- Home
- Entertainment
- Cine World
- ಮುಖದ ತುಂಬಾ ಮೊಡವೆ ಇದ್ರೆ ಭಯವಿಲ್ಲದೆ ಎಂಜಲು ಹಚ್ಕೊಳ್ಳಿ; ಈ ಸ್ಟಾರ್ ನಟಿ ಮಾಡ್ತಿರೋದು ಇದೇ
ಮುಖದ ತುಂಬಾ ಮೊಡವೆ ಇದ್ರೆ ಭಯವಿಲ್ಲದೆ ಎಂಜಲು ಹಚ್ಕೊಳ್ಳಿ; ಈ ಸ್ಟಾರ್ ನಟಿ ಮಾಡ್ತಿರೋದು ಇದೇ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಸ್ಟಾರ್ ನಟಿಯರ ಮನೆ ಮದ್ದು. ಈ ರೀತಿ ಮಾಡಿದ್ರೆ ಮುಖ ಕಪ್ಪಾಗುತ್ತೆ ಅಂತಿದ್ದಾರೆ ನೆಟ್ಟಿಗರು.....

ಭಾರತೀಯ ಚಿತ್ರರಂಗದ ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯ ಅಪ್ಪಿತಪ್ಪಿ ಸ್ಕಿನ್ ಕೇರ್ ಮಾಹಿತಿ ಬಿಟ್ಟು ಕೊಟ್ಟರೆ ಜನರು ಪಕ್ಕಾ ಫಾಲೋ ಮಾಡುತ್ತಾರೆ ಏಕೆಂದರೆ ಆಕೆಯ ಬ್ಯೂಟಿ ಆ ರೀತಿ ಇದೆ.
ಮುಖ ಕಲರ್ ಬರಬೇಕು ಅಂತ ಕೆಲವರು ಯೋಚನೆ ಮಾಡಿದರೆ ಮುಖದಲ್ಲಿ ಇರುವ ಮೊಡವೆ ಮೊದಲು ಮಾಯವಾಗಲಿ ಎಂದು ಕೆಲವರು ಆಸೆ ಪಡುತ್ತಾರೆ. ಅವರಿಗೆ ಈ ಟಿಪ್ಸ್ ಪಕ್ಕಾ ವರ್ಕ್ ಆಗುತ್ತದೆ.
ಎಲ್ಲರಂತೆ ನನಗೂ ಮೊಡವೆ ಸಮಸ್ಯೆ ಇತ್ತು ಇದರಿಂದ ಮುಖದ ತುಂಬಾ ಕೆಂಪಾಗುತ್ತಿತ್ತು. ಇದಕ್ಕೆ ಡಾಕ್ಟರ್ ಬಳಿ ಹೋಗದೆ ಸರಿ ಮಾಡಿಕೊಂಡಿದ್ದೀನಿ ಅದುವೇ ನಮ್ಮ ಎಂಜಲು ಅಥವಾ ಲಾಲಾರಸದಿಂದ.
ಹೌದು! ಮುಂಜಾನೆ ಎದ್ದ ತಕ್ಷಣ ಬರುವ ಎಂಜಲನ್ನು ಮೊಡವೆಗೆ ಹಚ್ಚಬೇಕು. ಮೊಡವೆಯನ್ನು ಒಣಗಿಸುವ ಶಕ್ತಿ ಎಂಜಲಿಗೆ ಇರುತ್ತದೆ.ಇದನ್ನು ಕೇಳುವವರಿಗೆ ಅಸಹ್ಯ ಅನಿಸಬಹುದು ಆದರೆ ವರ್ಕೌಟ್ ಆಗುತ್ತದೆ ಎಂದಿದ್ದಾರೆ.
ಅಲ್ಲದೆ ಪ್ರತಿಯೊಬ್ಬರ ಚರ್ಮ ವಿಭಿನ್ನವಾಗಿರುತ್ತದೆ ಹೀಗಾಗಿ ಎಂಜಲು ಬಳಸಿದ್ರೂ ಮೊಡವೆ ಸಮಸ್ಯೆ ಮುಂದುವರೆದರೆ ವೈದ್ಯರನ್ನು ಸಂಪರ್ಕಿಸಿ ಎಂದು ಈ ಹಿಂದೆ ಸಂದರ್ಶನದಲ್ಲಿ ತಮನ್ನಾ ಸಲಹೆ ನೀಡಿದ್ದರು.
ತಮನ್ನಾ ನೀಡಿರುವ ಸಲಹೆಗೆ ವಿಜ್ಞಾನ ಕೂಡ ಸಪೋರ್ಟ್ ಮಾಡಿದೆ. ಬೆಳಗಿನ ಎಂಜಲಿನಲ್ಲಿ ಮೊಡವೆ ಕಡಿಮೆ ಮಾಡುವ ಮ್ಯಾಜಿಕ್ ಇದೆ ಹೀಗಾಗಿ ಮೊಡವೆ ಮಾತ್ರವಲ್ಲ ಗಾಯಗಳನ್ನು ಸರಿ ಮಾಡುವ ಶಕ್ತಿ ಹೊಂದಿದೆ ಎನ್ನಲಾಗಿದೆ.