- Home
- Entertainment
- Cine World
- 'ಕಣ್ಣಲ್ಲೇ ಕೊಲ್ಲೋರು, ಮೂರನೇ ವ್ಯಕ್ತಿ ಬಂದಾಗ... ಮಂಡಿಗೇ ಬೀಳುತ್ತೆ' ಅಂತ ಗೋವಿಂದನ ಪತ್ನಿ ಅಂದಿದ್ಯಾಕೆ?
'ಕಣ್ಣಲ್ಲೇ ಕೊಲ್ಲೋರು, ಮೂರನೇ ವ್ಯಕ್ತಿ ಬಂದಾಗ... ಮಂಡಿಗೇ ಬೀಳುತ್ತೆ' ಅಂತ ಗೋವಿಂದನ ಪತ್ನಿ ಅಂದಿದ್ಯಾಕೆ?
ಗೋವಿಂದ ಮತ್ತು ಸುನೀತಾ ಅಹುಜಾ 1987ರಲ್ಲಿ ಮದುವೆಯಾದರು. ಆಗ ಗೋವಿಂದ ಚಿತ್ರರಂಗಕ್ಕೆ ಕಾಲಿಡುತ್ತಿದ್ದರು. ಇಬ್ಬರೂ ಹಲವು ವರ್ಷಗಳ ಕಾಲ ತಮ್ಮ ಮದುವೆಯನ್ನು ರಹಸ್ಯವಾಗಿಟ್ಟಿದ್ದರು. ಅವರಿಗೆ ಟೀನಾ ಅಹುಜಾ ಎಂಬ ಮಗಳು ಮತ್ತು ಯಶವರ್ಧನ್ ಅಹುಜಾ ಎಂಬ ಮಗನಿದ್ದಾರೆ.

‘ಲಾಫ್ಟರ್ ಶೆಫ್ಸ್ 3’ ಶೋನಲ್ಲಿ ಸುನೀತಾ ಅಹುಜಾ, ಕೃಷ್ಣ ಅಭಿಷೇಕ್ ಮತ್ತು ಅವರ ಪತ್ನಿ ಕಶ್ಮೀರಾ ಶಾ ಅವರನ್ನು ಭೇಟಿಯಾದರು. ಈ ಕ್ಷಣ ಭಾವುಕವಾಗಿತ್ತು. ಆದರೆ, ಕೆಲವೇ ಹೊತ್ತಲ್ಲಿ ಸುನೀತಾ ತಮಾಷೆಯಾಗಿ ಚುರುಕಾದ ಹೇಳಿಕೆ ನೀಡಿದಾಗ ವಾತಾವರಣ ಬದಲಾಯಿತು. ಅವರ ಮಾತಿಗೆ ಸೆಟ್‌ನಲ್ಲಿದ್ದವರೆಲ್ಲರೂ ಅಚ್ಚರಿಪಟ್ಟರೂ, ವಾತಾವರಣ ಲವಲವಿಕೆಯಾಗಿಯೇ ಇತ್ತು.
ಶೋ ವೇಳೆ ಸುನೀತಾ, “ಕಶ್ಮೀರಾ, ನಾನೊಂದು ಮಾತು ಹೇಳ್ತೀನಿ, ಹೆಂಡತಿಗೆ ಗೌರವ ಕೊಡುವವನೇ ನಿಜವಾದ ಹೀರೋ. ಕಣ್ಣಲ್ಲೇ ಗುಂಡು ಹೊಡೆಯೋರು, ಮೂರನೇ ವ್ಯಕ್ತಿ ಬಂದಾಗ... ಮಂಡಿಗೇ ಗುಂಡು ಬೀಳುತ್ತೆ” ಎಂದರು. ಅವರ ಈ ಹೇಳಿಕೆಯನ್ನು 2024ರಲ್ಲಿ ಗೋವಿಂದಗೆ ಆದ ಅಪಘಾತಕ್ಕೆ ನೇರವಾಗಿ ಹೋಲಿಸಲಾಗಿದ್ದು, ಇದು ಎಲ್ಲರನ್ನೂ ಚಕಿತಗೊಳಿಸಿತು.
ಸುನೀತಾ ಮಾತಿಗೆ ಕೃಷ್ಣ ಅಭಿಷೇಕ್ ತಮಾಷೆಯಾಗಿ, “ನಾನು ಯಾರ ಪರ ವಹಿಸಬೇಕು ಅಂತಾನೇ ಗೊತ್ತಾಗ್ತಿಲ್ಲ” ಎಂದರು. ಅದಕ್ಕೆ ಸುನೀತಾ ನಗುತ್ತಾ, “ಭಯನೂ ಪಡ್ತಾರೆ, ಮಾಯನೂ ಆಗ್ತಾರೆ” ಎಂದರು. ಕಶ್ಮೀರಾ ತಮಾಷೆಗೆ ಕೃಷ್ಣ ಬಗ್ಗೆ ಹೇಳಿದಾಗ, ಸುನೀತಾ, “ಇದು ಅವರ ಅಭ್ಯಾಸ, ಅದಕ್ಕೆ ಗುಂಡು ಬೀಳಬೇಕು... ಇಲ್ಲಿ ನಾನು ಹೊಡೀದೇ ಇದ್ರೂ, ಹೇಗೆ ಬಿತ್ತೋ ಗೊತ್ತಿಲ್ಲ” ಎಂದು ಚಟಾಕಿ ಹಾರಿಸಿದರು.
ಅಕ್ಟೋಬರ್ 2024ರಲ್ಲಿ ಗೋವಿಂದ ಅವರೊಂದಿಗೆ ಒಂದು ಅಪಘಾತ ನಡೆದಿತ್ತು. ಅದರಲ್ಲಿ ಅವರ ಕಾಲಿಗೆ ಗುಂಡು ತಗುಲಿತ್ತು. ಅವರ ಮ್ಯಾನೇಜರ್ ಶಶಿ ಸಿನ್ಹಾ, “ಗೋವಿಂದ ಕೋಲ್ಕತ್ತಾಗೆ ಹೋಗಲು ಸಿದ್ಧರಾಗುತ್ತಿದ್ದರು. ತಮ್ಮ ಲೈಸೆನ್ಸ್ಡ್ ರಿವಾಲ್ವರ್ ಅನ್ನು ಕಪಾಟಿನಲ್ಲಿ ಇಡುವಾಗ, ಅದು ಕೈಜಾರಿ ಕೆಳಗೆ ಬಿದ್ದು ಗುಂಡು ಹಾರಿತು. ಅದು ಅವರ ಕಾಲಿಗೆ ತಗುಲಿದೆ” ಎಂದು ತಿಳಿಸಿದ್ದರು. ಸುನೀತಾ ಅವರ ಇತ್ತೀಚಿನ ಹೇಳಿಕೆ ಇದೇ ಘಟನೆಯನ್ನು ಸೂಚಿಸುವಂತಿದೆ.
ಗೋವಿಂದ ಮತ್ತು ಸುನೀತಾ ಅಹುಜಾ 1987ರಲ್ಲಿ ಮದುವೆಯಾದರು. ಆಗ ಗೋವಿಂದ ಚಿತ್ರರಂಗಕ್ಕೆ ಕಾಲಿಡುತ್ತಿದ್ದರು. ಇಬ್ಬರೂ ಹಲವು ವರ್ಷಗಳ ಕಾಲ ತಮ್ಮ ಮದುವೆಯನ್ನು ರಹಸ್ಯವಾಗಿಟ್ಟಿದ್ದರು. ಅವರಿಗೆ ಟೀನಾ ಅಹುಜಾ ಎಂಬ ಮಗಳು ಮತ್ತು ಯಶವರ್ಧನ್ ಅಹುಜಾ ಎಂಬ ಮಗನಿದ್ದಾರೆ. ಇತ್ತೀಚೆಗೆ ಸುನೀತಾ ಅವರ ಹೇಳಿಕೆಗಳಿಂದ ಗೋವಿಂದ ಅವರ ವೈಯಕ್ತಿಕ ಜೀವನ ನಿರಂತರವಾಗಿ ಚರ್ಚೆಯಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

