Bipasha Basu - Karan Singh Grover ಮ್ಯಾರೀಡ್ ಲೈಫ್ ಸಿಕ್ರೇಟ್ ರಿವೀಲ್!
ಬಿಪಾಶಾ ಬಸು (Bipasha Basu) ಮತ್ತು ಕರಣ್ ಸಿಂಗ್ ಗ್ರೋವರ್ (Karan Singh Grover) ಇಂದು ತಮ್ಮ 6 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಜೋಡಿ ಪರಸ್ಪರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಇವರ ರೊಮ್ಯಾಂಟಿಕ್ ಫೋಟೋಗಳು ಮತ್ತು ವೀಡಿಯೊಗಳು ತುಂಬಿವೆ. ಬಿಪಾಶಾ ಹೇಗೆ ಎರಡು ಬಾರಿ ವಿಚ್ಛೇದನ ಪಡೆದಿರುವ ಕರಣ್ ಸಿಂಗ್ ಗ್ರೋವರ್ ಪ್ರೀತಿಯಲ್ಲಿ ಬಿದ್ದರು? ಅವರ ಸುಖೀ ವೈವಾಹಿಕ ಜೀವನದ ರಹಸ್ಯ ಇಲ್ಲಿದೆ
ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ 2016 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಲೋನ್ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು ಮತ್ತು ಈ ಸಿನಿಮಾದ ವೇಳೆಯಲ್ಲಿ ಇವರಿಬ್ಬರ ಪರಿಚಯವಾಗಿತ್ತು.
ಎರಡು ಬಾರಿ ಮದುವೆಯಾಗಿ ವಿಚ್ಛೇದನ ಪಡೆದಿದ್ದ ಕರಣ್ ಸಿಂಗ್ ಬಿಪಾಶಾ ಬಸುಗೆ ಮನಸೋತರು ಮತ್ತು ಅವರು ಡಿಸೆಂಬರ್ 31 ರ ರಾತ್ರಿ ಥೈಲ್ಯಾಂಡ್ನಲ್ಲಿ ಬಿಪಾಶಾಗೆ ಉಂಗುರದೊಂದಿಗೆ ಪ್ರಪೋಸ್ ಮಾಡಿದರು. ಬಿಪಾಶಾ ಬಸು ಕೂಡ ಒಪ್ಪಿಕೊಳ್ಳಲು ತಡಮಾಡಲಿಲ್ಲ.
ನಾನು ಮದುವೆಯಾಗುವ ಬಗ್ಗೆ ಯೋಚಿಸಿರಲಿಲ್ಲ. ಆದರೆ ಕರಣ್ ನನ್ನ ಪ್ರಪೋಸ್ ಮಾಡಿದಾಗ, ನಾನು ಶಾಕ್ ಆದೆ ಎಂದು ಬಿಪಾಶಾ ಸಂದರ್ಶನವೊಂದರಲ್ಲಿ ಹೇಳಿದರು. ಕರಣ್ ಹಿಂದೆ ಎರಡು ಬಾರಿ ಮದುವೆಯಾದರು ಎಂದು ಅವರು ತಲೆಕೆಡಿಸಿಕೊಳ್ಳಲಿಲ್ಲ. ಕರಣ್ ಅವರ ಹಿಂದಿನ ಲೈಫ್ ಬಗ್ಗೆ ಬಿಪಾಶಾ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಅವರ ಕುಟುಂಬ ಸದಸ್ಯರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.ನಟಿ ತನ್ನ ಕುಟುಂಬವನ್ನು ಮನವೊಲಿಸಿ ಮದುವೆಯಾದರು. ಈಗ ಇಬ್ಬರ ದಾಂಪತ್ಯ ಜೀವನ ತುಂಬಾ ಖುಷಿಯಿಂದ ಕೂಡಿದೆ.
ಸಂದರ್ಶನವೊಂದರಲ್ಲಿ ಇಬ್ಬರೂ ತಮ್ಮ ದಾಂಪತ್ಯದ ಯಶಸ್ಸಿನ ಗುಟ್ಟನ್ನೂ ಬಹಿರಂಗಪಡಿಸಿದ್ದಾರೆ. ನಮ್ಮ ನಡುವೆ ಜಗಳವಾದಾಗಲೆಲ್ಲಾ ನಾನು ಕ್ಷಮೆಯಾಚಿಸುತ್ತೇನೆ. ಏಕೆಂದರೆ ತಪ್ಪು ನಾನದಾಗಿರುತ್ತದೆ ಎಂದು ಕರಣ್ ಹೇಳಿದ್ದಾರೆ. ಬಿಪಾಶಾ ಅವರು ಹೆಚ್ಚು ತಪ್ಪುಗಳನ್ನು ಮಾಡುವುದರಿಂದ ನಾನು ಹೆಚ್ಚು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ ಮತ್ತು ಸಂಬಂಧಗಳಲ್ಲಿ ಕ್ಷಮಿಸಲು ಬರಬೇಕು. ಇದು ಸಂಬಂಧವನ್ನು ಗಟ್ಟಿಯಾಗಿ ಇಡುತ್ತದೆ ಎಂದು ಅವರು ಹೇಳಿದರು.
ನೀವು ಯಾರ ಕಡೆಗಾದರೂ ಆಕರ್ಷಿತರಾದಾಗ ಅವರ ಒಂದು ಒಂದು ವಿಷಯಕ್ಕಾಗಿ ಮಾತ್ರ ಅವರನ್ನು ಇಷ್ಷಪಡುವಿದ್ದಿಲ್ಲ ಎಂದು ಬಿಪಾಶಾ ಹೇಳಿದ್ದಾರೆ. ನಾನು ಕರಣ್ ಬಗ್ಗೆ ಎಲ್ಲವನ್ನೂ ಪ್ರೀತಿಸುತ್ತೇನೆ. ನಾನು ಯಾವ ಗುಣಗಳನ್ನು ಇಷ್ಟಪಡುತ್ತೇನೆ ಮತ್ತು ಯಾವುದನ್ನು ಇಷ್ಟಪಡುವುದಿಲ್ಲ ಎಂದು ನೀವು ಕೇಳಿದರೆ, ನಾನು ಯಾವುದೇ ಒಂದು ಅಂಶವನ್ನು ಪ್ರೀತಿಸಲಿಲ್ಲ ಎಂದು ಹೇಳುತ್ತೇನೆ.
ಇದೇ ವೇಳೆ, 'ಹೊರಗಿರುವಂತೆಯೇ ಮನಸ್ಸಿನಿಂದ ಸಹ ಬಿಪಾಶಾ ಅಷ್ಟೇ ಸುಂದರಿ. ಅವರು ದೊಡ್ಡ ಹೃದಯವನ್ನು ಹೊಂದಿದ್ದಾರೆ. ಇದು ಎಲ್ಲರ ಬಳಿ ಇರುವುದಿಲ್ಲ' ಎಂದು ಕರಣ್ ಸಿಂಗ್ ತಮ್ಮ ಪತ್ನಿಯನ್ನು ಹೊಗಳಿದ್ದಾರೆ.
ತಮ್ಮ ಸಂಬಂಧ ಯಾವತ್ತೂ ಬೇಸರ ತರಿಸುವುದಿಲ್ಲ ಎಂದು ಬಿಪಾಶಾ ಹೇಳಿದ್ದಾರೆ. ಇದಕ್ಕಾಗಿ, ಅವರು ಡಿನ್ನರ್ ಡೇಟ್ ಅಥವಾ ಔಟಿಂಗ್ಗಳಿಗೆ ಹೋಗುವುದಿಲ್ಲ. ಅವರಿಗೆ ಇವುಗಳ ಅವಶ್ಯಕತೆ ಇಲ್ಲ ಎಂದು ನಟಿ ಹೇಳುತ್ತಾರೆ.
ತಾನು ರೊಮ್ಯಾಂಟಿಕ್ ಅಲ್ಲ, ಆದರೆ ಕರಣ್ ತುಂಬಾ ರೋಮ್ಯಾಂಟಿಕ್. ಕವನವನ್ನೂ ಬರೆಯುತ್ತಾರೆ. ಮನೆಯಲ್ಲಿ, ಅವರು ಫುಲ್ ಮಸ್ತಿ ಮೂಡ್ನಲ್ಲಿ ಇರುತ್ತಾರೆ ಎಂದು ಎಂದು ನಟಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.