Alia Bhatt ರಿವೀಲ್ ಆಯ್ತು ಆಲಿಯಾ ಡೆಲಿವರಿ ಡೇಟ್; ಈ ದಿನಾಂಕವೇ ಯಾಕೆ?
ಕೊನೆಗೂ ಆಲಿಯಾ ಭಟ್ ಡೆಲಿವರಿ ಡೇಟ್ ರಿವೀಲ್. ಸ್ಪೆಷಲ್ ದಿನಾಂಕದ ಬಗ್ಗೆ ಪದೇ ಪದೇ ಪ್ರಶ್ನೆ ಮಾಡುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಉತ್ತರ...
ಬಾಲಿವುಡ್ ಸ್ಟಾರ್ ಕಪಲ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನವೆಂಬರ್ ಡೆಲಿವರಿ ದಿನಾಂಕ ಇರುವ ಕಾರಣ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಕೆಲಸಕ್ಕೆ ಬ್ರೇಕ್ ಹಾಕಿ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿರುವ ಆಲಿಯಾ ಭಟ್ ನವೆಂಬರ್‌ನಲ್ಲಿ ಈ ದಿನಾಂಕವನ್ನು ತಮ್ಮ ಡೆಲಿವರಿಗೆ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹೊರ ಬಂದಿದೆ. ಈ ದಿನಾಂಕ ಆಲಿಯಾ ಮನೆಯಲ್ಲಿ ಮತ್ತೊಬ್ಬರ ಬರ್ತಡೇ ಇದೆ ಎನ್ನಲಾಗಿದೆ. ಯಾವ ದಿನಾಂಕ? ಏನಿದರ ಹಿಂದಿರುವ ಮಿಸ್ಟರಿ?
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನವೆಂಬರ್ ತಿಂಗಳಿನಲ್ಲಿ ಮಗುವನ್ನು ಬರ ಮಾಡಿಕೊಳ್ಳುತ್ತಾರೆ ಎಂದು ಗೊತ್ತಿತ್ತು ಆದರೆ ದಿನಾಂಕ ರಿವೀಲ್ ಮಾಡಿರಲಿಲ್ಲ. ನೆವೆಂವರ್ 20 ರಿಂದ 30ರ ನಡುವೆ ಯಾವ ದಿನಾಂಕ ಬೇಕಿದ್ದರೂ ಮಗು ಹುಟ್ಟ ಬಹುದು ಎಂದು ಹೇಳಲಾಗಿತ್ತು ಆದರೆ ಆಪ್ತ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ನವೆಂಬರ್ 28 ಎನ್ನಲಾಗಿದೆ. ಏಕೆಂದರೆ ಆಲಿಯಾ ಭಟ್ ಸಹೋದರಿ ಶಾಷೀನ್ ಹುಟ್ಟುಹಬ್ಬವೂ 28ರಂದು ದಿನ ಎಂದು. ಆದರೆ ಒಂದೇ ದಿನ ಇಬ್ಬರ ಬರ್ತಡೇ ಬಂದ್ರೆ ಚೆನ್ನಾಗಿರುವುದಿಲ್ಲ ಎಂದು ಹಿಂದೆ ಮುಂದೆ ಮಾಡಿಕೊಳ್ಳಬಹುದು ಎನ್ನಲಾಗಿದೆ.
ಮುಂಬೈನ ಈ ಆಸ್ಪತ್ರೆಯಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ:
ಅಂದಹಾಗೆ ಅಲಿಯಾ ಭಟ್ ತನ್ನ ಹೆರಿಗೆಗೆ ಆಯ್ಕೆ ಮಾಡಿಕೊಂಡ ಆಸ್ಪತ್ರೆ ಮುಂಬೈನ ಎಚ್ ಎನ್ ರಿಲಯನ್ಸ್ ಫೌಂಡೇಶನ್. ಇದೇ ಆಸ್ಪತ್ರೆಯಲ್ಲಿ ಅಲಿಯಾ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ವರದಿಯಾಗಿದೆ. ಅಂದಹಾಗೆ ಅಲಿಯಾ ಇದೇ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಅವರ ಮಾವ, ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಕೊನೆಯುಸಿರೆಳೆದಿದ್ದು ಅದೇ ಆಸ್ಪತ್ರೆ. ಹಾಗಾಗಿ ಅದೇ ಆಸ್ಪತ್ರೆಯಲ್ಲಿ ಅಲಿಯಾ ಮಗುವಿಗೆ ಜನ್ಮ ನೀಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
Alia Bhatt 10 ವರ್ಷದ ಸಿನಿ ಜರ್ನಿ, ಬಿ-ಟೌನ್ ನಿರ್ಮಾಪಕಿಯರ ಜೀವನ ತುಂಬಾ ಕಷ್ಟ: ಆಲಿಯಾ ಭಟ್
ಮ್ಯಾರೀಡ್ ಲೈಫ್ ಬಗ್ಗೆ ಮಾತು:
'ಅಂತಹ ದೊಡ್ಡ ಬದಲಾವಣೆ ಆಗಿಲ್ಲ. ನಾವು ಐದು ವರ್ಷಗಳ ಕಾಲ ಒಟ್ಟಿಗೆ ಇದ್ದೆವು. ನಾವು ಮದುವೆಯಾಗೋಣ ಎಂದುಕೊಂಡೆವು. ನಮಗೂ ಕೆಲವು ಬದ್ಧತೆಗಳಿದ್ದವು. ಮದುವೆಯ ಮರುದಿನವೇ ನಾವಿಬ್ಬರೂ ಕೆಲಸಕ್ಕೆ ಹೊರಟೆವು. ಆಲಿಯಾ ಶೂಟಿಂಗ್‌ಗೆ ಹೋಗಿದ್ದಳು ಮತ್ತು ನಾನು ಮನಾಲಿಯಲ್ಲಿದ್ದೆ.ಆಕೆ ಲಂಡನ್ ನಿಂದ ಬಂದಾಗ ನನ್ನ ‘ಶಂಶೇರಾ’ ಚಿತ್ರ ಬಿಡುಗಡೆಯಾಗುತ್ತದೆ. ಅದರ ನಂತರ ನಾವು ಒಂದು ವಾರ ರಜೆ ತೆಗೆದುಕೊಳ್ಳಲು ಯೋಚಿಸುತ್ತೇವೆ. ನಾವು ಮದುವೆಯಾಗಿದ್ದೇವೆ ಎಂದು ನಮಗೆ ಇನ್ನೂ ತಿಳಿದಿಲ್ಲ' ಎಂದು ರಣಬೀರ್ ಮಾತನಾಡಿದ್ದಾರೆ.
ಆಲಿಯಾ ಭಟ್ ಪಕ್ಕದಲ್ಲಿಲ್ಲ ಅಂದ್ರೆ ತಿಂಡಿ ತಿನ್ನಲ್ಲ ರಣಬೀರ್:
ಅಯಾನ್ ಮುಖರ್ಜಿ ಜೊತೆ ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ಮಾತನಾಡುವಾಗ ಅನ್‌ಸ್ಕ್ರೀನ್ ಕ್ಯಾರೆಕ್ಟ್ ಮತ್ತು ಆಫ್‌ಸ್ಕ್ರೀನ್ ಕ್ಯಾರೆಕ್ಟರ್‌ನಲ್ಲಿ ಎಷ್ಟು ಹೊಂದಾಣಿಕೆ ಇದೆ ಎಂದು ರಣಬೀರ್ ರಿವೀಲ್ ಮಾಡಿದ್ದಾರೆ.
ಬೇಬಿ ಶವರ್ ಫೋಟೋಗಳನ್ನು ಹಂಚಿಕೊಂಡ ಆಲಿಯಾ ಭಟ್!
'ನಾನು ಇಂಡಿಪೆಂಡೆಂಟ್ ಅಂತ ಎಲ್ಲೇ ಹೋದ್ದರೂ ಹೇಳಿಕೊಳ್ಳುತ್ತೀನಿ ಆದರೆ ರಿಯಾಲಿಟಿ ಬೇರೆ ಇದೆ. ನಾನು ಅಲಿಯಾ ಮೇಲೆ ತುಂಬಾ ಡಿಪೆಂಡ್ ಆಗಿರುವೆ. ಆಲಿಯಾ ಪಕ್ಕದಲ್ಲಿ ಇಲ್ಲ ಅಂದ್ರೆ ನಾನು ತಿಂಡಿನೂ ತಿನ್ನುವುದಿಲ್ಲ ಬಾತ್‌ರೂಮ್‌ಗೂ ಹೋಗುವುದಿಲ್ಲ. ಆಲಿಯಾ ಎಲ್ಲಿದ್ದಾಳೆ ಎಂದು ತಿಳಿದುಕೊಂಡ ಮೇಲೆ ನನ್ನ ಕೆಲಸ ಆರಂಭಿಸುವುದು. ನನ್ನ ಪಕ್ಕ ಆಲಿಯಾ ಇದ್ದರೆ ಧೈರ್ಯ ಹೆಚ್ಚಾಗುತ್ತದೆ ಜೊತೆಗಿದ್ದೀವಿ ಅಂದ್ರೆ ನಾವು ರೊಮ್ಯಾನ್ಸ್ ಮಾಡ್ತೀವಿ ಅಂತಲ್ಲ ಸುಮ್ಮನೆ ಕುಳಿತುಕೊಳ್ಳಬೇಕು ಅಂತಲ್ಲ ಕಣ್ಣಿಗೆ ಕಾಣಿಸಿಕೊಂಡರೆ ಅಷ್ಟೇ ಸಾಕು' ಎಂದು ರಣಬೀರ್ ಹೇಳಿದ್ದಾರೆ.
ರಣಬೀರ್ ಮಾತುಗಳನ್ನು ಆಲಿಯಾ ಭಟ್ ಒಪ್ಪಿಕೊಂಡಿದ್ದಾರೆ 'ನಾನು ಪಕ್ಕದಲ್ಲಿ ಇಲ್ಲ ಅಂದ್ರೆ ರಣಬೀರ್ ಕೈಯಲ್ಲಿ ಏನು ಮಾಡಲು ಆಗುವುದಿಲ್ಲ. ನಾನು ಸುತ್ತಲಿಲ್ಲ ಅಂದ್ರೆ ರಣಬೀರ್ ಪ್ರತಿಯೊಂದು ಕೆಲಸವನ್ನು ಲಾಸ್ಟ್ ಮಿನಿಟ್‌ಗೆ ಬಿಡುತ್ತಾನೆ' ಎಂದಿದ್ದಾರೆ ಆಲಿಯಾ ಭಟ್.