ಸ್ವಿಮ್ ಸೂಟ್‌ಗೆ ಡೈನಿಂಗ್ ಟೇಬಲ್ ಕವರ್ ಸುತ್ತಿಕೊಂಡು ರಸ್ತೆಗಿಳಿದ ನಟಿ ಉರ್ಫಿ ಫೋಟೋ ವೈರಲ್
ವೈರಲ್ ಆಯ್ತು ಉರ್ಫಿ ಜಾವೇದ್ ಮತ್ತೊಂದು ವಿಚಿತ್ರ ಲುಕ್. ಮುಂಬೈ ರಸ್ತೆಗಳಲ್ಲಿ ಈ ರೀತಿ ಓಡಾಡಲು ಧೈರ್ಯ ಬೇಕು ಎಂದ ನೆಟ್ಟಿಗರು...
ಹಿಂದಿ ಕಿರುತೆರೆ ನಟಿ, ಬಿಗ್ ಬಾಸ್ ಓಟಿಟಿ ಸ್ಪರ್ಧಿ ಹಾಗೂ Splitsvilla 14 ಸ್ಪರ್ಧಿ ಉರ್ಫಿ ಜಾವೇದ್ ಮುಂಬೈ ರಸ್ತೆಗಳಲ್ಲಿ ಸ್ವಿಮ್ ಸೂಟ್ ಧರಿಸಿ ಓಡಾಡುತ್ತಿದ್ದಾರೆ.
ಬ್ಲ್ಯಾಕ್ ಬಣ್ಣದ ವಿ-ಶೇಪ್ ಸ್ವಿಮ್ ಸೂಟ್ ಧರಿಸಿ ಅದಕ್ಕೆ ಪ್ಲಾಸ್ಟಿಕ್ ಡೈನಿಂಗ್ ಟೇಬಲ್ ಕವರ್‌ನ ಕಾಲುಗಳಿಗೆ ಸುತ್ತಿಕೊಂಡು ಉರ್ಫಿ ಓಡಾಡುತ್ತಿದ್ದಾರೆ.
ಮುಂಬೈನ ಆಫೀಸ್‌ವೊಂದರಲ್ಲಿ ಉರ್ಫಿ ಕೆಲಸ ಮುಗಿಸಿಕೊಂಡು ಹೊರ ಬರುತ್ತಿದ್ದಂತೆ ಕಾಯುತ್ತಿದ್ದ ಪ್ಯಾಪರಾಜಿಗಳಿಗೆ ಪೋಸ್ ಕೊಟ್ಟಿದ್ದಾರೆ.
ಪೋಟೋಗೆ ಪೋಸ್ ಕೊಟ್ಟು ಹೊರಡುವ ಸಮಯದಲ್ಲಿ ಪ್ಯಾಪರಾಜಿಗಳು ಉರ್ಫಿನ ಹಿಂಬಾಲಿಸುತ್ತಿದ್ದರು. ಮೆಟ್ಟಿಲು ಹತ್ತುವುದಕ್ಕೂ ಉರ್ಫಿ ಕಷ್ಟ ಪಡುತ್ತಿದ್ದರು.
ತಾಳ್ಮೆ ಕಳೆದುಕೊಳ್ಳದೆ ಪ್ರತಿ ಸಲವೂ ಪ್ಯಾಪರಾಜಿಗಳ ಮುಂದೆ ಪೋಸ್ ಕೊಡುವುದಕ್ಕೆ ನೆಟ್ಟಿಗರು ತುಂಬಾನೇ ಇಷ್ಟ ಪಡುತ್ತಾರೆ. ಅಲ್ಲದೆ ಪ್ರತಿ ಲುಕ್‌ನೂ ಉರ್ಫಿನೇ ಡಿಸೈನ್ ಮಾಡುವುದು.
ಕೆಲವು ದಿನಗಳ ಹಿಂದೆ ಉರ್ಫಿ ಸೌತ್ ಏಷ್ಯಾ ಮ್ಯಾಗಜಿನ್ ಡಿಜಿಟಲ್ ಕವರ್‌ಗೆ ಫೋಟೋಶೂಟ್ ಮಾಡಿದ್ದರು. ಉರ್ಫಿ ಬೆಳವಣಿಗೆಯನ್ನು ಜನರು ಮೆಚ್ಚಿಕೊಂಡರು.
ಖ್ಯಾತ ಡಿಸೈನರ್ ಅಬು ಜಾನಿ ಸಂದೀಪ್ ಜೊತೆ ಉರ್ಫಿ ಕೆಲಸ ಮಾಡಿದ್ದಾರೆ. 'ಅಬು ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗಿರುವೆ. ಅವರು ನನ್ನ ಮಾಸ್ಟರ್‌ಗಳು ಅವರು ನನ್ನ ಕೆಲಸ ಮತ್ತು ಡಿಸೈನ್ ಇಷ್ಟ ಪಟ್ಟಿರುವುದು ಖುಷಿ ಕೊಟ್ಟಿದೆ' ಎಂದು ಬರೆದುಕೊಂಡಿದ್ದರು.
'ಯಾವ ಡಿಸೈನರ್‌ಗೂ ನನ್ನ ಉಡುಪು ವಿನ್ಯಾಸ ಮಾಡುವುದಕ್ಕೆ ಆಗುವುದಿಲ್ಲ ಅದಿಕ್ಕೆ ನನಗೆ ನಾನೇ ಡಿಸೈನ್ ಮಾಡುವುದಕ್ಕೆ ಶುರು ಮಾಡಿದೆ.' ಎಂದಿದ್ದರು ಉರ್ಫಿ.