ಬಾಲಿವುಡ್​ ಸೇರಿದಂತೆ ಹಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನ ನೀಡಿ ಖ್ಯಾತಿ ಗಳಿಸಿರುವ ಕಲ್ಪನಾ ಪಟ್ವಾರಿ ಅವರು ಮದುವೆಗಾಗಿ ಗುರುವಾಗಿದ್ದ ತಂದೆಯನ್ನೇ ಧಿಕ್ಕರಿಸಿರೋ ಸ್ಟೋರಿ ಇದು. ಮತಾಂತರದ ಕುತೂಹಲ ಕಥೆ ಕೇಳಿ.. 

ಬಾಲಿವುಡ್​ ಸೇರಿದಂತೆ ಸಿನಿ ಕ್ಷೇತ್ರದಲ್ಲಿ ಹಲವಾರು ಮುಸ್ಲಿಂ ನಟರು ಎಷ್ಟೇ ಮದುವೆಯಾದರೂ ಹಿಂದೂ ಯುವತಿಯರನ್ನೇ ಆಯ್ಕೆ ಮಾಡಿಕೊಂಡಿರುವುದು ಹೊಸ ವಿಷಯವೇನಲ್ಲ. ಶಾರುಖ್​ ಗೌರಿ ಅವರನ್ನು ಮದ್ವೆಯಾದ್ರೆ, ಸೈಫ್​ ಅಲಿಯ ಇಬ್ಬರೂ ಪತ್ನಿಯರು ಹಿಂದೂಗಳೇ, ಇನ್ನು ಆಮೀರ್​ ಖಾನ್​ ಇಬ್ಬರಿಗೆ ಡಿವೋರ್ಸ್​ ಕೊಟ್ಟು 3ನೆಯವಳನ್ನು ಆರಿಸಿಕೊಂಡಿರುವುದೂ ಹಿಂದೂವನ್ನೇ. ಇನ್ನು ಸಲ್ಮಾನ್​ ಖಾನ್​ ಅಧಿಕೃತವಾಗಿ ವಿವಾಹವಾಗಿದ್ದರೂ, ಇವರ ಅಪ್ಪ ಸಲೀಂ ಖಾನ್​ ಇಬ್ಬರು ಹಿಂದೂ ಯುವತಿಯರನ್ನೇ ಮದ್ವೆಯಾದದ್ದು. ಇದು ಖ್ಯಾತನಾಮರ ವಿಷಯವಾದರೆ, ಇನ್ನೂ ಕೆಲವು ನಟರು ಹಿಂದೂ ಯುವತಿಯರನ್ನೇ ವರಿಸಿರುವುದು ತಿಳಿಯುತ್ತದೆ. ಇದರ ನಡುವೆಯೇ ಬಾಲಿವುಡ್​​ ಅಷ್ಟೇ ಅಲ್ಲದೇ ಬೇರೆ ಕಡೆಗಳಲ್ಲಿಯೂ ಈ ಮತಾಂತರದ ಸುದ್ದಿ ಸದ್ದು ಮಾಡುತ್ತಲೇ ಇರುತ್ತದೆ.

ಅಂಥದ್ದೇ ಒಂದು ರೋಚಕ ಸ್ಟೋರಿ ಬಹುಭಾಷಾ ಗಾಯಕಿ ಹಾಗೂ ಭೋಜ್​ಪುರಿ ನಟಿ ಕಲ್ಪನಾ ಪಟ್ವಾರಿ ಅವರದ್ದು. ಇವರು ಭೋಜ್‌ಪುರಿ (Bhojpuri) ಜವಾರ್‌ನಲ್ಲಿ ಮಾತ್ರವಲ್ಲದೆ ಅಸ್ಸಾಮಿ, ಬಂಗಾಲಿ ಭಾಷೆಯಲ್ಲಿಯೂ ಸಕತ್​ ಫೇಮಸ್​ ಆಗಿರೋ ತಾರೆ. ಆದರೆ ಬಾಲಿವುಡ್ ಇವರಿಗೆ ಬ್ರೇಕ್​ ನೀಡಿದ ಇಂಡಸ್ಟ್ರಿ. 'ರಾಜಕುಮಾರ' ಚಿತ್ರದ 'ಗಂದಿ ಬಾತ್' ನಿಂದ 'ಸ್ವಾಗತ'ದ 'ಉಂಚಾ ಲಂಬಾ ಖಾಡ್' ವರೆಗೆ ಬಾಲಿವುಡ್‌ನಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ ಕಲ್ಪನಾ ಪಟ್ವಾರಿ. ಕಲ್ಪನಾ ಪಟ್ವಾರಿ ಅವರ ವೃತ್ತಿಪರ ಜೀವನವು ತುಂಬಾ ಶ್ರೀಮಂತವಾಗಿದೆ, ಆದರೆ ಕೆಲವೇ ಜನರಿಗೆ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದಿದೆ. ಇದು ತುಂಬಾ ಇಂಟರೆಸ್ಟಿಂಗ್‌ ಆಗಿದ್ದು, ಇದು ಕೂಡ ಮುಸ್ಲಿಂ-ಹಿಂದೂ ಧರ್ಮದ ಮದುವೆಯಾಗಿದೆ. ಕಲ್ಪನಾ ಅವರು ಮದುವೆಯಾದದ್ದು ಮುಸ್ಲಿಂ ವ್ಯಕ್ತಿಯನ್ನು. ಇದಕ್ಕಾಗಿ ಮನೆಯವರನ್ನೇ ದೂರ ಮಾಡಿಕೊಂಡರು, ಮಾತ್ರವಲ್ಲದೇ ತಮ್ಮ ಗುರುವೂ ಆಗಿರುವ ತಂದೆಯ ದ್ವೇಷ ಕಟ್ಟಿಕೊಂಡರು! ಕಲ್ಪನಾ ಪಟ್ವಾರಿ ಅಸ್ಸಾಂ ನಿವಾಸಿ. ಅವರ ತಂದೆ ಬಿಪಿನ್ ನಾಥ್ ಪಟ್ವಾರಿ ಕೂಡ ಪ್ರಸಿದ್ಧ ಗಾಯಕ. ತಂದೆಯೇ ಇವರ ಗುರು. ಕಲ್ಪನಾ ಅವರು ತಮ್ಮ ತಂದೆಯೊಂದಿಗೆ ಸ್ಟೇಜ್ ಶೋಗಳಿಗೆ ಹೋಗುತ್ತಿದ್ದರು. ಆದ್ದರಿಂದ ಇವರ ನಡುವಿನ ಸಂಬಂಧವು ಗುರು ಮತ್ತು ಶಿಷ್ಯರ ಸಂಬಂಧ. ನಂತರ ಕಲ್ಪನಾ ಅವರು ಪರ್ವೇಜ್ ಖಾನ್ (Pravez Khan) ಎನ್ನುವವರನ್ನು ವರಿಸಿದ್ದರು. ಇವರು ತಮ್ಮ ಕನಸಿನ ರಾಜಕುಮಾರ ಎಂದರು.

ಆದರೆ ಅಂತರ್‌ ಧರ್ಮದ ಕಾರಣದಿಂದಾಗಿ ಮನೆಯವರು ಈ ಮದುವೆಯನ್ನು ಒಪ್ಪಲಿಲ್ಲ. ಆದರೆ ಅವರನ್ನೇ ಮದುವೆಯಾಗುವುದಾಗಿ ಕಲ್ಪನಾ ಒತ್ತಾಯಪಡಿಸಿದಾಗ, ಕಲ್ಪನಾ ತಂದೆ ಭಾವಿ ಅಳಿಯನಿಗೆ ಒಂದು ಷರತ್ತು ವಿಧಿಸಿದರು. ಅದೇನೆಂದರೆ ಫಿರೋಜ್ ಖಾನ್ ಧರ್ಮ ಬದಲಿಸಿ ಹಿಂದೂ ಧರ್ಮ ಸ್ವೀಕರಿಸಿದರೆ ಮದುವೆಗೆ ಸಿದ್ಧ ಎಂದರು. ಆದರೆ ಇಲ್ಲಿಯೇ ಗಲಾಟೆ ಶುರುವಾಯಿತು. ಕೊನೆಗೆ ಕಲ್ಪನಾ ಅವರೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿಬಿಟ್ಟರು. 19 ನೇ ವಯಸ್ಸಿನಲ್ಲಿ ಫಿರೋಜ್ ಖಾನ್ ಅವರನ್ನು ವಿವಾಹವಾಗಿ ಕಲ್ಪನಾ ಪಟ್ವಾರಿ ಕಲ್ಪನಾ ಪರ್ವೇಜ್ ಖಾನ್ ಆದರು. ತಂದೆ-ಮಗಳ ಸಂಬಂಧ ದೂರವಾಯಿತು.

ಇದೀಗ ಕಲ್ಪನಾ ಪಟ್ವಾರಿ ಮತ್ತು ಪರ್ವೇಜ್ ಖಾನ್ ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಅರಿಸ್ಟಾಟಲ್ ಪಿ ಖಾನ್ ಮತ್ತು ಅರ್ಶ್ಮಿದ್ ಪಿ ಖಾನ್. ಇಬ್ಬರಿಗೂ ಹಾಡುವ ಆಸಕ್ತಿ ಇದ್ದು, ಕಲ್ಪನಾ ಅವರಿಗೂ ಹಾಡುವುದನ್ನು ಕಲಿಸುತ್ತಾರೆ. ದಿ ಕೇರಳ ಸ್ಟೋರಿ ಬಳಿಕ ಹಿಂದೂ-ಮುಸ್ಲಿಂ ಸಂಬಂಧದ ಕುರಿತು ಸಾಕಷ್ಟು ವಿಷಯಗಳು ಮುನ್ನೆಲೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕಲ್ಪನಾ ಅವರ ಕಥೆಯೂ ಮುನ್ನೆಲೆಗೆ ಬಂದಿದೆ.