾಡಿದ ಅತ್ತೆ ಮಾಧವಿ; ವಿಜಯ್ ರಿಯಾಕ್ಷನ್ ಏನಿತ್ತು ಗೊತ್ತಾ?
Recommended image3
ವಿಜಯ್​ ಜೊತೆ 2018ರಲ್ಲಿ ಮೊದಲ ಬಾರಿ ಲಿಪ್​ಲಾಕ್​​: ಆ ಶಾಕಿಂಗ್ ಅನುಭವ ನೆನಪಿಸಿಕೊಂಡ Rashmika Mandanna
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved