ತಿಂಗಳಿಗೆ ಕೇವಲ 50 ರೂ. ಗಳಿಸುತ್ತಿದ್ದ ವ್ಯಕ್ತಿ ಈಗ ಕೋಟಿ ಆಸ್ತಿಯ ಒಡೆಯ, ಬಾಲಿವುಡ್ ಸೂಪರ್‌ಸ್ಟಾರ್!
ಕೇವಲ ಡ್ರೈವಿಂಗ್ ಪರವಾನಿಗೆ ತಗೆದುಕೊಂಡು ಕೆಲಸ ಗಿಟ್ಟಿಸಿಕೊಳ್ಳಲು ಮುಂಬೈಗೆ ಬಂದಿಳಿದ ವ್ಯಕ್ತಿ. ಕೈಯಲ್ಲಿ ಹಣವಿಲ್ಲದೆ, ಉಳಿದುಕೊಳ್ಳಲು ಜಾಗವಿಲ್ಲದೆ ಮರೀನ್ ಡ್ರೈವ್‌ನಲ್ಲಿ ಮಲಗಿದ್ದರು. ದಿನಕ್ಕೆ ಕೇವಲ 50 ರೂಪಾಯಿಗಳನ್ನು ಸಂಪಾದಿಸುತ್ತಿದ್ದರು. ಆದರೆ ಈಗ ಕೋಟಿ ಕೋಟಿ ಆಸ್ತಿಯ ಪಡೆಯ. ಬಾಲಿವುಡ್‌ನ ಸೂಪರ್‌ಸ್ಟಾರ್.
ಬಾಲಿವುಡ್‌ನಲ್ಲಿ ಮಿಂಚಬೇಕೆಂಬ ಕನಸಿನೊಂದಿಗೆ ಪ್ರತಿದಿನ ನೂರಾರು ಮಂದಿ ಮಾಯಾ ನಗರಿ ಮುಂಬೈಗೆ ಬಂದಿಳಿಯುತ್ತಾರೆ. ಆದರೆ ಎಲ್ಲರ ಕನಸು ಈಡೇರುವುದಿಲ್ಲ. ಪ್ರತಿಭೆಯಿದ್ದೂ, ನಿರಂತರವಾಗಿ ಪರಿಶ್ರಮ ಹಾಕಿದವರೂ ಇಲ್ಲಿ ಲೆಕ್ಕಕ್ಕಿಲ್ಲ. ನಟರಾಗುವ ಕಿಂಚಿತ್ತೂ ಆಸೆಯಿಲ್ಲದೆ ಮುಂಬೈ ಬಂದಿಳಿದ ಕೆಲ ಮಂದಿ ಕೂಡಾ ಸೂಪರ್‌ಸ್ಟಾರ್‌ಗಳಾಗಿದ್ದಾರೆ.
ಕೇವಲ ಡ್ರೈವಿಂಗ್ ಪರವಾನಿಗೆ ತಗೆದುಕೊಂಡು ಕೆಲಸ ಗಿಟ್ಟಿಸಿಕೊಳ್ಳಲು ಮುಂಬೈ ಬಂದಿಳಿದ ವ್ಯಕ್ತಿ. ಕೈಯಲ್ಲಿ ಹಣವಿಲ್ಲದೆ, ಉಳಿದುಕೊಳ್ಳಲು ಜಾಗವಿಲ್ಲದೆ ಮರೀನ್ ಡ್ರೈವ್‌ನಲ್ಲಿ ಮಲಗುತ್ತಿದ್ದರು. ದಿನಕ್ಕೆ ಕೇವಲ 50 ರೂಪಾಯಿಗಳನ್ನು ಸಂಪಾದಿಸುತ್ತಿದ್ದರು. ಆದರೆ ಜಾಹೀರಾತಿನಲ್ಲಿ ನಟಿಸಲು ಅವಕಾಶ ಸಿಕ್ಕರೂ ನಿರಾಕರಿಸಿದರು. ಯಾಕೆಂದರೆ ಅವರ ನಿರ್ಧಾರ ನಟನಾಗುವುದಾಗಿತ್ತು. ಅವರು ಮತ್ಯಾರೂ ಅಲ್ಲ. ಅಮಿತಾಬ್ ಬಚ್ಚನ್. ಈಗ ಬಾಲಿವುಡ್‌ನಲ್ಲಿ ಬಿಗ್ ಸ್ಟಾರ್.
ಅಮಿತಾಬ್ ಬಚ್ಚನ್, ಬಾಲಿವುಡ್‌ನ ಹಿರಿಯ ನಟ, ಹಲವು ಯಶಸ್ವೀ ಸಿನಿಮಾಗಳಲ್ಲಿ ನಟಿಸಿರೋ ಅಮಿತಾಬ್ ಬಚ್ಚನ್ ಯಶಸ್ವೀ ನಟನಾಗುವ ಮೊದಲು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದರು. ಅವಕಾಶಗಳು ಸಿಗದೆ ಹೈರಾಣಾಗಿದ್ದರು.
ಈ ಹಿಂದೆ ಸಂದರ್ಶನವೊಂದರಲ್ಲಿ ಅಮಿತಾಬ್ ಬಚ್ಚನ್, ಮುಂಬೈಗೆ ಬಂದ ಆರಂಭದ ದಿನಗಳಲ್ಲಿ ನನಗೆ ಉಳಿದುಕೊಳ್ಳಲು ಸ್ಥಳವಿರಲ್ಲಿಲ್ಲ. ಹೀಗಾಗಿ ಮರೀನ್ ಡ್ರೈವ್‌ನ ಬೆಂಚ್‌ಗಳಲ್ಲಿ ಮಲಗಿದ್ದೆ ಎಂದು ತಿಳಿಸಿದ್ದರು.
ಅಮಿತಾಬ್ ಬಚ್ಚನ್, ಕೋಲ್ಕತ್ತಾದಲ್ಲಿ ಬರ್ಡ್ & ಕಂಪನಿಯ ವ್ಯವಹಾರ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದರು. ಅಮಿತಾಬ್ ನಟನಾಗಲು ಬಯಸಿದ್ದರು. ಆದರೆ ಪ್ಲಾನ್ ಬಿಯನ್ನು ಸಹ ಇಟ್ಟುಕೊಂಡಿದ್ದರು.
ಹೀಗಾಗಿಯೇ ಅವರು ಡ್ರೈವಿಂಗ್ ಲೈಸೆನ್ಸ್‌ನ್ನು ಜೊತೆಗೇ ಕೊಂಡೊಯ್ಯುತ್ತಿದ್ದರು. 'ನಟನಾಗದಿದ್ದರೆ ನಾನು ಕ್ಯಾಬ್ ಓಡಿಸುತ್ತಿದ್ದೆ' ಎಂದು ಅಮಿತಾಬ್ ಈ ಹಿಂದೆ ಹೇಳಿದ್ದರು.
ವರದಿಗಳ ಪ್ರಕಾರ, ಅಮಿತಾಬ್ ಬಚ್ಚನ್ ರೇಡಿಯೊ ಸ್ಪಾಟ್‌ಗಳಲ್ಲಿ ತಿಂಗಳಿಗೆ 50 ರೂ. ಗಳಿಸುತ್ತಿದ್ದರು. ಆ ಸಮಯದಲ್ಲಿ, ಜಾಹೀರಾತು ಏಜೆನ್ಸಿಯೊಂದು 10,000 ರೂ. ನೀಡಲು ಮುಂದಾಯಿತು. ಆದರೆ ಅಮಿತಾಬ್ ಈ ಅವಕಾಶವನ್ನು ತಿರಸ್ಕರಿಸಿದರು. ಈ ರೀತಿಯ ಕೆಲಸಕ್ಕೆ ಒಗ್ಗಿಕೊಳ್ಳುವುದು ತನ್ನ ಕನಸನ್ನು ಸಾಯಿಸಬಹುದು ಎಂದು ಬಚ್ಚನ್ ಅಂದುಕೊಂಡರು.
ಆದರೆ ಆ ನಂತರ ಅಮಿತಾಭ್ ಬಚ್ಚನ್, ಮಗುವಿನ ಉಡುಪುಗಳಿಂದ ಹಿಡಿದು ಕೂದಲಿನ ಎಣ್ಣೆಯವರೆಗೆ ಎಲ್ಲದರ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಆದರೆ ಒಮ್ಮೆ ಅವರು ಜಾಹೀರಾತುಗಳನ್ನು ಮಾಡುವುದು ತುಂಬಾ ಕೆಟ್ಟ ನಿರ್ಧಾರ ಎಂದು ತಿಳಿದುಕೊಂಡಿದ್ದರು. ನಟನಾಗಲು ಮುಂಬೈಗೆ ಬಂದಾಗ ಯಾವುದೇ ಜಾಹೀರಾತುಗಳನ್ನು ಮಾಡದಿರಲು ನಿರ್ಧರಿಸಿದರು.
ಆ ನಂತರ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ಬೆಳೆಯುತ್ತಾ ಬಂದರು. ಹಲವು ಸಕ್ಸಸ್‌ಫುಲ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಕೊನೆಯದಾಗಿ ಗಣಪ ಚಿತ್ರದಲ್ಲಿ ಕಾಣಿಸಿಕೊಂಡರು. ಕಲ್ಕಿ 2898 AD ಮತ್ತು ತಲಿಯಾವರ್ 170 ರಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.