2004 ರಿಂದ 2006 ವರೆಗೂ ಬಾಲಿವುಡ್‌ ನಟಿಯ ಮೇಲೆ ಲೈಂಗಿಕ ಕಿರುಕುಳ ನಡೆಸಿರುವ ಆರೋಪ ಹೊತ್ತಿರುವ ನಟ ಆದಿತ್ಯ ಪಾಂಚೋಲಿಗೆ ಮುಂಬೈ ಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ. ವಿಚಾರಣೆಯನ್ನು ಆಗಸ್ಟ್‌ 3 ಕ್ಕೆ ಮುಂದೂಡಿದೆ.

ಬಲವಂತವಾಗಿ ಕನ್ನಡ ನಟಿಯನ್ನು ತಬ್ಬಿ ಮುತ್ತು ಕೊಟ್ಟ ವರ್ಮ!

 

ಆದಿತ್ಯ ಪಾಂಚೋಲಿ ಮದ್ಯಪಾನ ಮಾಡಿ ನಟಿಯ ಮೇಲೆ ಆರೋಪ ಮಾಡಿರುವುದಾಗಿ ಹಾಗೂ ಸ್ನೇಹಿತರಾಗಿದ್ದ ಸಮಯದಲ್ಲಿ ಇಬ್ಬರು ತೆಗೆದುಕೊಂಡ ಫೋಟೋವನ್ನು ಹಿಡಿದುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹಿಂದೊಮ್ಮೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅದಾದ ಮೇಲೆ ಮತ್ತೆ ಕರೆ ಮಾಡಿ ಬೆದರಿಕೆ ಹಾಕುತ್ತಿರುವುದರಿಂದ ನಟಿ ಮತ್ತೊಮ್ಮೆ ದೂರು ನೀಡಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 376 (ಅತ್ಯಾಚಾರ), ಸೆಕ್ಷನ್ 378, 384 (ಸಿಲಿಗೆ) ,341, 342, 323 ಹಾಗೂ 506 ಅಡಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಆದಿತ್ಯ 'ನಾನು ಯಾವ ತಪ್ಪು ಮಾಡಿಲ್ಲ. ಇದಕ್ಕೆ ನನ್ನ ಬಳಿ ಬಲವಾದ ಸಾಕ್ಷಿಯಿದೆ. ಎಫ್‌ ಐ ಆರ್ ದಾಖಲಾದ ಬಳಿಕ ಪೊಲೀಸರು ನನ್ನನ್ನು ಸಂಪರ್ಕಿಸಿದ್ದಾರೆ. ಅವರ ವಿಚಾರಣೆಗೆ ನನ್ನ ಸಂಪೂರ್ಣ ಬೆಂಬಲವಿದೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.