ಬಿಪಾಶಾ ಬಸು ಪ್ರೆಗ್ನೆಂಟಾ? ಹೌದೆನ್ನುತ್ತಿದ್ದಾರೆ ನೆಟಿಜನ್ಸ್
ಬಾಲಿವುಡ್‌ನ (Bollywood) ಫೇಮಸ್ ಕಪಲ್‌ಗಳಲ್ಲಿ (Famous Couples) ಒಬ್ಬರಾದ ಬಿಪಾಶಾ ಬಸು (Bipasha Basu) ಮತ್ತು ಕರಣ್ ಸಿಂಗ್ ಗ್ರೋವರ್ (Karan Singh Grover) ಇತ್ತೀಚೆಗೆ ಒಟ್ಟಿಗೆ ಕಾಣಿಸಿಕೊಂಡರು.ಅದರ ನಂತರ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಅವರು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಊಹಿಸಲು ಪ್ರಾರಂಭಿಸಿದ್ದಾರೆ. ಏಕೆ ಗೊತ್ತಾ?
ಕಳೆದ ರಾತ್ರಿ ಬಾಲಿವುಡ್ ನಟಿ ಬಿಪಾಶಾ ಬಸು ಮತ್ತು ಅವರ ಪತಿ ಕರಣ್ ಸಿಂಗ್ ಗ್ರೋವರ್ ಕಾಣಿಸಿಕೊಂಡರು ಮತ್ತು ಕರಣ್ ಸರಳವಾದ ಟಿ-ಶರ್ಟ್ ಮತ್ತು ಕಪ್ಪು ಜೀನ್ಸ್‌ನಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ಬಿಪಾಶಾ ಓವರ್ ಸೈಜ್ ಬ್ಲ್ಯೂ ಶರ್ಟ್ ಡ್ರೆಸ್ ಧರಿಸಿದ್ದರು.
ಪಾಪರಾಜಿಗಳಿಗೆ ಪೋಸ್ ನೀಡಿದ ದಂಪತಿಗಳು ಒಟ್ಟಿಗೆ ಸಖತ್ ಖುಷಿಯಾಗಿ ಕಾಣುತ್ತಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊರಬಿದ್ದ ಕೂಡಲೇ ಅನೇಕರು ‘ಅವರು ಖಂಡಿತವಾಗಿಯೂ ಗರ್ಭಿಣಿಯಾಗಿದ್ದಾರೆ. ಗ್ಲೋಯಿಂಗ್ ಮಮ್ಮಿ ಟು ಬಿ ಇನ್ ಓವರ್ ಸೈಜ್ ಡ್ರೆಸ್’ ಎಂದು ಕಾಮೆಂಟ್ ಮಾಡಲು ಆರಂಭಿಸಿದ್ದಾರೆ.
ಇನ್ನೊಬ್ಬರು 'ಅವರು ಗರ್ಭಿಣಿಯಾಗಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ. 'ಬಿಪಾಶಾ ಮೇಮ್ ಗರ್ಭಿಣಿ. ಏಕೆಂದರೆ ಅವರು ಕೆಲವು ತಿಂಗಳಿಂದ ಹೀಗೆ ಅವರು ಲೂಸ್ ಡ್ರೆಸ್ ಧರಿಸುತ್ತದ್ದಾರೆ. ಇದರಿಂದ ಅವರ ಬೇಬಿ ಟಮ್ಮಿ ಕಾಣಿಸಬಾರದು ಎಂದು. ಹೇಗಾದರು ಇರಲಿ ನಮಗಂತೂ ಖುಷಿಯಾಗಿದೆ' ಎಂದು ಮೂರನೆಯವರು ಬರೆದಿದ್ದಾರೆ.
ಮತ್ತೊಂದೆಡೆ, ಕ್ಯಾಶುಯಲ್ ಡೆನಿಮ್ ಮತ್ತು ಟಿ-ಶರ್ಟ್‌ನಲ್ಲಿ ಪೋಸ್ ನೀಡಿದ ಕರಣ್ ಸಿಂಗ್ ಗ್ರೋವರ್ ಅವರ ನಡವಳಿಕೆಯನ್ನು ಟ್ರೋಲ್ ಮಾಡಿದರು. ಬಿಪಾಶಾರ ಪತಿ ಕರಣ್ ವಿಚಿತ್ರವಾಗಿ ಬಿಹೇವ್ ಮಾಡುತ್ತಾರೆ ಎಂದು ನೆಟ್ಟಿಜನ್ಸ್ ತೀವ್ರವಾಗಿ ಕಾಮೆಂಟ್ ಮಾಡಿದ್ದಾರೆ.
ಅವುಗಳಲ್ಲಿ ಕೆಲವು ಕಾಮೆಂಟ್‌ಗಳು ಹೀಗಿವೆ - 'ಈ ರೀತಿ ಅಸಹಜವಾಗಿ ನನಗೆ ಮಾತ್ರ ಅನಿಸುತ್ತಿರುವುದಾ ಅಥವಾ ಇನ್ನೂ ಯಾರಾದಾದರೂ ಇದ್ದೀರಾ?', 'ಅವನು ನಿಜವಾಗಿಯೂ ವಿಲಕ್ಷಣ ವ್ಯಕ್ತಿಯಾಗಿ ಕಾಣುತ್ತಾನೆ', 'ಈ ಕರಣ್ ಅಸಹಜವಾಗಿ ಯಾಕೆ ಆಗಿದ್ದಾನೆ?.
ಇದೇ ಮೊದಲಲ್ಲ, ಹಲವು ಬಾರಿ ಹೀಗೆ ಬಿಪಾಶಾ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ವದಂತಿಗಳು ಮುಖ್ಯಾಂಶಗಳನ್ನು ಪಡೆದುಕೊಂಡಿವೆ. ಈ ಹಿಂದೆ ಬಿಪಾಶಾ ಗರ್ಭಧಾರಣೆಯ ವದಂತಿಗಳಿಗೆ ತೆರೆ ಎಳೆದಿದ್ದರು.
'ನನ್ನ ಕುಟುಂಬ ಜೀವನ ನನಗೆ ಮುಖ್ಯವಾಗಿದೆ. ಮತ್ತು ಆಗಾಗ ನನ್ನ ತೂಕವನ್ನು ಹೆಚ್ಚಿದಾಗ ನಾನು ಗರ್ಭಿಣಿಯಾಗಿರುವ ಬಗ್ಗೆ ಸಾಕಷ್ಟು ಊಹಾಪೋಹಗಳು ಇದ್ದವು ಎಂದು ನನಗೆ ತಿಳಿದಿದೆ' ಎಂದು ಸಂದರ್ಶನವೊಂದರಲ್ಲಿ, ಬಿಪಾಶಾ ಹೇಳಿದ್ದರು.
'ನಾನು ಫಿಟ್ನೆಸ್ ರಾಯಭಾರಿ ಎಂದು ನನಗೆ ತಿಳಿದಿದೆ. ಆದರೆ ನಾನು ಸ್ವಲ್ಪಮಟ್ಟಿಗೆ ಅದನ್ನು ಬಿಟ್ಟು, ಸ್ವಲ್ಪ ಜೀವನವನ್ನು ಕಳೆಯುವ ಸಮಯವಿದೆ. ನಾನು ಅನಾರೋಗ್ಯಕ್ಕೆ ಒಳಗಾಗುತ್ತಿದ್ದೇನೆ ಎಂದು ಅಲ್ಲ. ಆದರೆ ಜನರು ನನ್ನನ್ನು ನಿಜವಾದ ಮಗುವಿನೊಂದಿಗೆ ನೋಡುವವರೆಗೂ ಈ ರೀತಿಯ ಊಹಾಪೋಹಗಳು ಯಾವಾಗಲೂ ಇರುತ್ತವೆ' ಎಂದಿದ್ದಾರೆ.
ಬಿಪಾಶಾ ಮತ್ತು ಕರಣ್ 2016 ರಲ್ಲಿ ವಿವಾಹವಾದರು. ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್ ಪುಟಗಳಲ್ಲಿ ರೋಮ್ಯಾಂಟಿಕ್ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಬಿಪಾಶಾ ಮತ್ತು ಕರಣ್ ಚಿತ್ರರಂಗದ ಮೋಸ್ಟ್ ಲವ್ಡ್ ಕಲಪ್‌ಗಳಲ್ಲಿ ಒಬ್ಬರು ಎಂದು ಹೇಳಲಾಗುತ್ತದೆ.