ದೀಪಿಕಾ ಮಾತ್ರವಲ್ಲ 'ಪಡುಕೋಣೆ' ಸರ್‌ನೇಮ್ ಇರೋ ಈ ನಟನೂ ಬಾಲಿವುಡ್ ಸೂಪರ್‌ಸ್ಟಾರ್!
ದೀಪಿಕಾ ಪಡುಕೋಣೆ ನಿಸ್ಸಂದೇಹವಾಗಿ ಇಂದು ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಆದ್ರೆ ಬಾಲಿವುಡ್‌ನಲ್ಲಿ ದೀಪಿಕಾ ಪಡುಕೋಣೆಗೂ ಮೊದಲೇ ಪಡುಕೋಣೆ ಎಂಬ ಸರ್‌ನೇಮ್ ಇರೋ ಸೂಪರ್‌ಸ್ಟಾರ್ ಒಬ್ಬರು ಇದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ? ಈ ಪಡುಕೋಣೆಯ ಹಲವು ಚಿತ್ರಗಳು ಹಿಂದಿ ಚಿತ್ರರಂಗದ ಸೂಪರ್‌ಹಿಟ್ ಸಿನಿಮಾಗಳಾಗಿದ್ದವು. ಅವರು ಯಾರು?
ದೀಪಿಕಾ ಪಡುಕೋಣೆ ನಿಸ್ಸಂದೇಹವಾಗಿ ಇಂದು ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಹಲವು ನಿರ್ದೇಶಕರು, ನಿರ್ಮಾಪಕರು, ಹೀರೋಗಳ ಪಾಲಿಗೆ ದೀಪಿಕಾ ಪಡುಕೋಣೆ ಫಸ್ಟ್ ಚಾಯ್ಸ್. ಚೆನ್ನೈ ಎಕ್ಸ್‌ಪ್ರೆಸ್, ಪದ್ಮಾವತ್, ಬಾಜಿರಾವ್ ಮಸ್ತಾನಿ, ಪಠಾಣ್, ಜವಾನ್ ಹೀಗೆ ಹಲವಾರು ಸೂಪರ್‌ಹಿಟ್ ಸಿನಿಮಾಗಳಲ್ಲಿ ದೀಪಿಕಾ ಅದ್ಭುತ ಅಭಿನಯ ನೀಡಿದ್ದಾರೆ.
ಆದರೆ ಬಾಲಿವುಡ್‌ನಲ್ಲಿ ದೀಪಿಕಾ ಪಡುಕೋಣೆಗೂ ಮೊದಲೇ ಪಡುಕೋಣೆ ಎಂಬ ಸರ್‌ನೇಮ್ ಇರೋ ಸೂಪರ್‌ಸ್ಟಾರ್ ಒಬ್ಬರು ಇದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ? ಈ ಪಡುಕೋಣೆಯ ಹಲವು ಚಿತ್ರಗಳು ಹಿಂದಿ ಚಿತ್ರರಂಗದ ಸೂಪರ್‌ಹಿಟ್ ಸಿನಿಮಾಗಳಾಗಿದ್ದವು. ಅವರು ಯಾರು?
ದೀಪಿಕಾ ಪಡುಕೋಣೆಗೂ ಮೊದಲು ಬಾಲಿವುಡ್‌ನಲ್ಲಿ ಪಡುಕೋಣೆ ಎಂಬ ಉಪನಾಮದೊಂದಿಗೆ ಒಬ್ಬ ನಟನಿದ್ದರು. ಈ ಪಡುಕೋಣೆಯ ಹಲವು ಚಿತ್ರಗಳು ಹಿಂದಿ ಚಿತ್ರರಂಗದ ಬ್ಲಾಕ್‌ಬಸ್ಟರ್ ಸಿನಿಮಾಗಳಾಗಿವೆ. ಟೈಮ್ಸ್ ಮ್ಯಾಗಜೀನ್‌ನ '100 ಶ್ರೇಷ್ಠ ಚಲನಚಿತ್ರಗಳ' ಪಟ್ಟಿಯಲ್ಲಿಇವರ ಸಿನಿಮಾಗಳು ಸೇರಿವೆ.
ಪ್ರಸಿದ್ಧ ಬಾಲಿವುಡ್ ನಟ, ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕ ಗುರುದತ್ ಬಗ್ಗೆ ನಾವು ಹೇಳುತ್ತಿದ್ದೇವೆ. ಅವರ ನಿಜವಾದ ಹೆಸರು ವಸಂತ್ ಕುಮಾರ್ ಶಿವಶಂಕರ್ ಪಡುಕೋಣೆ. ದಿಲೀಪ್ ಕುಮಾರ್ ಗುರುದತ್ ಅವರ ಚಿತ್ರ 'ಪ್ಯಾಸ'ದಲ್ಲಿ ಕೆಲಸ ಮಾಡಲು ನಿರಾಕರಿಸಿದಾಗ, ವಸಂತ್ ಕುಮಾರ್ ತಾವು ಸ್ವತಃ ಆ ಚಿತ್ರದಲ್ಲಿ ನಟಿಸಲು ನಿರ್ಧರಿಸಿದರು. ಈ ಚಿತ್ರವು ಕೇವಲ ವಾಣಿಜ್ಯಿಕ ಯಶಸ್ಸು ಮಾತ್ರವಲ್ಲದೆ ಭಾರತೀಯ ಚಿತ್ರರಂಗದ ಅತ್ಯುತ್ತಮ ಚಿತ್ರವೆಂದು ಗುರುತಿಸಿಕೊಂಡಿದೆ.
ಗುರುದತ್ ಅತ್ಯಂತ ಪ್ರತಿಭಾವಂತ ಕಲಾವಿದರಾಗಿದ್ದರು. ಅವರ 'ಪ್ಯಾಸಾ', 'ಕಾಗಜ್ ಕೆ ಫೂಲ್', 'ಚೌಧ್ವಿನ್ ಕಾ ಚಾಂದ್' ಮತ್ತು 'ಸಾಹಿಬ್ ಬೀಬಿ ಔರ್ ಗುಲಾಮ್' ಹಿಂದಿ ಚಿತ್ರರಂಗದ ಅತ್ಯುತ್ತಮ ಸಿನಿಮಾಗಳಾಗಿವೆ.
ಟೈಮ್ಸ್ ಮ್ಯಾಗಜೀನ್ ತನ್ನ 100 ಶ್ರೇಷ್ಠ ಚಿತ್ರಗಳ ಪಟ್ಟಿಯಲ್ಲಿ 'ಪ್ಯಾಸ'ವನ್ನು ಸೇರಿಸಿದೆ. ಚಿತ್ರದ ಪ್ರಮುಖ ನಾಯಕನಲ್ಲದೆ, ಗುರುದತ್ ಅವರು 'ಪ್ಯಾಸಾ'ದ ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕರು ಆಗಿದ್ದರು.
'ಪ್ಯಾಸ' ಚಿತ್ರದಲ್ಲಿ ಮಾಲಾ ಸಿನ್ಹಾ, ವಹೀದಾ ರೆಹಮಾನ್, ಜಾನಿ ವಾಕರ್ ಗಮನಾರ್ಹ ಪಾತ್ರಗಳಲ್ಲಿ ನಟಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಗುರುದತ್ 22ನೇ ವಯಸ್ಸಿನಲ್ಲಿ 'ಕಷ್ಮಾಕಾಶ್' ಎಂಬ ಕಥೆಯನ್ನು ಬರೆದಿದ್ದಾರೆ. ಈ ಕಥೆಯ ಮೇಲೆ 'ಪ್ಯಾಸ'ವನ್ನು ನಿರ್ಮಿಸಲಾಗಿದೆ.
ಗುರುದತ್ ಭಾರತೀಯ ಚಿತ್ರರಂಗ ಕಂಡ ಅತ್ಯುತ್ತಮ ಕಲಾವಿದರಲ್ಲಿ ಒಬ್ಬರು ಎಂದು ಹೇಳಿದರೆ ತಪ್ಪಾಗದು. ಅವರು ಅಕ್ಟೋಬರ್ 10, 1964 ರಂದು ಮುಂಬೈನ ಅವರ ಅಪಾರ್ಟ್ಮೆಂಟ್‌ನಲ್ಲಿ ಮೃತಪಟ್ಟರು. ಇವರ ಸಾವಿಗೆ ನಿದ್ರೆ ಮಾತ್ರೆಗಳ ಜೊತೆಗೆ ಅಲ್ಕೊಹಾಲ್ ಸೇವನೆ ಎಂದು ಪರಿಗಣಿಸಲಾಗಿದೆ. ಆದರೂ ಇಂದಿಗೂ ಈ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.