MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • 58ನೇ ವಯಸ್ಸಲ್ಲಿ ಮತ್ತೆ ಅರ್ಬಾಜ್​ ಖಾನ್​ ಅಪ್ಪ: ಕೊನೆಗೂ ಗರ್ಭಿಣಿ ಪತ್ನಿಯ ಮುಖ ತೋರಿಸಿದ ನಟ

58ನೇ ವಯಸ್ಸಲ್ಲಿ ಮತ್ತೆ ಅರ್ಬಾಜ್​ ಖಾನ್​ ಅಪ್ಪ: ಕೊನೆಗೂ ಗರ್ಭಿಣಿ ಪತ್ನಿಯ ಮುಖ ತೋರಿಸಿದ ನಟ

ನಟಿ ಮಲೈಕಾ ಶರಾವತ್​ ಮಾಜಿ ಪತಿ ಅರ್ಬಾಜ್​ ಖಾನ್​ 3ನೇ ಮಗುವಿನ ಅಪ್ಪ ಆಗುತ್ತಿದ್ದು, ಗರ್ಭಿಣಿ ಪತ್ನಿಯನ್ನು ಸಾರ್ವಜನಿಕವಾಗಿ ಮೊದಲ ಬಾರಿಗೆ ತೋರಿಸಿದ್ದಾರೆ. 

2 Min read
Suchethana D
Published : Aug 04 2025, 02:25 PM IST| Updated : Aug 04 2025, 02:33 PM IST
Share this Photo Gallery
  • FB
  • TW
  • Linkdin
  • Whatsapp
18
56ನೇ ವಯಸ್ಸಿನಲ್ಲಿ ಮದುವೆ
Image Credit : instagram

56ನೇ ವಯಸ್ಸಿನಲ್ಲಿ ಮದುವೆ

ನಟ ಸಲ್ಮಾನ್​ ಖಾನ್​ ಸಹೋದರ, ನಟಿ ಮಲೈಕಾ ಶರಾವತ್​ ಮಾಜಿ ಪತಿ, ರೂಪದರ್ಶಿ ಜಾರ್ಜಿಯಾ ಆಂಡ್ರಿಯಾನಿ ಮಾಜಿ ಲಿವ್​ ಇನ್​ ಪಾರ್ಟನರ್​ ಅರ್ಬಾಜ್​ ಖಾನ್​ ಶುರಾ ಖಾನ್​ ಎನ್ನುವವರನ್ನು 2023ರ ಡಿಸೆಂಬರ್​ನಲ್ಲಿ ಮದುವೆಯಾಗಿದ್ದು, ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ. 56ನೇ ವಯಸ್ಸಿನಲ್ಲಿ ತಮಗಿಂತ 22 ವರ್ಷ ಚಿಕ್ಕವಳಾದ 33 ವರ್ಷದ ಶುರಾ ಖಾನ್​ ಅವರ ಕೈಹಿಡಿದಿದ್ದಾರೆ.

28
ಅರ್ಬಾಜ್​-ಶುರಾ ಭೇಟಿಯಾಗಿದ್ದು ಹೇಗೆ?
Image Credit : instagram

ಅರ್ಬಾಜ್​-ಶುರಾ ಭೇಟಿಯಾಗಿದ್ದು ಹೇಗೆ?

ಶುರಾ ಖಾನ್​ ಮೇಕಪ್ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ. ಶುರಾ ಖಾನ್ ಮತ್ತು ಅರ್ಬಾಜ್​ ಖಾನ್​ ಅವರು ಪಾಟ್ನಾ ಶುಕ್ಲಾ ಸೆಟ್‌ನಲ್ಲಿ ಭೇಟಿಯಾದರು. ಅಲ್ಲಿಂದ ಇವರ ನಡುವೆ ಪ್ರೀತಿ ಅರಳಿದೆ ಎನ್ನಲಾಗಿದೆ. ಶುರಾ ಖಾನ್​ ಅವರು, ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥದಾನಿ ಅವರ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ.

Related Articles

Related image1
Bollywood Singer Kalpana Patowary: ಹಿಂದೂಗೆ ಕನ್​ವರ್ಟ್​ ಆದ್ರೆ ಮಗಳ ಕೊಡುವೆ ಎಂದ ಈ ತಾರೆಯ ಅಪ್ಪ! ಆದ್ರೆ ಆಗಿದ್ದೇ ಬೇರೆ: ರೋಚಕ ಸ್ಟೋರಿ ಕೇಳಿ!
Related image2
Bollywood Stars: ಮೊದಲನೆಯವರಿಗೆ ಡಿವೋರ್ಸ್​ ಕೊಡದೇ ಮತ್ತೊಬ್ಬರನ್ನು ಬುಟ್ಟಿಗೆ ಹಾಕಿಕೊಂಡೋರು ಇವ್ರೇ ನೋಡಿ!
38
ಗರ್ಭಿಣಿಯೆನ್ನುವುದನ್ನು ಕನ್​ಫರ್ಮ್​ ಮಾಡಿದ ಶುರಾ ಖಾನ್​
Image Credit : actor arbaaz khan wife sshura khan instagram

ಗರ್ಭಿಣಿಯೆನ್ನುವುದನ್ನು ಕನ್​ಫರ್ಮ್​ ಮಾಡಿದ ಶುರಾ ಖಾನ್​

ಇದೀಗ ಹೊಸ ವಿಷ್ಯವೊಂದು ರಿವೀಲ್​ ಆಗಿದೆ. ಅದೇನೆಂದರೆ, ಶುರಾ ಖಾನ್​ ಈಗ ಗರ್ಭಿಣಿ ಎನ್ನುವ ಸುದ್ದಿ. ಶುರಾ ಖಾನ್ ಗರ್ಭಿಣಿಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಪತ್ನಿಯನ್ನು ಅರ್ಬಾಜ್​ ಖಾನ್​ ಹೆರಿಗೆ ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದ್ದ ವಿಡಿಯೋ ಕೂಡ ಹರಿದಾಡುತ್ತಿತ್ತು. ಆ ಸಮಯದಲ್ಲಿ, ಅರ್ಬಾಜ್​ ಖಾನ್​ ಮತ್ತು ಶುರಾ ಹೋಗುವ ಸಂದರ್ಭದಲ್ಲಿ ಪಾಪರಾಜಿಗಳು ಕ್ಯಾಮೆರಾ ಹಿಡಿದು ನಿಂತಾಗ, ಕೋಪಗೊಂಡ ಅರ್ಬಾಜ್​, ಪತ್ನಿಯನ್ನು ಪಕ್ಕಕ್ಕೆ ಸರಿಸಿ ಆಕೆ ಕಾಣದಂತೆ ತಡೆದಿದ್ದರು. ಆದ್ದರಿಂದ ಶುರಾ ಖಾನ್​ ಗರ್ಭಿಣಿ ಇದ್ದಿರಬಹುದು ಎನ್ನುವ ಗಾಳಿಸುದ್ದಿ ಹರಿದಾಡಿತ್ತು.

48
ಕೊನೆಗೂ ಗರ್ಭಿಣಿ ಫೋಟೋ ರಿವೀಲ್​
Image Credit : actor arbaaz khan wife sshura khan instagram

ಕೊನೆಗೂ ಗರ್ಭಿಣಿ ಫೋಟೋ ರಿವೀಲ್​

ಆದರೆ, ಇದೀಗ ಈ ಸುದ್ದಿ ನಿಜವಾಗಿದೆ. ಶುರಾ ಖಾನ್​ ಇದೇ ಮೊದಲ ಬಾರಿಗೆ ತುಂಬುಗರ್ಭಿಣಿಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ 58ನೇ ವಯಸ್ಸಿನಲ್ಲಿ ಅರ್ಬಾಜ್​ ಖಾನ್​, 35 ವರ್ಷದ ಎರಡನೆಯ ಪತ್ನಿಯಿಂದ ಮೂರನೆಯ ಮಗುವಿನ ಅಪ್ಪ ಆಗುತ್ತಿದ್ದಾರೆ.

58
ಅಮ್ಮ-ಮಗನಿಗೆ 13 ವರ್ಷ ವ್ಯತ್ಯಾಸ
Image Credit : @viralbhayani

ಅಮ್ಮ-ಮಗನಿಗೆ 13 ವರ್ಷ ವ್ಯತ್ಯಾಸ

ಅಷ್ಟಕ್ಕೂ, ಅರ್ಬಾಜ್​ ಖಾನ್​ ಮೊದಲ ಮಗ (ಮಲೈಕಾ ಅರೋರಾ ಜೊತೆ) ಅರ್ಹಾನ್​ ಖಾನ್​ಗೆ ಈಗ 22 ವರ್ಷ ವಯಸ್ಸು. ಇದನ್ನು ನೋಡಿದರೆ ಶುರಾ ಖಾನ್​ ಅವನಿಗೂ ಅಮ್ಮ ಆಗಬೇಕು. ಇದನ್ನೀಗ ಲೆಕ್ಕಾಚಾರ ಹಾಕಲಾಗುತ್ತಿದ್ದು, ಅಮ್ಮ- ಮಗನಿಗೆ 13 ವರ್ಷ ವ್ಯತ್ಯಾಸವಿದೆ. ಜೊತೆಗೆ, ಶುರಾ ಖಾನ್​ಗೆ ಮಗು ಹುಟ್ಟಿದರೆ ಅವರ ಮಗುವಿಗೂ ಅರ್ಹಾನ್​ ಖಾನ್​ಗೂ 22 ವರ್ಷ ವ್ಯತ್ಯಾಸ ಆಗಲಿದೆ.

68
ಶುರಾ ಖಾನ್​ಗೆ 10 ವರ್ಷದ ಮಗಳು
Image Credit : actor arbaaz khan wife sshura khan instagram

ಶುರಾ ಖಾನ್​ಗೆ 10 ವರ್ಷದ ಮಗಳು

ಶುರಾ ಖಾನ್ ಅವರಿಗೆ ಈಗಾಗಲೇ ಹಿಂದಿನ ಮದುವೆಯಿಂದ 10 ವರ್ಷದ ಮಗಳಿದ್ದಾಳೆ. ದುಡ್ಡಿದ್ದರೆ ಎಲ್ಲವೂ ಸಾಧ್ಯ ಎಂದು ಹಲವರು ಹೇಳಿದರೆ, ಬಾಲಿವುಡ್​ ಮಾತ್ರವಲ್ಲ ಇಲ್ಲಿ ಕೆಲವು ಕಡೆಗಳಲ್ಲಿ ಇಂಥ ದೃಶ್ಯಗಳು ಸಾಮಾನ್ಯವಾಗಿವೆ. ಅಜ್ಜಂದಿರ ಅಪ್ರಾಪ್ತೆಯರನ್ನು ಮದುವೆಯಾಗುವುದು ನಡೆದೇ ಇದೆ. ಅಂಥ ಸಂದರ್ಭದಲ್ಲಿ ಇದೇನೂ ದೊಡ್ಡ ವಿಷಯವಲ್ಲ ಎನ್ನುತ್ತಿದ್ದಾರೆ.

78
ಪಾಪರಾಜಿಗಳಿಂದ ತಪ್ಪಿಸಿಕೊಳ್ತಿದ್ದ ಶುರಾ ಖಾನ್​
Image Credit : arbaaz khan instagram

ಪಾಪರಾಜಿಗಳಿಂದ ತಪ್ಪಿಸಿಕೊಳ್ತಿದ್ದ ಶುರಾ ಖಾನ್​

ಅಷ್ಟಕ್ಕೂ, ಇಂದಿಗೂ ವಯಸ್ಸಿನ ಅಂತರದ ಕಾರಣದಿಂದ ಟ್ರೋಲ್​ ಎದುರಿಸುತ್ತಲೇ ಇದೆ ಈ ಜೋಡಿ. ಇವರ ವಯಸ್ಸಿನ ಅಂತರ ನೋಡಿ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಜೋಡಿ ಸಕತ್​ ಟ್ರೋಲ್​​ ಕೂಡ ಆಗುತ್ತಿದೆ. ಮದುವೆ ಮನೆಗೆ ಬರುವಾಗಿನಿಂದಲೂ ಹಲವು ವಿಡಿಯೋಗಳಲ್ಲಿ ಶುರಾ ಖಾನ್​ ಪಾಪರಾಜಿಗಳ ಕ್ಯಾಮೆರಾ ಎದುರು ನೇರವಾಗಿ ಮುಖಕೊಡದೇ ಮುಖ ಮುಚ್ಚಿಕೊಳ್ಳುತ್ತಲೇ ಇರುತ್ತಾರೆ.

88
ಪಾಪರಾಜಿಗಳಿಂದ ತಪ್ಪಿಸಿಕೊಳ್ತಿದ್ದ ಶುರಾ ಖಾನ್​
Image Credit : arbaaz khan instagram

ಪಾಪರಾಜಿಗಳಿಂದ ತಪ್ಪಿಸಿಕೊಳ್ತಿದ್ದ ಶುರಾ ಖಾನ್​

ಟ್ರೋಲ್​ ಆಗುವುದನ್ನು ತಪ್ಪಿಸಲು ಅವರು ಹಾಗೆ ಮಾಡುತ್ತಾರೆ ಎನ್ನುವ ಮಾತಿದೆ. ಮದುವೆಯಾದ ಮೇಲೆ ಹನಿಮೂನ್​ಗೆ ಹೋದಾಗ ಏರ್​ಪೋರ್ಟ್​ನಲ್ಲಿ ಜೋಡಿ ಕಾಣಿಸಿಕೊಂಡಾಗಲೂ ಶುರಾ ಅವರು, ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬೀಳದಂತೆ ಮುಖ ಮುಚ್ಚಿಕೊಂಡಿದ್ದರು. ಮುಖ ಕಾಣಿಸದಂತೆ ಮಾಡಲು ಕ್ಯಾಪ್​ ಧರಿಸಿ ಬಂದಿದ್ದರು. ಅವರು ಕ್ಯಾಮೆರಾಕ್ಕೆ ಕಾಣದಂತೆ ಅರ್ಬಾಜ್​ ರಕ್ಷಣೆ ಮಾಡುತ್ತಲೇ ಇರುತ್ತಾರೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಾಲಿವುಡ್
ಸಂಬಂಧಗಳು
ಮದುವೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved