- Home
- Entertainment
- Cine World
- ಮದುವೆ, ಕುಟುಂಬಕ್ಕಾಗಿ 'ತನ್ನನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ' ಎಂದಿದ್ರು ಐಶ್ವರ್ಯಾ ರೈ!
ಮದುವೆ, ಕುಟುಂಬಕ್ಕಾಗಿ 'ತನ್ನನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ' ಎಂದಿದ್ರು ಐಶ್ವರ್ಯಾ ರೈ!
ಸಿನಿಮಾ ಮಾಡದೇ ಹೋದರೂ, ಐಶ್ವರ್ಯಾ ರೈ ಮಗಳು ಆರಾಧ್ಯಳೊಂದಿಗೆ ಕಾರ್ಯಕ್ರಮ ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಐಶ್ವರ್ಯಾ ಅವರ ವೃತ್ತಿ ಮತ್ತು ಕುಟುಂಬ ಎರಡಕ್ಕೂ ಬದ್ಧರಾಗಿದ್ದು, ಅವರು ಹಿಂದೊಮ್ಮ ತಮ್ಮ ತನದ ಬಗ್ಗೆ ಹೇಳಿದ ಹೇಳಿಕೆಯೊಂದು ಇದೀಗ ಮತ್ತೆ ಸದ್ದು ಮಾಡುತ್ತಿದೆ.

ಬಾಲಿವುಡ್‌ನ ಅತ್ಯಂತ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರಾದ ಐಶ್ವರ್ಯಾ ರೈ ಬಚ್ಚನ್, ಮದುವೆ ಮತ್ತು ಕೌಟುಂಬಿಕ ಜೀವನಕ್ಕಾಗಿ ತಾವು ಎಂದಿಗೂ ತನ್ನ ಸ್ವಂತಿಕೆ ಕಳೆದುಕೊಳ್ಳುವುದಿಲ್ಲ ಎಂದಿದ್ದರು. ಅಭಿಷೇಕ್ ಬಚ್ಚನ್ ನಡುವೆ ಇವರ ಡಿವೋರ್ಸ್ ಸುದ್ದಿ ಹರಾದಾಡುತ್ತಿರುವ ಹೊತ್ತಲ್ಲ, ಐಶ್ವರ್ಯಾ ರೈ ಹಳೇ ಹೇಳಿಕೆಯೊಂದು ಇದೀಗ ಮತ್ತೆ ಸದ್ದು ಮಾಡುತ್ತಿದೆ.
ಪ್ರಸ್ತುತ ಸಾಕಷ್ಟು ಗಾಸಿಪ್‌ಗಳು ಇರೋದ್ರಿಂದ ಈ ಜೋಡಿಯ ಸಂಬಂಧದ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ದಂಪತಿ 2007ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದು, ತನ್ನ ಸೌಂದರ್ಯ ಮತ್ತು ಅಭಿನಯನದಿಂದ ಬಾಲಿವುಡ್‌ನಲ್ಲಿ ಛಾಪು ಮೂಡಿಸಿದವರು. ಮಣಿ ರತ್ನಂ ನಿರ್ದೇಶನದ ಪೊಯನ್ನನ್ ಸೆಲ್ವಿ ಚಿತ್ರದಲ್ಲಿ ನಂದಿನಿಯಾಗಿ ಅಭಿಮಾನಿಗಳ ಮನಗೆದ್ದಿದ್ದಾರೆ.
ಗುರು ಚಿತ್ರದ ಸೆಟ್‌ನಲ್ಲಿ ಅವರು ಅಭಿಷೇಕ್ ಅವರನ್ನು ಪ್ರೀತಿಸಿಲು ಆರಂಭಿಸಿ, ಮದುವೆಯಾದ ಐಶ್ವರ್ಯಾಗೆ 13 ವರ್ಷದ ಮಗಳು ಆರಾಧ್ಯಾ ಬಚ್ಚನ್ ಇದ್ದಾಳೆ. ಮದುವೆ ನಂತರ, ಐಶ್ವರ್ಯಾ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಮುಂದುವರಿಸಿದರು, ಆದರೂ ಆರಾಧ್ಯಾ ಜನಿಸಿದ ನಂತರ ಸ್ವಲ್ಪ ಬ್ರೇಕ್ ತೆಗೆದುಕೊಂಡು ಐಶ್ವರ್ಯಾ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾದರೂ, ಮಗಳ ಜೊತೆ ಅಲ್ಲಿ ಇಲ್ಲಿ ಕಾಣಿಸಿಕೊಂಡು, ಸುದ್ದಿಯಾಗುತ್ತಿರುತ್ತಾರೆ.
ಒಮ್ಮೆ ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ, ಕೌಟುಂಬಿಕ ಜೀವನ ಐಶ್ವರ್ಯಾ ಅವರ ವೃತ್ತಿಜೀವನವನ್ನು ಮಬ್ಗು ಗೊಳಿಸುತ್ತದೆಯೆ ಎಂಬ ಪ್ರಶ್ನೆ ಕೇಳಲಾಗಿತ್ತು. ಆಗ ತಾನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸ್ಪುರದ್ರೂಪಿ ಐಶ್ವರ್ಯಾ, ಯಾವುದೇ ಕಾರಣಕ್ಕೂ ಮದುವೆಗಾಗಿ ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳುವುದಿಲ್ಲವೆಂದು ಉತ್ತರಿಸಿದ್ದರು. ಹಾಗಂತೆ ತಾಯಿಯಾಗುವ ಬಗ್ಗೆ ಸುಳಿವು ನೀಡಿದ್ದರು. ಅಲ್ಲದೇ ಕ್ಯಾರೀರ್ ಯಾವುದೇ ಕಾರಣಕ್ಕೆ ಹಾಳಾಗದಂತೆ ಎಚ್ಚರ ವಹಿಸುವುದಾಗಿಯೂ ಹೇಳಿದ್ದರು. ಹೇಳಿದಂತೆಯೇ ಐಶ್ವರ್ಯಾ ಇದುವರೆಗೂ ಮಗಳನ್ನು ಹೆತ್ತಿದ್ದಲ್ಲದೇ, ಆಗೊಮ್ಮೆ ಈಗೊಮ್ಮೆ ಚಲಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ. ಆದರೆ, ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ, ಐಶ್ ಬಾಲಲ್ಲಿ ಬಿರುಗಾಳಿ ಎದ್ದಂತೆ ಕಾಣಿಸುತ್ತಿದೆ. ಪತಿ ಜೊತೆ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ.
ಐಶ್ವರ್ಯಾ ಅಮ್ಮನಾಗಿ ಮಗಳ ಬಗ್ಗೆ ತೆಗೆದುಕೊಳ್ಳುವ ಕೇರ್ ಬಗ್ಗೆ ಒಮ್ಮೆ ಅಭಿಷೇಕ್ ಬಚ್ಚನ್ ಸಹ ಹೇಳಿಕೊಂಡಿದ್ದರು. ಅಲ್ಲದೇ ಸಹಜವಾಗಿಯೇ ಮಗುವಾದಾಗ ಹೆಣ್ಣು ಮಕ್ಕಳಿಗೆ ಅದರಲ್ಲಿಯೂ ನಟಯರಿಗೆ ತಮ್ಮ ವೃತ್ತಿ ಜೀವನದಲ್ಲಿ ಹಿನ್ನಡೆಯಾಗುವಂತೆ, ಐಶ್ವರ್ಯೂ ಸಹ ನಟನೆಯಿಂದ ದೂರ ಉಳಿದರು. ಹಾಗಂಥ ಮತ್ತೆ ಒಳ್ಳೇ ಕಥೆ ಇರೋ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಾಗ ಪೊನ್ನಿಸೆಲ್ವನ್ ಅಂತ ಚಿತ್ರದಲ್ಲಿ ನಟಿಸಿ, ಬೇಷ್ ಎನಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.