Aditya Pancholi Birthday: ಕಂಗನಾ ಪ್ರೀತಿಗಾಗಿ ನಟಿಯ ಹಿಂದೆ ಹುಚ್ಚರಂತೆ ತಿರುಗಿದ್ದ ನಟ
ಆದಿತ್ಯ ಪಾಂಚೋಲಿ (Aditya pancholi) ಜನವರಿ 4, 1965 ರಂದು ಜನಿಸಿದರು. ಈ ನಟನ ತಂದೆ ರಾಜನ್ ಪಾಂಚೋಲಿ ಮತ್ತು ತಾಯಿ ಅರುಣಾ. ಮುಂಬೈನ ಲೋಕಲ್ ರೈಲಿನಲ್ಲಿ ತಿರುಗಾಡುತ್ತಿದ್ದಾಗ ನಿರ್ದೇಶಕರೊಬ್ಬರು ಇವರನ್ನು ನೋಡಿದ್ದರು ಎನ್ನಲಾಗಿದೆ. ಆದಿತ್ಯ ಪಾಂಚೋಲಿಯ ಚಾಣಾಕ್ಷತನವನ್ನು ನೋಡಿದ ಅವರು ಚಿತ್ರಗಳಲ್ಲಿ ಅದೃಷ್ಟವನ್ನು ಪ್ರಯತ್ನಿಸಲು ಸಲಹೆ ನೀಡಿದರು. ಅದರ ನಂತರ ಆದಿತ್ಯ ಪಾಂಚೋಲಿ ಗ್ಲಾಮರ್ ಉದ್ಯಮದಲ್ಲಿ ವೃತ್ತಿಜೀವನವನ್ನು ಮಾಡಲು ನಿರ್ಧರಿಸಿದರು. ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ.
ಆದಿತ್ಯ ಪಾಂಚೋಲಿ ಚಿತ್ರರಂಗಕ್ಕೆ ಕಾಲಿಡುವ ಮೊದಲೇ ತನಗಿಂತ ಹಿರಿಯ ನಟಿ ಜರೀನಾ ವಹಾಬ್ ಅವರನ್ನು ವಿವಾಹವಾಗಿದ್ದರು. ಅವರು 1986 ರಲ್ಲಿ ವಿವಾಹವಾದರು. ನಟಿ ಜರೀನಾ ವಹಾಬ್ ಮದುವೆಯ ನಂತರ, ನಟಿ ಚಲನಚಿತ್ರಗಳನ್ನು ತೊರೆದು ಮನೆಯನ್ನು ನೋಡಿಕೊಳ್ಳಲು ಪ್ರಾರಂಭಿಸಿದರು.
ಅದೇ ವರ್ಷದಲ್ಲಿ 'ಸಸ್ತಿ ದುಲ್ಹನ್ ಔರ್ ದುಬಾರಿ ದುಲ್ಹಾ' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಕೆಲವು ಸಿನಿಮಾದಲ್ಲಿ ಹೀರೋ ಆಗಿ ಮತ್ತು ಇನ್ನೂ ಕೆಲವುದರಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಅವರಿಗೆ ಮನ್ನಣೆ ಸಿಗಲಿಲ್ಲ.
ಮಹೇಶ್ ಭಟ್ ಅವರ ‘ಜಖ್ಮಿ ಜಮೀನ್’ ಸಿನಿಮಾದಿಂದ ಆದಿತ್ಯ ಅವರಿಗೆ ಬ್ರೇಕ್ ಸಿಕ್ಕಿತು. ಪ್ರಮುಖ ಪಾತ್ರದಲ್ಲಿ ಅವರು ಹೆಚ್ಚು ಯಶಸ್ವಿಯಾಗದಿದ್ದರೂ, ಅವರು ಪೋಷಕ ನಟನಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಇಲ್ಲಿಂದ ಅವರು ಹಿಟ್ ಆಗಲು ಪ್ರಾರಂಭಿಸಿದರು. ಅವರು ತಾಕೀಬ್, ಜೋಡಿದಾರ್, ಆಂಖೇನ್, ಯೇ ದಿಲ್ ಆಶಿಕಾನಾ, ಬಾಜಿರಾವ್ ಮಸ್ತಾನಿ, ಯೆಸ್ ಬಾಸ್ ಮುಂತಾದ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಸಿನಿಮಾಗಳಿಗಿಂತಲೂ ಹೆಚ್ಚಾಗಿ ಆದಿತ್ಯರ ಪರ್ಸನಲ್ ಲೈಫ್ ಹೆಚ್ಚು ವೈರಲ್ ಆಗಿದೆ. ಇವರ ರಿಲೆಷನ್‌ಶಿಪ್ ವಿವಾದಗಳಿಂದ ಕೂಡಿತ್ತು. ಅವರ ವಿರುದ್ಧ ಅತ್ಯಾಚಾರದಂತಹ ಗಂಭೀರ ಆರೋಪಗಳೂ ಕೇಳಿಬಂದಿವೆ. ಆದಿತ್ಯ ಪಾಂಚೋಲಿ ಮತ್ತು ನಟಿ ಪೂಜಾ ಬೇಡಿ ನಡುವಿನ ಸಂಬಂಧ ಆ ಸಮಯದಲ್ಲಿ ಸುದ್ದಿಯಾಗಿತ್ತು. ಆದರೆ ಈ ಸಂಬಂಧದ ಅಂತ್ಯವು ತುಂಬಾ ಕೆಟ್ಟದಾಗಿತ್ತು.
ವಾಸ್ತವವಾಗಿ ಪೂಜಾ ಬೇಡಿ ಅವರ ಅನುಪಸ್ಥಿತಿಯಲ್ಲಿ ಆಕೆಯ ಕೆಲಸದವಳ ಮೇಲೆ ದೈಹಿಕವಾಗಿ ಶೋಷಣೆಗೆ ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು. ಈ ವಿಷಯ ತಿಳಿದ ಪೂಜಾ ಬೇಡಿ ಆದಿತ್ಯ ಪಾಂಚೋಲಿ ಜೊತೆಗಿನ ಸಂಬಂಧವನ್ನು ಮುರಿದರು.
ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಲ್ಲೂ ಆದಿತ್ಯ ಪಾಂಚೋಲಿ ಹೆಡ್‌ಲೈನ್ ನ್ಯೂಸ್‌ನಲ್ಲಿದ್ದರು. ಆದಿತ್ಯ ಅವರ ಪುತ್ರ ಸೂರಜ್ ಪಾಂಚೋಲಿ ಜಿಯಾ ಜೊತೆ ಸಂಬಂಧ ಹೊಂದಿದ್ದರು. ಮಾಧ್ಯಮದವರು ಈ ಪ್ರಶ್ನೆಯನ್ನು ಕೇಳಿದಾಗ, ನಟ ಮಹಿಳಾ ಪತ್ರಕರ್ತೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಆತ ಪದೇ ಪದೇ ಮಹಿಳಾ ಪತ್ರಕರ್ತೆಯ ಕೈಗೆ ಬಾಗಿಲು ಹಾಕಿ ಗಾಯಗೊಳಿಸಿದ್ದಾನೆ. ಇದಾದ ನಂತರವೂ ನಿಲ್ಲದ ಪಾಂಚೋಲಿ ನಂತರ ವರದಿಗಾರನ ಕೈಯಿಂದ ಕ್ಯಾಮರಾ ಕಸಿದು ಒಡೆದಿದ್ದಾರೆ
ಆದಿತ್ಯ ಅವರ ಹೆಸರು ಬಾಲಿವುಡ್ 'ಕ್ವೀನ್' ಕಂಗನಾ ರಣಾವತ್ ಜೊತೆಗೆ ತಳುಕು ಹಾಕಿಕೊಂಡಿದೆ. ಅವರು 20 ವರ್ಷ ಕಿರಿಯ ಕಂಗನಾ ಹಿಂದೆ ಹುಚ್ಚರಾಗಿದ್ದರು. ಇದನ್ನು ನಂತರ ನಟಿ ಸ್ವತಃ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಕಂಗನಾ ಇಂಡಸ್ಟ್ರಿಯಲ್ಲಿ ಹೆಣಗಾಡುತ್ತಿದ್ದರು ಮತ್ತು ಆದಿತ್ಯ ಇಂಡಸ್ಟ್ರಿಯಲ್ಲಿ ಅವರ ಮೆಂಟರ್ ಪಾತ್ರದಲ್ಲಿದ್ದರು. ಇಬ್ಬರೂ ತುಂಬಾ ಕ್ಲೋಸ್ ಆಗಿದ್ದರು. ಕಂಗನಾ ಆದಿತ್ಯ ಪಾಂಚೋಲಿ ಮೇಲೆ ಅತ್ಯಾಚಾರ ಆರೋಪ ಮಾಡಿದ್ದಾರೆ. ಆದಿತ್ಯ ಪಾಂಚೋಲಿ ತನಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ನಟಿ ಹೇಳಿಕೆ ನೀಡಿದ್ದರು.
ಇದಲ್ಲದೆ ಅದಿತ್ಯ ಅನಿಲ್ ಕಪೂರ್‌ಗೆ ಬೆದರಿಕೆ ಹಾಕಿದ್ದಕ್ಕಾಗಿ ವಿವಾದಕ್ಕೊಳಗಾಗಿದ್ದರು.‘ತ್ರಿಮೂರ್ತಿ’ ಸಿನಿಮಾದ ಶೂಟಿಂಗ್ ವೇಳೆ ಅನಿಲ್ ಕಪೂರ್ ಅವರಿಗೆ ಸಿನಿಮಾ ತೊರೆಯುವಂತೆ ಬೆದರಿಕೆ ಹಾಕಲಾಗಿತ್ತು. ಭೂಗತ ಜಗತ್ತಿನ ಹೆಸರು ಹೇಳಿಕೊಂಡು ಅನಿಲ್ ಕಪೂರ್‌ಗೆ ಬೆದರಿಕೆ ಹಾಕುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಈ ಕಾಲ್ ವಿವರಗಳನ್ನು ಪರಿಶೀಲಿಸಿದಾಗ, ಆದಿತ್ಯ ಪಾಂಚೋಲಿ ಹೊರತುಪಡಿಸಿ ಬೇರೆ ಯಾರೂ ಈ ಬೆದರಿಕೆಗಳನ್ನು ನೀಡುತ್ತಿಲ್ಲ ಎಂದು ತಿಳಿದುಬಂದಿದೆ.