Blockbuster ಮೂವಿ ನೀಡಿಯೂ, ಮೂಲೆ ಗುಂಪಾದ ಬಾಲಿವುಡ್ ನಟರು!
ಬಾಲಿವುಡ್‌ನಲ್ಲಿ ಹಲವು ನಟರು ಕನಸುಗಳನ್ನು ಹೊತ್ತು ಬರುತ್ತಾರೆ, ಆದರೆ ನೆಲೆ ನಿಲ್ಲೋದು ಮಾತ್ರ ಕೆಲವೊಂದಿಷ್ಟು ಜನ ಮಾತ್ರ. ಕೆಲವು ನಟರು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ ನಂತರವೂ ಬಾಲಿವುಡ್‌ನಲ್ಲಿ ನೆಲೆ ನಿಲ್ಲಲು ಸಾಧ್ಯವಾಗದೇ ಮೂಲೆ ಗುಂಪಾದರು. ಅಂತಹ ನಟರ ಬಗ್ಗೆ ತಿಳಿಯೋಣ.
ಭಾಗ್ಯಶ್ರೀ
ಮೆನೆ ಪ್ಯಾರ್ ಕಿಯಾ ಚಿತ್ರದಲ್ಲಿ ಸಲ್ಮಾನ್ ಖಾಗೆ ನಾಯಕಿಯಾಗಿ ನಟಿಸಿದ ನಟಿ ಭಾಗ್ಯಶ್ರೀ (Bhagyashree). ಈ ಚಿತ್ರವೂ ಹಿಟ್ ಆಗಿತ್ತು. ಆದರೆ ಮೊದಲ ಚಿತ್ರದಲ್ಲಿ ಭಾಗ್ಯಶ್ರೀ ಮಿಂಚಿದ್ದರು. ಆ ಕೂಡಲೇ ಮದುವೆಯಾಗಿದ್ದರಿಂದ ಬೆರಳೆಣಿಕೆಯಷ್ಟು ಚಿತ್ರದಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಆದರೆ ಅವರು ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿ ಇರುತ್ತಿದ್ರೆ ಆ ಕಾಲದ ನಂ 1 ನಟಿಯಾಗಿರುತ್ತಿದ್ರು.
ರಾಹುಲ್ ರಾಯ್
ಹಿಟ್ ಮ್ಯೂಸಿಕ್ ಒಳಗೊಂಡ 1990 ರ ಸೂಪರ್ ಹಿಟ್ ಚಿತ್ರ ಆಶಿಖಿ ಚಿತ್ರದಲ್ಲಿ ಅನು ಅಗರ್ವಾಲ್ ಜೊತೆ ನಾಯಕನಾಗಿ ನಟಿಸಿದ ನಟ ರಾಹುಲ್ ರಾಯ್ (Rahul Roy). ಈ ಚಿತ್ರ ಎಷ್ಟು ಸೂಪರ್ ಹಿಟ್ ಆಗಿತ್ತೆಂದರೆ, ಜನ ಈಗಲೂ ಅದರ ಹಾಡುಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ರಾಹುಲ್ ರಾಯ್, ನಂತರ ಕೆಲವು ಸಿನಿಮಾಗಳಲ್ಲಿ ನಟಿಸಿದರೂ ಅವರಿಗೆ ಬಿಗ್ ಹಿಟ್ ನೀಡಿಲ್ಲ.
ರಾಜೀವ್ ಕಪೂರ್
ರಾಜ್ ಕಪೂರ್ ಅವರ ಕಿರಿಯ ಪುತ್ರ ರಾಜೀವ್ ಕಪೂರ್ (Rajeev Kapoor) ಸಹ ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಗುರುತಿಸಿಕೊಂಡವರು. ಇವರು ರಾಮ್ ತೇರಿ ಗಂಗಾ ಮೈಲಿ ಮತ್ತು ಆಸ್ಮಾನ್ ನಂತಹ ಹಿಟ್ ಚಿತ್ರಗಳನ್ನು ನೀಡಿದವರು. ಆದರೆ ಇವರು ಸೂಪರ್ ಸ್ಟಾರ್ ಆಗುವಲ್ಲಿ ಮಾತ್ರ ಎಡವಿದರು.
ಗ್ರೇಸಿ ಸಿಂಗ್
ತಮ್ಮ ಕಣ್ಣುಗಳಿಂದಲೇ ಹೆಚ್ಚು ಮಾತನಾಡಿದ ಚೆಲುವೆ ಗ್ರೇಸಿ ಸಿಂಗ್ (Gracy Singh). ಇವರು ಲಗಾನ್, ಮುನ್ನ ಭಾಯಿ MBBS ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು. ಇವರ ಹಲವು ಚಿತ್ರಗಳು ಸೋತವು. ಆದರೆ 2015 ರ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ಮರೆಯಾದರು.
ಭೂಮಿಕಾ ಚಾವ್ಲಾ
ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದರೂ ಸಹ ಈ ಚೆಲುವೆ ಬಾಲಿವುಡ್ ಅಂಗಳದಲ್ಲಿ ನೆಲೆಯೂರುವಲ್ಲಿ ಎಡವಿದರು. ಸಲ್ಮಾನ್ ಖಾನ್ ಜೊತೆ ತೇರೆ ನಾಮ್ ಚಿತ್ರದಲ್ಲಿ ನಟಿಸಿ, ಅಭಿಮಾನಿಗಳ ಮನಸ್ಸು ಗೆದ್ದಿದ್ದ ಈ ನಟಿ (Bhumika Chawla) ನಂತರ ಹೆಚ್ಚಾಗಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು.
ಸ್ನೇಹಾ ಉಲ್ಲಾಳ್
ಸ್ನೇಹಾ ಉಲ್ಲಾಳ್ (Sneha Ullal) ಅವರನ್ನು ಐಶ್ವರ್ಯ ರೈ ಬಚ್ಚನ್ ಅವರ ತದ್ರೂಪಿ ಎಂದೇ ಹೇಳಲಾಗುತ್ತದೆ. ಅದಕ್ಕಾಗಿಯೇ ಈಕೆಯನ್ನು ಸಲ್ಮಾನ್ ಖಾನ್ ಅಭಿನಯದ ಲಕ್ಕಿ ಚಿತ್ರದಲ್ಲಿ ನಾಯಕಿಯನ್ನಾಗಿ ಮಾಡಲಾಯಿತು. ಈ ಚಿತ್ರ ಕೊಂಚ ಸದ್ದು ಮಾಡಿದ್ದರೂ, ಬಾಲಿವುಡ್ ನ ಟಾಪ್ ನಾಯಕಿಯರ ಲಿಸ್ಟ್’ನಲ್ಲಿ ಇವರ ಹೆಸರು ಸೇರಲೇ ಇಲ್ಲ. ಸದ್ಯ ಇವರು ತೆಲುಗು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ಫರ್ದೀನ್ ಖಾನ್
ಫರ್ದೀನ್ ಖಾನ್ ಬಾಲಿವುಡ್ ಗೆ ಕಾಲಿಟ್ಟಾಗ ಭಾರಿ ಸದ್ದು ಮಾಡಿದ್ದರು. ಇವರು ಬಾಲಿವುಡ್‌ನಲ್ಲಿ ಮಿಂಚಲಿದ್ದಾರೆ ಎನ್ನುವಂತೆ ಅಭಿಮಾನಿಗಳು ಮಾತನಾಡುತ್ತಿದ್ದರು. ಆದರೆ ಒಂದೆರಡು ಹಿಟ್ ಚಿತ್ರಗಳನ್ನು ನೀಡಿದ ಫರ್ದೀನ್ (Fardeen Khan) ನಂತರ, ಫ್ಲಾಪ್ ಚಿತ್ರಗಳನ್ನೇ ನೀಡಿದ್ದರು. 2010 ರ ನಂತರ ಸಿನಿಮಾ ರಂಗದಿಂದ ಸಂಪೂರ್ಣ ದೂರವಿದ್ದ ಫರ್ದೀನ್ ಇದೀಗ ಮತ್ತೆ ರೀ ಎಂಟ್ರಿ ಕೊಟ್ಟಿದ್ದಾರೆ.