Celebrity Divorce: ಸೂಪರ್‌ ಹಿಟ್‌ ಧಾರಾವಾಹಿಯಲ್ಲಿ ಅತ್ತಿಗೆ-ಮೈದುನ ಪಾತ್ರದಲ್ಲಿ ನಟಿಸಿದ ಕಲಾವಿದರು ರಿಯಲ್‌ ಲೈಫ್‌ನಲ್ಲಿ ಪ್ರೀತಿಸಿ ಮದುವೆಯಾಗಿದ್ದರು, ಅಂದು ಹಾಕಿದ ಶಾಪದ ಫಲವೋ ಏನೋ ಈ ಜೋಡಿ ಡಿವೋರ್ಸ್‌ ಪಡೆಯುತ್ತಿದೆ. ಹಾಗಾದರೆ ಯಾರದು? 

ಧಾರಾವಾಹಿಯಲ್ಲಿ ಅತ್ತಿಗೆ ಮೈದುನ ಪಾತ್ರದಲ್ಲಿ ಕಾಣಿಸಿಕೊಂಡಿದ್ದವರು, ರಿಯಲ್‌ ಲೈಫ್‌ನಲ್ಲಿ ಲವ್‌ ಮಾಡಿದರು, ಮದುವೆಯಾದರು. ಈಗ ಡಿವೋರ್ಸ್‌ ಕೂಡ ಆಗುತ್ತಿದ್ದಾರೆ. ಸೀರಿಯಲ್‌ನಲ್ಲಿ ಹೀರೋ ಆದವನು, ವಿಲನ್‌ನನ್ನು ಲವ್‌ ಮಾಡಿ ಮದುವೆಯಾದ ಎಂದು ಅನೇಕರು ಶಾಪ ಹಾಕಿದ್ದರು. ಆ ಶಾಪ ಈಗ ನಿಜವಾಗಿದೆ.

ಧಾರಾವಾಹಿಯಲ್ಲಿ ಏನಾಗಿತ್ತು?

'ಘುಮ್ ಹೈ ಕಿಸಿಕೆ ಪ್ಯಾರ್ ಮೇಯಿನ್' ಧಾರಾವಾಹಿಯಲ್ಲಿ ನಟ ನೀಲ್ ಭಟ್ ಮತ್ತು ಐಶ್ವರ್ಯ ಶರ್ಮ ನಟಿಸಿದ್ದರು. ಇದರಲ್ಲಿ ನೀಲ್‌ ಭಟ್‌ ಹೀರೋ ಆಗಿದ್ದರೆ, ಐಶ್ವರ್ಯ ವಿಲನ್‌ ಆಗಿದ್ದರು. ಈ ಧಾರಾವಾಹಿ ಕಥೆಯಲ್ಲಿ ವಿರಾಟ್‌ ಚೌಹಾಣ್‌ ( ನೀಲ್‌ ಭಟ್‌ ) ಅವರನ್ನು ಮೊದಲೇ ಪ್ರೀತಿಸಿದ್ದ ( ಪತ್ರಲೇಖ ) ಐಶ್ವರ್ಯ ಅವರು, ಪರಿಸ್ಥಿತಿಗೆ ಕಟ್ಟುಬಿದ್ದು ಸಾಮ್ರಾಟ್‌ ( ವಿರಾಟ್‌ ಅಣ್ಣ ) ಅಣ್ಣನನ್ನು ಮದುವೆಯಾಗಿದ್ದರು. ಆದರೂ ಕೂಡ ಪಾಖಿಗೆ ವಿರಾಟ್‌ ಕಂಡ್ರೆ ಲವ್.‌ ವಿರಾಟ್‌ ಹಾಗೂ ಸಹಿ ಪ್ರೀತಿಸಿ ಮದುವೆಯಾಗಿದ್ದರು. ಆದರೂ ಕೂಡ ಪಾಖಿ ಇವರಿಬ್ಬರ ಮಧ್ಯೆ ಬಂದು ವಿರಾಟ್‌ನನ್ನು ಪಡೆದುಕೊಳ್ಳುವ ಕುತಂತ್ರ ಮಾಡುತ್ತಿದ್ದಳು.

ಜನರು ನಿಂದಿಸಿದ್ದು ಯಾಕೆ?

ಇದನ್ನು ನೋಡಿ ವೀಕ್ಷಕರು ನಿಂದಿಸುದ್ದರು. ಐಶ್ವರ್ಯಾ ಶರ್ಮಾಗೂ ಪತ್ರಲೇಖಾ ಪಾತ್ರಕ್ಕೂ ವ್ಯತ್ಯಾಸ ಇದೆ, ಇವರಿಬ್ಬರು ಬೇರೆ ಬೇರೆ. ಪಾಖಿಗೂ, ಐಶ್ವರ್ಯಾ ತದ್ವಿರುದ್ಧ ವ್ಯಕ್ತಿತ್ವ. ಆದರೆ ತೆರೆ ಮೇಲೆ ನೋಡಿದ ಪಾತ್ರವನ್ನು ರಿಯಲ್‌ ಎಂದು ಭಾವಿಸಿ, ಐಶ್ವರ್ಯಾಗೆ ಕೆಟ್ಟ ಕೆಟ್ಟ ಮಾತನಾಡಿದ್ದರು, ಶಾಪ ಹಾಕಿದ್ದರು.

ಡಿವೋರ್ಸ್‌ಗೆ ಅಪ್ಲೈ ಮಾಡಿದರು

2021ರಲ್ಲಿ ಈ ಜೋಡಿ ಮದುವೆಯಾಗಿತ್ತು. ಹಿರಿಯ ನಟಿ ರೇಖಾ ಕೂಡ ಈ ಮದುವೆಯಲ್ಲಿ ಭಾಗಿಯಾಗಿದ್ದರು. ಕೆಲವು ಸಮಯದಿಂದ ಒಂದೂವರೆ ವರ್ಷಗಳ ಹಿಂದೆಯೇ ಐಶ್ವರ್ಯ ಹಾಗೂ ನೀಲ್‌ ಭಟ್‌ ಅವರು ದೂರವಾಗಿದ್ದು, ಬೇರೆ ಬೇರೆಯಾಗಿ ಬದುಕುತ್ತಿದ್ದಾರೆ. ಹಿಂದಿಯ ಕಪಲ್‌ ಶೋನಲ್ಲಿ ಭಾಗಿಯಾದಾಗಂತೂ ಇವರಿಬ್ಬರನ್ನು ಬಿಟ್ಟರೆ ಅನ್ಯೋನ್ಯವಾಗಿ ಬದುಕುತ್ತಿರುವ ಬೇರೆ ದಂಪತಿ ಇಲ್ಲ ಎನ್ನುವಷ್ಟರ ಮಟ್ಟಿಗೆ ಈ ಜೋಡಿ ಖುಷಿಯಿಂದ ಬಾಳುತ್ತಿತ್ತು. ಈಗ ಇವರಿಬ್ಬರು ಡಿವೋರ್ಸ್‌ಗೆ ಅಪ್ಲೈ ಮಾಡಿದ್ದಾರಂತೆ. ಆದಷ್ಟು ಬೇಗ ಕಾನೂನು ಪ್ರಕ್ರಿಯೆಗಳು ಶುರುವಾಗಲಿವೆಯಂತೆ.

"ಬಹಳ ದಿನಗಳಿಂದ ನೀಲ್ ಮತ್ತು ಐಶ್ವರ್ಯ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈಗ ಅಧಿಕೃತವಾಗಿ ಈ ಜೋಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದೆ. ಇಬ್ಬರ ನಡುವೆ ಹೇಗೆ ಸಮಸ್ಯೆ ಶುರುವಾಯಿತು ಎಂಬ ಬಗ್ಗೆ ಮಾಹಿತಿ ಇಲ್ಲ, ಆದರೆ ಇವರು ದೂರ ಆಗೋದು ಪಕ್ಕಾ" ಎಂದು ಹೇಳಿದ್ದರು.

ಬಿಗ್‌ ಬಾಸ್‌ ಶೋನಲ್ಲಿಯೂ ಭಾಗವಹಿಸಿದ್ರು

ಈ ಜೋಡಿ ಸ್ಮಾರ್ಟ್ ಜೋಡಿ, ಬಿಗ್ ಬಾಸ್ 17 ಶೋನಲ್ಲಿ ಒಟ್ಟಿಗೆ ಭಾಗವಹಿಸಿದ್ದರು. ಡಿವೋರ್ಸ್‌ ಗಾಸಿಪ್‌ ಬಗ್ಗೆ ಮಾತನಾಡಿದ್ದ ಐಶ್ವರ್ಯಾ ಶರ್ಮ ಅವರು “ನಾನು ಬಹಳ ದಿನಗಳಿಂದ ಸೈಲೆಂಟ್‌ ಆಗಿದ್ದೇನೆ. ನಾನು ವೀಕ್ ಅಲ್ಲ, ಬದಲಿಗೆ ನನ್ನ ಶಾಂತಿಯನ್ನು ಕಾಪಾಡಿಕೊಳ್ತಿದೀನಿ. ನಾನು ಎಂದೂ ಹೇಳದ ವಿಷಯಗಳನ್ನು ಬರೆಯುತ್ತೀರಿ, ನಾನು ಎಂದೂ ಸಪೋರ್ಟ್‌ ಮಾಡದ ಕಥೆಗಳನ್ನು ಹೇಳುತ್ತೀರಿ" ಎಂದು ಬರೆದುಕೊಂಡಿದ್ದರು.