- Home
- Entertainment
- Cine World
- 2026ರಲ್ಲಿ ಹಾಟ್ ಆಗಿರಬೇಕಾ, ಪ್ರೆಗ್ನೆಂಟ್ ಆಗಿಬಿಡಲೇ? ಸಲಹೆ ಕೇಳಿದ ನಟಿಗೆ ಭರ್ಜರಿ ಕಮೆಂಟ್
2026ರಲ್ಲಿ ಹಾಟ್ ಆಗಿರಬೇಕಾ, ಪ್ರೆಗ್ನೆಂಟ್ ಆಗಿಬಿಡಲೇ? ಸಲಹೆ ಕೇಳಿದ ನಟಿಗೆ ಭರ್ಜರಿ ಕಮೆಂಟ್
2026ರಲ್ಲಿ ಹಾಟ್ ಆಗಿರಬೇಕಾ, ಪ್ರೆಗ್ನೆಂಟ್ ಆಗಿಬಿಡಲೇ? ನಟಿ ಸಲಹೆ ಹಲವು ತಬ್ಬಿಬ್ಬಾಗಿದ್ದರೆ, ಮತ್ತೆ ಕೆಲವರು ಮಹತ್ವದ ಸಲಹೆ ನೀಡಿದ್ದಾರೆ. ಈ ವರ್ಷ ಏನು ಮಾಡಲಿ ಎಂದು ನಟಿ ಗೊಂದಲಕ್ಕೀಡಾಗಿ ವಿಡಿಯೋ ಮಾಡಿದ್ದಾರೆ.

ಅಭಿಮಾನಿಗಳಲ್ಲಿ ಸಲಹೆ ಕೇಳಿದ ನಟಿ
ಹೊಸ ವರ್ಷದ ಆರಂಭದಲ್ಲಿ ರೆಸಲ್ಯೂಶನ್, ಬದಲಾವಣೆ, ಈ ವರ್ಷ ಮಾಡಬೇಕಾದ ಕೆಲಸಗಳ ಕುರಿತು ಹಲವರು ಹೇಳಿಕೊಳ್ಳುತ್ತಾರೆ. ಇದೀಗ ಹೊಸ ವರ್ಷದ ಮೊದಲ ತಿಂಗಳಲ್ಲಿ 2 ವಾರ ಉರುಳಿದರೂ ನಟಿ ಅನಿತಾ ಹಸಂದಾನಿ ಗೊಂದಲಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ನಟಿ ಅನಿತಾ ಇದೀಗ ಅಭಿಮಾನಿಗಳು ಸೇರಿದಂತೆ ತನ್ನ ಫಾಲೋವರ್ಸ್ ಬಳಿ ಸಲಹೆ ಕೇಳಿದ್ದಾರೆ.
ವಿಡಿಯೋ ಮಾಡಿದ ಅನಿತಾ
ನಟಿ ಅನಿತಾ ಹಸಂದಾನಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ವಿಶೇಷವಾಗಿ ಫನ್ನಿ ವಿಡಿಯೋ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇದರ ನಡುವೆ 2026ರಲ್ಲಿ ತಾನು ಹಾಟ್ ಆಗಿರಬೇಕಾ ಅಥವಾ ಪ್ರೆಗ್ನೆಂಟ್ ಆಗಬೇಕಾ ಅನ್ನೋ ಗೊಂದಲದಲ್ಲಿ ಸಿಲುಕಿದ್ದಾರೆ. ಇದಕ್ಕಾಗಿ ವಿಡಿಯೋ ಮಾಡಿದ್ದಾರೆ.
ರೀಲ್ ಮಾಡಿ ಹರಿಬಿಟ್ಟ ಅನಿತಾ
ರೀಲ್ಸ್ ಮಾಡಿರುವ ಅನಿತಾ ಹಸಂದಾನಿ ಗೊಂದಲದಲ್ಲಿರುವುದು ಸ್ಪಷ್ಟವಾಗಿದೆ. ಈ ವಿಡಿಯೋದಲ್ಲಿ ಈ ವರ್ಷ ಹಾಟ್ ಆಗಿರಬೇಕಾ ಅಥವಾ ಪ್ರೆಗ್ನೆಂಟ್ ಆಗಬೇಕಾ ಅನ್ನೋ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಅನಿತಾ ಈ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ನೇಹಾ ಧೂಪಿಯಾ ಕಮೆಂಟ್‌ಗೆ ಜನ ಪಿಧಾ
ಅನಿತಾ ಹಸಂದಾನಿ ಪ್ರಶ್ನೆಗೆ ಬಾಲಿವುಡ್ ನಟಿ ನೇಹಾ ಧೂಪಿಯಾ ಪ್ರತಿಕ್ರಿಯಿಸಿದ್ದಾರೆ. ಪೆಗ್ಮೆಂಟ್ ಆಗೋದು ಅಂದರೆ ಹಾಟ್ ಎಂದಿದ್ದಾರೆ. ಇತ್ತ ಅನಿತಾ ಹಾಗೂ ನೇಹಾ ಧೂಪಿಯಾ ಕಮೆಂಟ್‌ಗೆ ಜನರು ಪ್ರತಿಕ್ರಿಯಿಸುತ್ತಿದ್ದಾರೆ. ಏನಾದರೂ ಪರ್ವಾಗಿಲ್ಲ, ಆದರೆ ಅದನ್ನೂ ವಿಡಿಯೋ ಮಾಡಿ ಹಾಕುವುದು ಬೇಡ ಎಂದು ಸಲಹೆ ನೀಡಿದ್ದಾರೆ.
ಅನಿತಾ ರೀಲ್ಸ್‌ಗೆ ಪತಿ ರೋಹಿತ್ ರೆಡ್ಡಿ ಕಮೆಂಟ್
ಅನಿತಾ ರೀಲ್ಸ್‌ಗೆ ಖುದ್ದು ಪತಿ ಕಮೆಂಟ್ ಮಾಡಿದ್ದಾರೆ. ಇದು ನಾವಿಬ್ಬರು ಮಾತನಾಡಬೇಕಾದ ವಿಷಯ ಎಂದು ಕಮೆಂಟ್ ಮಾಡಿದ್ದಾರೆ. ಪತಿಯ ಕಮೆಂಟ್‌ಗೆ ಜನರು ಪ್ರತಿಕ್ರಿಯಿಸಿದ್ದಾರೆ. ರೀಲ್ಸ್ ಮಾಡೋದರಲ್ಲೇ ಕಾಲ ಕಳದರೆ ಹೀಗೇ ಆಗಲಿದೆ. ಎಲ್ಲವೂ ರೀಲ್ಸ್‌ನಲ್ಲೇ ಮಾಡಿ ಮುಗಿಸಬೇಕಾಗುತ್ತದೆ ಎಂದ ಎಚ್ಚರಿಸಿದ್ದಾರೆ.
ಅನಿತಾ ರೀಲ್ಸ್‌ಗೆ ಪತಿ ರೋಹಿತ್ ರೆಡ್ಡಿ ಕಮೆಂಟ್
ಮಗುವಿನ ತಾಯಿ ನಟಿ ಅನಿತಾ ಹಸಂದಾನಿ
ನಟಿ ಅನಿತಾ ಹಸಂದಾನಿ ಒಂದು ಮಗುವಿನ ತಾಯಿ. 2013ರಲ್ಲಿ ರೋಹಿತ್ ರೆಡ್ಡಿ ಜೊತೆ ಅದ್ದೂರಿಯಾಗಿ ವಿವಾಹವಾದ ಅನಿತಾ ಹಸಂದಾನಿ, 2021ರಲ್ಲಿ ಗಂಡು ಮಗುವಿನ ಜನ್ಮ ನೀಡಿದ್ದಾರೆ. ಸದ್ಯ ಆರವ್ ತಾಯಿಯಾಗಿರುವ ಅನಿತಾ ಇದೀಗ ಮತ್ತೊಂದು ಮಗುವಿನ ಪ್ಲಾನ್‌ನಲ್ಲಿದ್ದಾರಾ ಎಂದು ಹಲವರು ಪ್ರಶ್ನಿಸಿದ್ದಾರೆ.
ಮಗುವಿನ ತಾಯಿ ನಟಿ ಅನಿತಾ ಹಸಂದಾನಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

