Virushka Thanks Media: ಮಗಳ ಪ್ರೈವಸಿ ಕಾಪಾಡಿದ ಪಾಪಾರಾಜಿಗಳಿಗೆ ಥ್ಯಾಂಕ್ಸ್ ಎಂದ ವಿರುಷ್ಕಾ
ಬಾಲಿವುಡ್ ನಟಿ ಅನುಷ್ಕಾ ಶರ್ಮ (Anushka Sharma) ಅವರ ಮಗಳು ವಮಿಕಾಳ (Vamika) ಪ್ರೈವೇಸಿಯ ಅಗತ್ಯವನ್ನು ನಿರಂತರವಾಗಿ ಒತ್ತಿ ಹೇಳುತ್ತಿರುತ್ತಾರೆ. ಇಲ್ಲಿ ವರೆಗೂ ಅನುಷ್ಕಾ ಶರ್ಮಾ ಹಾಗೂ ವಿರಾಟ್ ದಂಪತಿಗಳು ತಮ್ಮ ಮಗಳ ಪೋಟೋ ಅಥವಾ ವಿಡಿಯೋವನ್ನು ಶೇರ್ ಮಾಡಿಕೊಂಡಿಲ್ಲ. ಈ ನಡುವೆ ಅನುಷ್ಕಾ ಶರ್ಮ ಅವರು ಮಗಳು ವಾಮಿಕಾಳ ಫೋಟೋಗಳು ಅಥವಾ ವೀಡಿಯೊಗಳನ್ನು ಪ್ರಕಟಿಸದ ಪಾಪರಾಜಿ ಮತ್ತು ಫ್ಯಾನ್ ಕ್ಲಬ್‌ಗಳಿಗೆ ಧನ್ಯವಾದ ಹೇಳಿದ್ದಾರೆ. ಅನುಷ್ಕಾ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದಾರೆ.
ಕಳೆದ ವಾರ ಟೀಂ ಇಂಡಿಯಾ ಜೊತೆಗೆ ನಟಿ ಮತ್ತು ವಿರಾಟ್ ಕೊಹ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿದ್ದಾಗ ಪಾಪರಾಜಿಗಳು ವಾಮಿಕಾಳ ಫೋಟೋಗಳನ್ನು ತೆಗೆದ ಕೆಲವು ದಿನಗಳ ನಂತರ ಅನುಷ್ಕಾ ಅವರ ಈ ಹೇಳಿಕೆ ಬಂದಿದೆ.
ಫ್ಯಾನ್ ಕ್ಲಬ್‌ಗಳು ಮತ್ತು ಪಾಪ್‌ಗಳನ್ನು ಉದ್ದೇಶಿಸಿ 'ನೀವು ತುಂಬಾ ಕೈಂಡ್ ಮತ್ತು ಹೆಚ್ಚು ಪ್ರಬುದ್ಧರಾಗಿದ್ದೀರಿ' ಅನುಷ್ಕಾ ಅವರು ಎಂದು ಬರೆದಿದ್ದಾರೆ. ಪಾಪರಾಜಿ ಮತ್ತು ಅವರ ಅಭಿಮಾನಿ ಸಂಘಗಳನ್ನು ಉದ್ದೇಶಿಸಿ, 'ವಾಮಿಕಾಳ ಪೋಟೋ/ ವೀಡಿಯೊಗಳನ್ನು ಪ್ರಕಟಿಸದ ಭಾರತೀಯ ಪಾಪರಾಜಿಗಳು ಮತ್ತು ಹೆಚ್ಚಿನ ಮಾಧ್ಯಮ ಬಂಧುಗಳಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಪೋಷಕರಾಗಿ, ನಾವು ನಮ್ಮ ಮಗುವಿಗೆ ಪ್ರೈವೇಸಿ ಬಯಸುತ್ತೇವೆ ಮತ್ತು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮದಿಂದ ಮುಕ್ತವಾಗಿ ತನ್ನ ಜೀವನವನ್ನು ನಡೆಸಲು ಅವಳಿಗೆ ಅವಕಾಶವನ್ನು ನೀಡಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಅವಳು ವಯಸ್ಸಾದಂತೆ ನಾವು ಅವಳ ಚಲನೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಮತ್ತು ಆದ್ದರಿಂದ ನಿಮ್ಮ ಬೆಂಬಲದ ಅಗತ್ಯವಿದೆ ಆದ್ದರಿಂದ ದಯೆಯಿಂದ ಈ ವಿಷಯದಲ್ಲಿ ಸಂಯಮದಿಂದ ಇರಿ. ಫೋಟೋಗಳನ್ನು ಪೋಸ್ಟ್ ಮಾಡದಿದಕ್ಕಾಗಿ ಅಭಿಮಾನಿಗಳ ಕ್ಲಬ್‌ಗಳು ಮತ್ತು ಇಂಟರ್ನೆಟ್‌ನ ಜನರಿಗೆ ವಿಶೇಷ ಧನ್ಯವಾದಗಳು' ಎಂದು ಅನುಷ್ಕಾ ಹೇಳಿದ್ದರು.
ಈ ವರ್ಷದ ಜನವರಿಯಲ್ಲಿ ವಾಮಿಕಾ ಜನಿಸಿದ ನಂತರ, ಅನುಷ್ಕಾ ವಿರಾಟ್ ದಂಪತಿಗಳು ತಮ್ಮ ಮಗಳ ಫೋಟೋಗಳನ್ನು ತೆಗೆದುಕೊಳ್ಳದಂತೆ ಪಾಪರಾಜಿಗಳಿಗೆ ಮನವಿ ಮಾಡಿದರು. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮುಂಬೈನಲ್ಲಿರುವ ಪಾಪರಾಜಿ ಗೆ ಒಂದು ಮೇಸೆಜ್ ಅನ್ನು ಕಳುಹಿಸಿದ್ದಾರೆ,
'ಹಾಯ್, ನೀವು ಇಷ್ಟು ವರ್ಷಗಳಿಂದ ನಮಗೆ ನೀಡಿದ ಎಲ್ಲಾ ಪ್ರೀತಿಗೆ ಧನ್ಯವಾದಗಳು. ಈ ಮಹತ್ವದ ಸಂದರ್ಭವನ್ನು ನಿಮ್ಮೊಂದಿಗೆ ಆಚರಿಸಲು ನಾವು ಸಂತೋಷಪಡುತ್ತೇವೆ. ಪೋಷಕರಾಗಿ ನಿಮಲ್ಲಿ ನಾವು ಸರಳವಾದ ವಿನಂತಿಯನ್ನು ಹೊಂದಿದ್ದೇವೆ. ನಮ್ಮ ಮಗುವಿನ ಗೌಪ್ಯತೆಯನ್ನು ನಾವು ರಕ್ಷಿಸಲು ಬಯಸುತ್ತೇವೆ ಮತ್ತು ನಮಗೆ ನಿಮ್ಮ ಸಹಾಯ ಮತ್ತು ಬೆಂಬಲದ ಅಗತ್ಯವಿದೆ' ಈ ಕಪಲ್ ಕೇಳಿಕೊಂಡಿದ್ದರು.
ಜನವರಿಯಲ್ಲಿ ತಮ್ಮ ಮಗುವಿನ ಆಗಮನದ ಒಂದು ವಾರದ ಮೊದಲು, ಅನುಷ್ಕಾ ಶರ್ಮಾ ಅವರು ತಮ್ಮ ಮತ್ತು ವಿರಾಟ್ ಕೊಹ್ಲಿಯ ಅನಧಿಕೃತ ಫೋಟೋವನ್ನು ಪ್ರಕಟಿಸಿದರು. 'ವಿನಂತಿ ಮಾಡಿಕೊಂಡ ನಂತರವೂ ಛಾಯಾಗ್ರಾಹಕರು ಮತ್ತು ಪಬ್ಲಿಕೇಷನ್ ಅವರು ಇನ್ನೂ ನಮ್ಮ ಗೌಪ್ಯತೆಯನ್ನು ಆಕ್ರಮಿಸುತ್ತಲೇ ಇದ್ದಾರೆ. ಫ್ರೆಂಡ್ಸ್ ಇದನ್ನು ಈಗಲೇ ನಿಲ್ಲಿಸಿ' ಎಂದು ಅನುಷ್ಕಾ ಶರ್ಮಾ ತಮ್ಮ Instagram ಸ್ಟೋರಿಯಲ್ಲಿ ಮಿಡೀಯಾ ಪಬ್ಲಿಕೇಷನ್ ಮತ್ತು ಪಾಪರಾಜಿಗಳಿಗೆ ಬರೆದಿದ್ದರು.
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಲವ್ ಸ್ಟೋರಿ ಅವರು ಒಟ್ಟಿಗೆ ಕೆಲಸ ಮಾಡಿದ ಶಾಂಪೂ ಜಾಹೀರಾತಿನ ಸೆಟ್‌ಗಳಲ್ಲಿ ಪ್ರಾರಂಭವಾಯಿತು. ಹಲವಾರು ವರ್ಷಗಳ ಕಾಲ ಡೇಟಿಂಗ್ ನಂತರ, ದಂಪತಿಗಳು 2017 ರಲ್ಲಿ ಇಟಲಿಯ ಟಸ್ಕನಿಯಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಅವರು ಕಳೆದ ವರ್ಷ ಆಗಸ್ಟ್‌ನಲ್ಲಿ ವಿರಾಟ್ ಮತ್ತು ಅನುಷ್ಕಾ ಪ್ರೆಗ್ನೆಂಸಿಯ ವಿಷಯವನ್ನು ಘೋಷಿಸಿದರು.