- Home
- Entertainment
- Cine World
- Athiya Shetty-KL Rahul; ರಾಹುಲ್ ತೋಳಲ್ಲಿ ಆತಿಯಾ; ಮದುವೆ ಪೂರ್ವ ಶಾಸ್ತ್ರದ ಫೋಟೋ ವೈರಲ್
Athiya Shetty-KL Rahul; ರಾಹುಲ್ ತೋಳಲ್ಲಿ ಆತಿಯಾ; ಮದುವೆ ಪೂರ್ವ ಶಾಸ್ತ್ರದ ಫೋಟೋ ವೈರಲ್
ನಟಿ ಆತಿಯಾ ಶೆಟ್ಟಿ ಮತ್ತು ಕೆೆಎಲ್ ರಾಹುಲ್ ಮದುವೆ ಫೋಟೋಗಳು ವೈರಲ್ ಆಗಿವೆ. ಇದೀಗ ಮದುವೆ ಪೂರ್ವ ಶಾಸ್ತ್ರದ ಫೋಟೋಗಳನ್ನು ಆತಿಯಾ ಹಂಚಿಕೊಂಡಿದ್ದಾರೆ.

ಬಾಲಿವುಡ್ ನಟಿ ಆತಿಯಾ ಶೆಟ್ಟಿ ಮತ್ತು ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಜನವರಿ 23ರಂದು ಅದ್ದೂರಿಯಾಗಿ ವಿವಾಹವಾದರು. ಸುನಿಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಇಬ್ಬರೂ ಹಸೆಮಣೆ ಏರಿದರು. ಇಬ್ಬರೂ ಮದುವೆಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ನಟಿ ಆತಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಇಬ್ಬರೂ ಪೋಟೋಗಳನ್ನು ಹಂಚಿಕೊಂಡು ಎಲ್ಲರ ಆಶೀರ್ವಾದ ಇರಲಿ ಎಂದು ಹೇಳಿದ್ದರು. ಇದೀಗ ಮದುವೆ ಮುಂಚಿನ ಶಾಸ್ತ್ರದ ಫೋಟೋಗನ್ನು ಆತಿಯಾ ಹಂಚಿಕೊಂಡಿದ್ದಾರೆ.
ಆತೀಯಾ ಶೆಟ್ಟಿ ತಾಯಿ ಮನಾ ಶೆಟ್ಟಿ ಆರತಿ ಮಾಡುತ್ತಿರುವ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಆತಿಯಾ ಪಿಂಕ್ ಬಣ್ಣದ ಬ್ಲೌಸ್ ಮತ್ತು ಗೋಲ್ಡ್ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕುಟುಂಬದವರು ಎಲ್ಲರೂ ಸೇರಿ ಆರತಿ ಮಾಡುತ್ತಿದ್ದಾರೆ.
ಆತಿಯಾ ಶೇರ್ ಮಾಡಿರುವ ಫೋಟೋದಲ್ಲಿ ಕೆಎಲ್ ರಾಹುಲ್ ಗಟ್ಟೆಯಾಗಿ ತಬ್ಬಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ. ರಾಹುಲ್ ತೋಳಲ್ಲಿ ಬಿಗಿದಪ್ಪಿರುವ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಆತಿಯಾ ಮತ್ತು ಕೆ ಎಲ್ ರಾಹುಲ್ ಮದುವೆ ಫೋಟೋಗಳಿಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದು ಬರುತ್ತಿದೆ. ಬಾಲಿವುಡ್ ನ ಅನೇಕ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿ ವಿಶ್ ಮಾಡುತ್ತಿದ್ದಾರೆ.
ಮದುವೆ ಬಳಿಕ ಒಂದಷ್ಟು ಫೋಟೋಗಳನ್ನು ಆತಿಯಾ ಮತ್ತು ರಾಹುಲ್ ಶೇರ್ ಮಾಡಿದ್ದಾರೆ. ಮದುವೆ, ಆರತಕ್ಷತೆ ಮುಗಿಸಿರುವ ಜೋಡಿ ಇದೀಗ ಮದುವೆ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಆತಿಯಾ ಮತ್ತು ಕೆ ಎಲ್ ರಾಹುಲ್ ಜೋಡಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.