ಶಾರ್ಟ್ ಬ್ಲೂ ಡ್ರೆಸ್‌ನಲ್ಲಿ ಸೆಕ್ಸಿಯಾಗಿ ಕಾಣಿಸಿಕೊಂಡ Janhvi Kapoor: ಪಡ್ಡೆಗಳ ದಿಲ್ ಧಡಕ್ ಹೆಚ್ಚಿಸಿದ ಶ್ರೀದೇವಿ ಪುತ್ರಿ!
ಶ್ರೀದೇವಿ-ಬೋನಿ ಕಪೂರ್ ಪುತ್ರಿ ಜಾನ್ವಿ ಕಪೂರ್ ನಟನೆ ಹಾಗೂ ಗ್ಲಾಮರಸ್ ಲುಕ್ನಿಂದ ಜನಪ್ರಿಯತೆ ಗಳಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಬಾಲಿವುಡ್ ನಟಿ ಜಾನ್ವಿ ಕಪೂರ್ ಮತ್ತೊಮ್ಮೆ ಶಾರ್ಟ್ ಬ್ಲೂ ಡ್ರೆಸ್‌ನಲ್ಲಿ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಗಣೇಶೋತ್ಸವಕ್ಕಾಗಿ ಒಂದು ದಿನ ಸಾಂಪ್ರದಾಯಿಕ ಸೀರೆ ಉಟ್ಟು ಅಪ್ಸರೆಯಂತೆ ಕಾಣಿಸಿಕೊಂಡಿದ್ದ ಜಾನ್ವಿ ಈಗ ಶಾರ್ಟ್ ಬ್ಲೂ ಡ್ರೆಸ್‌ನಲ್ಲಿ ಹಾಟ್ ಆಗಿ ಪೋಸ್ ನೀಡಿದ್ದಾರೆ.
ಫ್ಯಾಶನ್ ಡಿಸೈನರ್ ಡೇವಿಡ್ ಕೋಮಾ ವಿನ್ಯಾಸಗೊಳಿಸಿದ ಈ ಶಾರ್ಟ್ ಬ್ಲೂ ಡ್ರೆಸ್‌ನಲ್ಲಿ ಜಾನ್ವಿಯ ಅದ್ಭುತ ನೋಟವು ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸುವಂತಿದೆ.
ಸದಾ ಹೊಸ ಹೊಸ ಫ್ಯಾಷನ್ ಪ್ರತಿಪಾದಿಸುವ ಜಾನ್ವಿ. ಈ ನೀಲಿ ಬಣ್ಣದ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಮನೆಯಲ್ಲಿ ಗಣೇಶ ಚತುರ್ಥಿ ಆಚರಣೆಯಲ್ಲಿ ಭಾಗವಹಿಸಿದ್ದ ಜಾಹ್ನವಿ, ಸೀರೆಯಲ್ಲಿ ತುಂಬಾ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿದ್ದರು. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಶಾರ್ಟ್ ಬ್ಲೂ ಡ್ರೆಸ್‌ನ ಹಾಟ್ ಫೋಟೋಸ್ ಶೇರ್ ಮಾಡಿ ಗಮನಸೆಳೆದಿದ್ದಾರೆ.
ವರುಣ್ ಧವನ್ ಜೊತೆಗಿನ ‘ಬವಾಲ್’ ಸಿನಿಮಾದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದರು. ಈಗ ತೆಲುಗಿನ ಹೀರೋ ಜ್ಯೂ.ಎನ್‌ಟಿಆರ್‌ಗೆ ಹೀರೋಯಿನ್ ಆಗಿ ‘ದೇವರ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ತಮ್ಮ ಮೊದಲ ತೆಲುಗು ‘ದೇವರ’ ಸಿನಿಮಾಕ್ಕೆ ಬರೋಬ್ಬರಿ 5 ಕೋಟಿ ಸಂಭಾವನೆಯನ್ನು ಜಾನ್ವಿ ಪಡೆಯುತ್ತಿದ್ದು, ತೆಲುಗಿನ ಇನ್ಯಾವುದೇ ನಟಿ ಒಂದು ಸಿನಿಮಾಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆದಿಲ್ಲವಂತೆ.