MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ವಿಜಯ್​ ಜೊತೆ 2018ರಲ್ಲಿ ಮೊದಲ ಬಾರಿ ಲಿಪ್​ಲಾಕ್​​: ಆ ಶಾಕಿಂಗ್ ಅನುಭವ ನೆನಪಿಸಿಕೊಂಡ Rashmika Mandanna

ವಿಜಯ್​ ಜೊತೆ 2018ರಲ್ಲಿ ಮೊದಲ ಬಾರಿ ಲಿಪ್​ಲಾಕ್​​: ಆ ಶಾಕಿಂಗ್ ಅನುಭವ ನೆನಪಿಸಿಕೊಂಡ Rashmika Mandanna

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿಯ ನಡುವೆಯೇ, ವಿಜಯ್ ಜೊತೆಗಿನ ತಮ್ಮ ಮೊದಲ   ಕಿಸ್ಸಿಂಗ್ ಅನುಭವವನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ನೂರಾರು ಜನರ ಮುಂದೆ ಕಿಸ್ ಮಾಡಲು ಆರಂಭದಲ್ಲಿ ಮುಜುಗರವಾದರೂ, ವಿಜಯ್ ಅವರ ಸಹಕಾರದಿಂದ ಆ ದೃಶ್ಯವನ್ನು ಸುಲಭವಾಗಿ ಮಾಡಿದೆ ಎಂದಿದ್ದಾರೆ.

1 Min read
Author : Suchethana D
Published : Feb 25 2026, 06:56 PM IST
Share this Photo Gallery
  • FB
  • TW
  • Linkdin
  • Whatsapp
16
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಆರಂಭ
Image Credit : instagram

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಆರಂಭ

ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಜೋಡಿ ನಾಳೆ ಅರ್ಥಾತ್​ ಫೆ.26ರಂದು ಮದುವೆಯಾಗಲಿದೆ. ಇದಾಗಲೇ ಮದುವೆ ಶಾಸ್ತ್ರಗಳು ಆರಂಭ ಆಗಿವೆ. ಇಂದು ಹಳದಿ ಶಾಸ್ತ್ರ ಮಾಡಲಾಗಿದ್ದು, ಅದರ ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

26
ಹಲವು ವರ್ಷಗಳ ಸಂಬಂಧ
Image Credit : instagram

ಹಲವು ವರ್ಷಗಳ ಸಂಬಂಧ

ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಹಲವು ವರ್ಷಗಳಿಂದ ಸಂಬಂಧದಲ್ಲಿ ಇದ್ದರು. ಮದುವೆಯ ಬಗ್ಗೆ ಕೊನೆಯವರೆಗೂ ಗುಟ್ಟಾಗಿಯೇ ಇಟ್ಟಿದ್ದರು. ಇವರ ಮದುವೆ ಬಗ್ಗೆ ಸುದ್ದಿಗಳು ಹರಡುತ್ತಿದ್ದರೂ ಅದನ್ನು ಅವರು ಅಲ್ಲಗಳೆಯುತ್ತಲೇ ಬಂದವರು. ಹಲವಾರು ಊರುಗಳಿಗೆ, ದೇಶಗಳಿಗೆ ಒಟ್ಟಿಗೇ ಹೋಗಿ ಮಾಡಿ ಬಂದಿದ್ದರೂ, ಜೋಡಿ ಎಲ್ಲವನ್ನೂ ಗುಟ್ಟಾಗಿಯೇ ಇಟ್ಟಿತ್ತು.

Related Articles

Related image1
'ಸ್ಪೀಕರ್​ ಆನ್​ ಇದೆ, ಎಲ್ಲರೂ ಇದ್ದಾರೆ': ಭಾವಿ ಪತಿಗೆ ಹಿಂಟ್​ ಕೊಟ್ಟು ಪೇಚಿನಲ್ಲಿ​ Rashmika Mandanna- ವಿಡಿಯೋ ವೈರಲ್
Related image2
ವಿಜಯ್​ ಎದುರೇ ರಶ್ಮಿಕಾ ಮಂದಣ್ಣಗೆ, ರಕ್ಷಿತ್​ ಶೆಟ್ಟಿ ಬಗ್ಗೆ ಕನ್ನಡದಲ್ಲಿ ಪ್ರಶ್ನೆ! ನಟಿ ಏನ್​ ಹೇಳಿದ್ರು? ವಿಡಿಯೋ ವೈರಲ್​
36
ಕಿಸ್ಸಿಂಗ್​ ಅನುಭವ
Image Credit : Social Media

ಕಿಸ್ಸಿಂಗ್​ ಅನುಭವ

ಇದೀಗ ರಶ್ಮಿಕಾ ಮತ್ತು ವಿಜಯ್​ ದೇವರಕೊಂಡ ಅವರ ಜೊತೆಗೆ ತಮ್ಮ ಮೊದಲ ಕಿಸ್ಸಿಂಗ್​ ಅನುಭವವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ ಇದು ಆನ್​ಸ್ಕ್ರೀನ್​ ಕಿಸ್ಸಿಂಗ್​ ಕುರಿತು, ಅರ್ಥಾತ್​ ಸಿನಿಮಾದಲ್ಲಿ ಮೊದಲ ಬಾರಿಗೆ ವಿಜಯ್​ ಜೊತೆಗೆ ಕಿಸ್​ ಮಾಡಿದಾಗ ಏನಾಯ್ತು ಎಂದು ಅವರು ವಿವರಿಸಿದ್ದಾರೆ. ಅದರ ಸಂದರ್ಶನದ ತುಣುಕು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

46
ದಂಪತಿ ರೋಲ್​
Image Credit : Asianet News

ದಂಪತಿ ರೋಲ್​

ಅದು ಗೀತ ಗೋವಿಂದಂ ಚಿತ್ರ. ಈ ಚಿತ್ರ 2018ರಲ್ಲಿ ರಿಲೀಸ್​ ಆಗಿದೆ. ಇದರಲ್ಲಿ ಇವರಿಬ್ಬರೂ ಗಂಡ-ಹೆಂಡತಿ. ಆ ಸಮಯದಲ್ಲಿ ಅಲ್ಲಿದ್ದ 200 ಮಂದಿಯ ಎದುರು ಮೊದಲ ಬಾರಿಗೆ ವಿಜಯ್​ ಅವರನ್ನು ಮುತ್ತಿಕ್ಕಬೇಕಾದರೆ ಎಷ್ಟು ಕಷ್ಟ ಆಯಿತು ಎಂದು ಅವರು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

56
ಕಂಫರ್ಟ್​ ಎನ್ನಿಸಬೇಕು
Image Credit : instagram

ಕಂಫರ್ಟ್​ ಎನ್ನಿಸಬೇಕು

ನನಗೆ ಇದರ ಅನುಭವ ಇರಲಿಲ್ಲ. ಆರಂಭದಲ್ಲಿ ಆಘಾತಕಾರಿಯಾಗಿತ್ತು. ಅದೇ ವೇಳೆ ಯಾರೊಂದಿಗೆ ಆ ದೃಶ್ಯವನ್ನು ಮಾಡುತ್ತೀರಿ ಎನ್ನುವುದೂ ಮುಖ್ಯವಾಗುತ್ತದೆ. ಆ ಕಡೆ ಇದ್ದವರಿಗೂ ಇದೇ ರೀತಿಯ ಮುಜುಗರ ಆಗುತ್ತಿರುತ್ತದೆ. ಆದ್ದರಿಂದ ಅವರು ನಮಗೆ ಕಂಫರ್ಟ್​ ಎನ್ನಿಸಿದರೆ ಇಂಥ ದೃಶ್ಯ ಮಾಡಲು ಸುಲಭವಾಗುತ್ತದೆ. ಹಾಗೆಯೇ ನಾನೂ ಅಡ್ಜೆಸ್ಟ್​ ಆಗಿಬಿಟ್ಟೆ ಎಂದಿದ್ದಾರೆ.

66
ವಿಜಯ್​ ಸಹಕರಿಸಿದ್ರು
Image Credit : zee 5

ವಿಜಯ್​ ಸಹಕರಿಸಿದ್ರು

ಸಿನಿಮಾಕ್ಕೆ ಅಗತ್ಯ ಬಿದ್ದರೆ ಇಂಥ ದೃಶ್ಯಗಳನ್ನು ಬೇಡ ಎನ್ನಲು ಆಗುವುದಿಲ್ಲ. ಈ ಸಿನಿಮಾದಲ್ಲಿ ನಮ್ಮದು ಪತಿ-ಪತ್ನಿ ರೋಲ್​. ಮದುವೆಯಾದ ಮೇಲೆ ದಂಪತಿ ಎಲ್ಲವನ್ನೂ ಮಾಡಬೇಕಾಗುತ್ತದೆ. ಆದ್ದರಿಂದ ಕಿಸ್​ ಮಾಡುವುದು ಅನಿವಾರ್ಯವಾಗಿತ್ತು. ವಿಜಯ್​ ಅವರು ಕೂಡ ತುಂಬಾ ಸಹಕರಿಸಿದ್ದರಿಂದ ಈಸಿಯಾಗಿ ಕಿಸ್​ ಮಾಡಿದೆ ಎಂದಿದ್ದಾರೆ ರಶ್ಮಿಕಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ವಿಜಯ್ ದೇವರಕೊಂಡ
ಮದುವೆ
ಸಂಬಂಧಗಳು
ಪ್ರೀತಿ
ಪ್ರೇಮ ವಿವಾಹ
ಮನರಂಜನಾ ಸುದ್ದಿ
ರಶ್ಮಿಕಾ ಮಂದಣ್ಣ

Latest Videos
Recommended Stories
Recommended image1
'ಮೈ ಡಾರ್ಲಿಂಗ್ ರುಷಿ' ಎಂದು ಸೊಸೆಯನ್ನು ಕರೆದು ಮುದ್ದಾಡಿದ ಅತ್ತೆ ಮಾಧವಿ; ವಿಜಯ್ ರಿಯಾಕ್ಷನ್ ಏನಿತ್ತು ಗೊತ್ತಾ?
Recommended image2
ಲವ್​ ಜಿಹಾದ್​ಗೆ ಸಿಲುಕಿ ಕ್ರಿಕೆಟಿಗನ ಮದುವೆಯಾದ ಬಾಲಿವುಡ್​ ಬ್ಯೂಟಿ ರೀನಾ? ದುರಂತದ ಕಥೆ ರಿವೀಲ್​!
Recommended image3
ಇನ್ನೂರು ಜನರ ಮುಂದೆ ಮೊದಲ ಕಿಸ್ ಮಾಡಿದ್ದ ರಶ್ಮಿಕಾ.. ಆ 'Kiss' ವೈರಲ್ ಆಗಿತ್ತು; ಈಗ ವಿಜಯ್ ಜೊತೆ ಮದುವೆ!
Related Stories
Recommended image1
'ಸ್ಪೀಕರ್​ ಆನ್​ ಇದೆ, ಎಲ್ಲರೂ ಇದ್ದಾರೆ': ಭಾವಿ ಪತಿಗೆ ಹಿಂಟ್​ ಕೊಟ್ಟು ಪೇಚಿನಲ್ಲಿ​ Rashmika Mandanna- ವಿಡಿಯೋ ವೈರಲ್
Recommended image2
ವಿಜಯ್​ ಎದುರೇ ರಶ್ಮಿಕಾ ಮಂದಣ್ಣಗೆ, ರಕ್ಷಿತ್​ ಶೆಟ್ಟಿ ಬಗ್ಗೆ ಕನ್ನಡದಲ್ಲಿ ಪ್ರಶ್ನೆ! ನಟಿ ಏನ್​ ಹೇಳಿದ್ರು? ವಿಡಿಯೋ ವೈರಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved