ಹೇಗಿದೆ ನೋಡಿ ಆಲಿಯಾ-ರಣಬೀರ್ ಹೊಸ ಮನೆಯ ಇಂಟೀರಿಯರ್
ಬಾಲಿವುಡ್‌ನ ಲವ್ಲಿ ಕಪಲ್ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್(Ranbir Kapoor) ತಮ್ಮ ಮಗಳೊಂದಿಗೆ ತಮ್ಮ ಹೊಸ ಮನೆಗೆ ಪ್ರವೇಶಿಸಿದ್ದಾರೆ. ಈ ಜೋಡಿಯ ಮನೆ 'ವಾಸ್ತು' ವಿನಲ್ಲಿ ನೈಸರ್ಗಿಕ ಬೆಳಕು ಮೂಲೆ ಮೂಲೆಯನ್ನು ಪ್ರವೇಶಿಸುತ್ತದೆ. ಕ್ಲಾಸಿಕ್ ಆಗಿರುವ ಈ ಮನೆಯ ಫೋಟೋಗಳು ಸಖತ್ ವೈರಲ್ ಆಗಿವೆ. ಆಲಿಯಾ ರಣಬೀರ್ ಮನೆಯೊಳಗಿನ ಫೋಟೋಗಳು ಇಲ್ಲಿವೆ. ಆಲಿಯಾ ಮತ್ತು ರಣಬೀರ್ ಅವರ ಮನೆಯ ಒಳಗಿನ ಪೋಟೋಗಳನ್ನು ಬೊಲ್ಲಿ ಬ್ಲೈಂಡ್ಸ್ ಎನ್ ಗಾಸಿಪ್ (Bolly Blinds N Gossip) ಖಾತೆಯಿಂದ ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತಮ್ಮ ಮನೆಯನ್ನು ಬಿಳಿ ಮತ್ತು ಕಪ್ಪು ಬಣ್ಣಗಳಿಂದ ಅಲಂಕರಿಸಿದ್ದಾರೆ. ಈ ದಂಪತಿಗಳು ತಮ್ಮ ಹೊಸ ಮನೆಯನ್ನು ಪೀಠೋಪಕರಣಗಳು ಮತ್ತು ಕಲೆಯ ಮೂಲಕ ಒಳಾಂಗಣ ವಿನ್ಯಾಸವನ್ನು ಬಳಸಿದ್ದಾರೆ.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮನೆಯ ಹಜಾರವು ಮಹಡಿಯಿಂದ ಚಾವಣಿಯವರೆಗೆ ಗಾಜಿನ ಬಾಗಿಲುಗಳು ಮತ್ತು ಕಿಟಕಿಗಳಿಂದ ತುಂಬಾ ವಿಭಿನ್ನವಾಗಿ ಮತ್ತು ವಿಶಾಲವಾಗಿ ಕಾಣುತ್ತದೆ. ಹಲವಾರು ಕುಟುಂಬ ಚಿತ್ರಗಳು ಮತ್ತು ಸ್ಮರಣಿಕೆಗಳನ್ನು ಅದರಲ್ಲಿ ಸೇರಿಸಿದ್ದಾರೆ.
ಈ ಮನೆಯಲ್ಲಿ, ರಣಬೀರ್ ಅವರ ತಾತ, ದಿವಂಗತ ನಟ-ನಿರ್ದೇಶಕ ರಾಜ್ ಕಪೂರ್ ಅವರ ಕಪ್ಪು ಮತ್ತು ಬಿಳಿ ಪೋಟೋ ಇದೆ. ಈ ಮೂಲಕ ರಣಬೀರ್ ಅವರ ಅಜ್ಜ ರಾಜ್ ಕಪೂರ್ ಅವರಿಗೆ ತಮ್ಮ ಐಷಾರಾಮಿ ಮುಂಬೈ ಅಪಾರ್ಟ್ಮೆಂಟ್‌ನಲ್ಲಿ ಗೌರವ ಸಲ್ಲಿಸಿದ್ದಾರೆ
ರಣಬೀರ್ ಅವರ ನೆಚ್ಚಿನ ಸಂಖ್ಯೆ '8'ರ ಜರ್ಸಿ ಕೂಡ ಒಂದು ಫೇರ್ಮ್‌ನಲ್ಲಿ ಕಂಡುಬರುತ್ತದೆ. ರಣಬೀರ್ ಕಪೂರ್ ತಮ್ಮ ವೃತ್ತಿಜೀವನದಲ್ಲಿ ಗೆದ್ದಿರುವ ಪ್ರಶಸ್ತಿಗಳ ಟ್ರೋಫಿಗಳನ್ನು ಸಹ ಶೋಕೇಸ್‌ನಲ್ಲಿ ಇರಿಸಲಾಗಿದೆ.
ಮನೆಯ ಅನೇಕ ಭಾಗಗಳಲ್ಲಿ ಬಹಳಷ್ಟು ಬಿಳಿ, ಕಪ್ಪು ಮತ್ತು ಕಂದು ಶೇಡ್‌ಗಳನ್ನು ಬಳಸಲಾಗಿದೆ. ಮರದ ನೆಲವು ಬಿಳಿ ಗೋಡೆಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಈ ದಂಪತಿಗಳು ಮುಂಬೈನಲ್ಲಿ ಕೃಷ್ಣ ರಾಜ್ ಎಂಬ ಇನ್ನೊಂದು ಮನೆಯನ್ನು ಹೊಂದಿದ್ದಾರೆ ಮತ್ತು ಅದನ್ನು ಇತ್ತೀಚೆಗೆ ನವೀಕರಿಸಲಾಗಿದೆ.