ಆಯುಷ್ಮಾನ್ ಖುರಾನಾ ಜೊತೆ ಅನನ್ಯಾ ಪಾಂಡೆ ಶೂಟಿಂಗ್; ನೆಟ್ಟಿಗ್ಗರಿಂದ ನಟಿ ಟ್ರೋಲ್
ಈ ವರ್ಷ ಬಾಲಿವುಡ್ ಇಂಡಸ್ಟ್ರಿಗೆ ಅಷ್ಟೊಂದು ಉತ್ತಮವಾಗಿಲ್ಲ. ವರ್ಷ ಬಿಡುಗಡೆಯಾದ ಬಿಗ್ ಬಜೆಟ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಕೆಟ್ಟ ರೀತಿಯಲ್ಲಿ ನೆಲಕಚ್ಚಿವೆ. ಕೆಲವು ಚಿತ್ರಗಳನ್ನು ಬಿಟ್ಟರೆ ಉಳಿದೆಲ್ಲ ಚಿತ್ರಗಳು ಫ್ಲಾಪ್ ಆಗಿವೆ. ಇತ್ತೀಚೆಗೆ ಬಿಡುಗಡೆಯಾದ ಸೌತ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ (Ananya Panday ) ಅವರ ಚಿತ್ರ ಲೈಗರ್ ಕೂಡ ಈ ಪಟ್ಟಿಯಲ್ಲಿ ಸೇರಿದೆ. ಚಿತ್ರವನ್ನು ಪ್ರೇಕ್ಷಕರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಈ ಮಧ್ಯೆ, ಅನನ್ಯಾ ಪಾಂಡೆ ಕೈಯಲ್ಲಿ ಮತ್ತೊಂದು ಚಿತ್ರ ಸಿಕ್ಕಿದೆ. ಒಂದರ ಹಿಂದೆ ಒಂದರಂತೆ ಫ್ಲಾಪ್ ಚಿತ್ರಗಳನ್ನು ನೀಡಿರುವ ಅನನ್ಯಾ ಪಾಂಡೆ ಈಗ ಡ್ರೀಮ್ ಗರ್ಲ್ 2ನಲ್ಲಿ ಕಾಣಿಸಿಕೊಳ್ಳುವುದನ್ನು ಜನ ಸಹಿಸುತ್ತಿಲ್ಲ. ಮತ್ತು ಫ್ಲಾಪ್ ಅನನ್ಯಾ ಪಾಂಡೆಯನ್ನು ಈ ಚಿತ್ರದಲ್ಲಿ ನೋಡಲು ಯಾರೂ ಬಯಸುವುದಿಲ್ಲ ಎಂದು ಜನ ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ
ಮುಂದಿನ ದಿನಗಳಲ್ಲಿ ಡ್ರೀಮ್ ಗರ್ಲ್ 2 ಚಿತ್ರದಲ್ಲಿ ಅನನ್ಯಾ ಪಾಂಡೆ ಆಯುಷ್ಮಾನ್ ಖುರಾನಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಟೀಂ ಇಂಡಿಯಾ ಏಷ್ಯಾಕಪ್ ಗೆದ್ದಾಗ ಸ್ವತಃ ಅನನ್ಯಾ ಇನ್‌ಸ್ಟಾಗ್ರಾಮ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ.
ಆದರೆ ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಕಾಮೆಂಟ್‌ಗಳನ್ನು ನೋಡಿದ ಜನರು ಈ ಚಿತ್ರದಲ್ಲಿ ಅನನ್ಯಾ ಅವರನ್ನು ನೋಡಲು ಇಷ್ಟಪಡುವುದಿಲ್ಲ ಎಂದು ಹೇಳಲಾಗುತ್ತಿದೆ. ಕೆಟ್ಟ ನಟನೆಗಾಗಿ ಅನನ್ಯಾಗೆ ಆಸ್ಕರ್ ನೀಡಬೇಕೆಂದು ಹಲವರು ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಲೈಗರ್ ಚಿತ್ರದಲ್ಲಿನ ಕಳಪೆ ನಟನೆಯಿಂದಾಗಿ ಅನನ್ಯಾ ಪಾಂಡೆ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಅಷ್ಟೇ ಅಲ್ಲ, ಅವರ ಕೆಟ್ಟ ನಟನೆಯಿಂದ ಜನರು ಅವರನ್ನು ನಿರಂತರವಾಗಿ ಟ್ರೋಲ್ ಮಾಡುತ್ತಿದ್ದಾರೆ.
ಈಗ ಅವರ ಹೊಸ ಚಿತ್ರ ಡ್ರೀಮ್ ಗರ್ಲ್ ಶೂಟಿಂಗ್ ಶುರುವಾಗಿದ್ದು, ಈ ಚಿತ್ರದಲ್ಲಿ ಅವರನ್ನು ನೋಡಲು ಜನ ಇಷ್ಟಪಡುತ್ತಿಲ್ಲ ಮತ್ತು ಇದು ಆಯುಷ್ಮಾನ್ ಖುರಾನಾ ಅವರ ಚಿತ್ರವನ್ನು ಹಾಳು ಮಾಡುತ್ತದೆ ಎಂದು ಹಲವರು ಹೇಳಿದ್ದಾರೆ.
'ಬ್ರೋ.. ನೀವು ಇವಳನ್ನು ಮಧ್ಯದಲ್ಲಿ ಏಕೆ ತಂದಿದ್ದೀರಿ?' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 'ಆಯುಷ್ಮಾನ್ ಈ ಚಿತ್ರವನ್ನು ಅನನ್ಯಾ ಜೊತೆ ಮಾಡುತ್ತಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಉಳಿದಂತೆ ಎಲ್ಲವೂ ಚೆನ್ನಾಗಿದೆ ಆದರೆ ಅವರ ನಟನೆಯು ಈ ವೀಡಿಯೊದಲ್ಲಿ ತುಂಬಾ ಕೆಟ್ಟದಾಗಿದೆ ಎಂದು ಒಬ್ಬ ಸೋಶಿಯಲ್ ಮಿಡೀಯಾ ಯೂಸರ್ ಹೇಳಿದ್ದಾರೆ
ಅನನ್ಯಾ ಪಾಂಡೆ ವೃತ್ತಿಜೀವನ ವಿಫಲವಾಗಿದೆ. ಅನನ್ಯಾ ಪಾಂಡೆ ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು ಹಿಟ್ ಚಿತ್ರವನ್ನು ನೀಡಿಲ್ಲ. ಕರಣ್ ಜೋಹರ್ ಅವರ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಅದು ಕೆಟ್ಟದಾಗಿ ಸೋತಿತು.
ಇದಾದ ನಂತರ ಅವರು ಖಾಲಿ ಪೀಲಿ, ಪತಿ ಪಟ್ನಿ ಔರ್ ವೋ, ಡೆಹ್ರಿಯಾನ್ ಚಿತ್ರಗಳಲ್ಲಿ ಕಾಣಿಸಿಕೊಂಡರು, ಆದರೆ ಈ ಎಲ್ಲಾ ಚಿತ್ರಗಳು ಸಹ ವಿಫಲವಾದವು. ಮುಂದಿನ ದಿನಗಳಲ್ಲಿ ಅನನ್ಯಾ ಪಾಂಡೆ ಅವರು ಡ್ರೀಮ್ ಗರ್ಲ್ 2 ಮತ್ತು ಖೋ ಗಯೇ ಹಮ್ ಕಹಾನ್ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.