ಆಲಿಯಾರ ಗಂಗೂಬಾಯಿ ಕಥಿಯಾವಾಡಿ ಟ್ರೇಲರ್ ರೀಲಿಸ್-ಯಾರಿದು ಗಂಗೂಬಾಯಿ?
ಆಲಿಯಾ ಭಟ್ (Alia Bhatt) ಅಭಿನಯದ ಬಹು ನಿರೀಕ್ಷಿತ ಚಿತ್ರ ಗಂಗೂಬಾಯಿ ಕಥಿಯಾವಾಡಿಯ (Gangubai Kathiawadi) ಟ್ರೇಲರ್ ಶುಕ್ರವಾರ ಬಿಡುಗಡೆಯಾಗಿದೆ. ಸಂಜಯ್ ಲೀಲಾ ಬನ್ಸಾಲಿ ಚಿತ್ರದ ಟ್ರೇಲರ್ ಹೊರಬಂದಿದೆ. ಚಿತ್ರದಲ್ಲಿ ಆಲಿಯಾ ಮುಂಬೈನ ರೆಡ್ ಲೈಟ್ ಏರಿಯಾದ ಕಾಮಟಿಪುರದ ಪವರ್‌ಫುಲ್ ಮಹಿಳೆ ಗಂಗೂಬಾಯಿ ಪಾತ್ರದಲ್ಲಿ ನಟಿಸಿದ್ದಾರೆ.ಈ ಸಿನಿಮಾವು ನೈಜ ಕಥೆ ಆಧಾರಿತವಾಗಿದೆ.
ಕಥೆಯು ಗುಜರಾತಿನ ಕಥಿಯಾವಾರದಲ್ಲಿ ವಾಸಿಸುವ ಗಂಗೂಬಾಯಿಯ ಜೀವನದ ಕುರಿತಾಗಿದೆ. ಈ ಚಿತ್ರ ಫೆಬ್ರವರಿ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಅಜಯ್ ದೇವಗನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಗಂಗೂಬಾಯಿ ಗುಜರಾತ್‌ನ ಕಥಿಯವಾಡ ನಿವಾಸಿಯಾಗಿದ್ದು, ಈ ಕಾರಣಕ್ಕಾಗಿ ಆಕೆಯನ್ನು ಗಂಗೂಬಾಯಿ ಕಥಿವಾಡಿ ಎಂದು ಹೆಸರಿಸಲಾಯಿತು. ಆಕೆಯ ನಿಜವಾದ ಹೆಸರು ಗಂಗಾ ಹರ್ಜಿವಂದಾಸ್ ಕಥಿವಾಡಿ. ಗಂಗೂಬಾಯಿಯವರ ಜೀವನವು ಚಿತ್ರದ ಕಥೆಗಿಂತ ಕಡಿಮೆ ಇರಲಿಲ್ಲ.
ಗಂಗೂಬಾಯಿ 16ನೇ ವಯಸ್ಸಿನಲ್ಲಿ ತನ್ನ ತಂದೆಯ ಲೆಕ್ಕ ಪರಿಶೋಧಕನನ್ನು ಪ್ರೀತಿಸುತ್ತಿದ್ದಳು.ಆ ಹುಡುಗನನ್ನು ಮದುವೆಯಾಗಲು ಮನೆಯಿಂದ ಓಡಿಹೋಗಿ ಮುಂಬೈಗೆ ಬಂದಳು. ಗಂಗೂಬಾಯಿ ಯಾವಾಗಲೂ ನಟಿಯಾಗಬೇಕೆಂದು ಬಯಸಿದ್ದರು, ಆಶಾ ಪರೇಖ್ ಮತ್ತು ಹೇಮಾ ಮಾಲಿನಿಯ ದೊಡ್ಡ ಅಭಿಮಾನಿಯಾಗಿದ್ದರು.
ಯಾವಾಗ ಅನಿವಾರ್ಯವಾಗಿ ಕಾಮಾಟಿಪುರದ ಮಾಫಿಯಾ ಕ್ವೀನ್ ಆದಳೋ ಗಂಗೂಬಾಯಿ ಕತಿಯಾವಾಡಿಗೆ ಯಾವ ಮಹಿಳೆಯನ್ನೂ ಒತ್ತಾಯವಾಗಿ ವೇಶ್ಯವಾಟಿಕೆಗೆ ತಳ್ಳಬಾರದೆಂಬ ನಿಯತ್ತು ಇತ್ತು. ಪ್ರತಿಯೊಬ್ಬ ವೇಶ್ಯೆಯ ಜೀವನ ಸುಧಾರಿಸಲು ಕಷ್ಟ ಪಡುತ್ತಿದ್ದಳು. ಅಷ್ಟೇ ಅಲ್ಲ ಅನಾಥ ಮಕ್ಕಳ ಜೀವನಕ್ಕೂ ಆಧಾರವಾಗಿದ್ದರು. ಅವಳನ್ನು ಕಾಮಟಿಪುರದ ಜನರು ಅದೆಷ್ಟು ಜನರು ಹೆಚ್ಚಿಕೊಂಡಿದ್ದರು ಅಂದರೆ, ಅವರ ನಿಧನದ ನಂತರ ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಗಿದೆ.
ಆದರೆ ಅದೃಷ್ಟ ಗಂಗೂಬಾಯಿ ಅವರ ಪರ ಇರಲಿಲ್ಲ. ಆಕೆಯ ಪತಿ ವಂಚಕನಾಗಿದ್ದು ಮುಂಬೈನ ಕಾಮತಿಪುರದ ರೆಡ್ ಲೈಟ್ ಏರಿಯಾದಲ್ಲಿ ಗಂಗೂಬಾಯಿಯನ್ನು 500 ರೂಗೆ ಆಕೆಗೆ ಮಾರಾಟ ಮಾಡುತ್ತಾನೆ.
ಹುಸೇನ್ ಜೈದಿ, ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಎಂಬ ಪುಸ್ತಕದ ಅಧ್ಯಾಯದ ಪ್ರಕಾರ, ಗಂಗೂಬಾಯಿ ಮಾಫಿಯಾ ಡಾನ್ ಕರೀಂ ಲಾಲಾ ಗ್ಯಾಂಗ್‌ನ ವ್ಯಕ್ತಿ ಅತ್ಯಾಚಾರವೆಸಗಿದ್ದಾನೆ ಎಂದು ಹೇಳಲಾಗಿದೆ. ಇದಾದ ನಂತರ ಗಂಗೂಬಾಯಿ ಕರೀಂ ಲಾಲಾ ಅವರನ್ನು ಭೇಟಿಯಾಗಿ ನ್ಯಾಯ ಕೇಳಿದ್ದರು.
ಅಷ್ಟೇ ಅಲ್ಲ ಗಂಗೂಬಾಯಿ ಕರೀಂಗೂ ರಾಖಿ ಕಟ್ಟಿ ಸಹೋದರನನ್ನಾಗಿಸಿಕೊಂಡಿದ್ದರು. ನಂತರ ಅವರು ಮುಂಬೈನ ಅತಿದೊಡ್ಡ ಮಹಿಳಾ ಡಾನ್‌ಗಳಲ್ಲಿ ಒಬ್ಬರಾದರು. ಮುಂಬೈನ ಕಾಮಟಿಪುರ ರೆಡ್ ಲೈಟ್ ಏರಿಯಾದಲ್ಲಿ ಗಂಗೂಬಾಯಿ ಅವರು ಅನೇಕ ಕಾರ್ಯಗಳನ್ನು ನಡೆಸುತ್ತಿದ್ದರು.
ವೇಶ್ಯೆಯರನ್ನು ಸಶಕ್ತಗೊಳಿಸಲು ಮತ್ತು ಸಬಲಗೊಳಿಸಲು ಅವರು ತನ್ನ ಪವರ್ ಉಪಯೋಗಿಸಿಕೊಳ್ಳುತ್ತಿದ್ದರು. ಒಂದು ಹಂತದಲ್ಲಿ ಗಂಗೂಬಾಯಿ ಮುಂಬೈ ಭೂಗತ ಜಗತ್ತಿನ ಡಾನ್‌ಗಳು ಮತ್ತು ರಾಜಕಾರಣಿಗಳೊಂದಿಗೆ ಸಂಪರ್ಕ ಹೊಂದಿದ್ದರು. 60ರ ದಶಕದಲ್ಲಿ ಗಂಗೂಬಾಯಿ ಮುಂಬೈ ಮಾಫಿಯಾದ ದೊಡ್ಡ ಹೆಸರು.
ಸಂಜಯ್ ಲೀಲಾ ಬನ್ಸಾಲಿಯವರ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಕಥೆಯು 'ದಿ ಮಾಫಿಯಾ ಕ್ವೀನ್ ಆಫ್ ಮುಂಬೈ' ಈ ಪುಸ್ತಕವನ್ನು ಹುಸೇನ್ ಜೈದಿ ಬರೆದಿದ್ದಾರೆ. ಆಲಿಯಾ ಭಟ್ ಅವರ ಸಿನಿಮಾವು ಥಿಯೇಟರ್‌ಗಳಿಗೆ ಆಗಮಿಸಿದ ಸುಮಾರು 4 ವಾರಗಳ ನಂತರ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ವಿಜಯ್ ರಾಝ್, ಜಿಮ್ ಸರ್ಭ್ ಮತ್ತು ಶಾಂತನು ಮಹೇಶ್ವರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.