ಸೆಲೆಬ್ರಿಟಿ ವೆಡ್ಡಿಂಗ್ ಅಂದ್ರೆ ಎಷ್ಟು ದುಡ್ಡು ಖಾಲಿಯಾಗುತ್ತೆ, ಇವರು ಹೇಳ್ತಾರೆ ಕೇಳಿ!
ಬಾಲಿವುಡ್ ನಟಿ ಅಮೃತಾ ರಾವ್ ಮತ್ತು RJ ಅನ್ಮೋಲ್ 2014 ರಲ್ಲಿ ರಹಸ್ಯವಾಗಿ ವಿವಾಹವಾದರು. ಅವರ ಮದುವೆಗೆ ಮಾಡಿರುವ ಖರ್ಚು ಕೇಳಿದರೆ ಯಾರಿಗಾದರೂ ಶಾಕ್ ಆಗುವುದು ಗ್ಯಾರಂಟಿ. ಸೆಲೆಬ್ರಿಟಿ ವೆಡ್ಡಿಂಗ್‌ಗೆ ಖರ್ಚು ಮಾಡಿದ್ದು ಇಷ್ಟೇನಾ ಅಂತ ಆಶ್ಚರ್ಯವಾಗೋದು ಗ್ಯಾರಂಟಿ. ಅಷ್ಟಕ್ಕೂ ಈ ಜೋಡಿಯ ಮದುವೆಯ ಜಬೆಟ್ ಎಷ್ಟು ಗೊತ್ತಾ?
ನಟಿ ಅಮೃತಾ ರಾವ್ ಅವರ ಪತಿ, ರೇಡಿಯೋ ಜಾಕಿ ಅನ್ಮೋಲ್ ಅವರೊಂದಿಗೆ ತಮ್ಮ ಇತ್ತೀಚಿನ ವ್ಲಾಗ್ ಯೂಟ್ಯೂಬ್‌ನಲ್ಲಿ ತಮ್ಮ ಮದುವೆ ಬಗ್ಗೆ ಶಾಕಿಂಗ್ ವಿವರ ಹಂಚಿಕೊಂಡಿದ್ದಾರೆ.
ತಮ್ಮ ಚಾನೆಲ್ ಕಪಲ್ ಆಫ್ ಥಿಂಗ್ಸ್‌ನಲ್ಲಿ ವಾರ್ಷಿಕೋತ್ಸವದ ವಿಶೇಷ ವೀಡಿಯೊದಲ್ಲಿ, ಅಮೃತಾ ಮತ್ತು ಅನ್ಮೋಲ್ ತಮ್ಮ ಅಭಿಮಾನಿಗಳನ್ನು ಮುಂಬೈನಿಂದ ಪುಣೆಗೆ ಪ್ರಯಾಣಿಸಿದರು.
ಅಮೃತಾ ರಾವ್ ಮತ್ತು ಅನ್ಮೋಲ್ ದಂಪತಿ 2014ರಲ್ಲಿ ಒಂಬತ್ತು ವರ್ಷಗಳ ಹಿಂದೆ ಪುಣೆಯ ಇಸ್ಕಾನ್ ದೇವಾಲಯದಲ್ಲಿ ರಹಸ್ಯವಾಗಿ ಮದುವೆಯಾದರು.
ವ್ಲಾಗ್‌ನಲ್ಲಿ, ಅಮೃತಾ ಮತ್ತು ಅನ್ಮೋಲ್ ಅವರು ತಮ್ಮ ಮದುವೆಗೆ ಕೇವಲ ₹ 1.5 ಲಕ್ಷವನ್ನು ಖರ್ಚು ಮಾಡಿದ್ದಾರೆ ಎಂದು ಬಹಿರಂಗಪಡಿಸಿದರು. ಇದರಲ್ಲಿ ಅವರ ಬಟ್ಟೆ, ಸ್ಥಳ ಮತ್ತು ಇತರ ವೆಚ್ಚಗಳು ಸೇರಿವೆ ಎಂದಿದ್ದಾರೆ.
ಮೈ ಹೂ ನಾ, ಇಷ್ಕ್ ವಿಷ್ಕ್, ಜಾಲಿ ಎಲ್‌ಎಲ್‌ಬಿ ಮತ್ತು ಠಾಕ್ರೆಯಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅಮೃತಾ ರಾವ್, ತನ್ನ ಮದುವೆಗೆ ಡಿಸೈನರ್ ಬಟ್ಟೆಗಳನ್ನು ಧರಿಸಿರಲಿಲ್ಲ. ಸಾಂಪ್ರದಾಯಿಕ ನೋಟಕ್ಕೆ ಮೊರೆ ಹೋದರು.
3000 ರೂಪಾಯಿ ಮೌಲ್ಯದ ಸೀರೆ ಆಯ್ಕೆ ಮಾಡಿಕೊಂಡಿದ್ದರು . ಅನ್ಮೋಲ್ ಅವರ ಮದುವೆ ಉಡುಪಿನ ಬೆಲೆಯೂ ಅದೇ ಮೌಲ್ಯದ್ದು ಎಂದು ಹೇಳಿದ್ದಾರೆ. ₹11,000 ವೆಚ್ಚದಲ್ಲಿ ಮದುವೆ ಸ್ಥಳ ನಿಗದಿಪಡಿಸಲಾಗಿತ್ತು.