- Home
- Entertainment
- Cine World
- ಮಕ್ಕಳು ಮಾಡಿಕೊಳ್ಳಲ್ಲ, ಆ ಪ್ರಕ್ರಿಯೆಗೆ ದೇಹವನ್ನು ಒಳಪಡಿಸಲ್ಲ, ಮಿಲನ ನಟಿ ಪಾರ್ವತಿ ಅಚ್ಚರಿ ಹೇಳಿಕೆ
ಮಕ್ಕಳು ಮಾಡಿಕೊಳ್ಳಲ್ಲ, ಆ ಪ್ರಕ್ರಿಯೆಗೆ ದೇಹವನ್ನು ಒಳಪಡಿಸಲ್ಲ, ಮಿಲನ ನಟಿ ಪಾರ್ವತಿ ಅಚ್ಚರಿ ಹೇಳಿಕೆ
ಮಕ್ಕಳು ಮಾಡಿಕೊಳ್ಳಲ್ಲ, ಆ ಪ್ರಕ್ರಿಯೆಗೆ ದೇಹವನ್ನು ಒಳಪಡಿಸಲ್ಲ, ಗರ್ಭಧಾರಣೆ ನನಗೆ ಆಸಕ್ತಿ ಇಲ್ಲ ಎಂದು ಮಿಲನ ಸೇರಿದಂತೆ ಕನ್ನಡ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ ಪಾರ್ವತಿ ಹೇಳಿದ್ದಾರೆ. ಅಷ್ಟಕ್ಕೂ ಪಾರ್ವತಿ ಹೇಳಿದ್ದೇನು?

ಸಂಚಲನ ಸೃಷ್ಟಿಸಿದ ಪಾರ್ವತಿ ಹೇಳಿಕೆ
ನಟಿ ಪಾರ್ವತಿ ತಿರುವೋತ್ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ಮಿಲನ ಮೂಲಕ ಅದ್ಧೂರಿ ಎಂಟ್ರಿಕೊಟ್ಟಿದ್ದರು. ಬಳಿಕ ಶಿವರಾಜ್ ಕುಮಾರ್ ಜೊತೆ ಅಂಧರ್ ಬಾಹರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮಗು, ಗರ್ಭಧಾರಣೆ ಕುರಿತಿ ಅಚ್ಚರಿ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ.
ಗರ್ಭಿಣಿಯಾಗಲ್ಲ, ತಾಯಾಗುತ್ತೇನೆ
ನಟಿ ಪಾರ್ವತಿ ತಿರುವೋತ್ ಮಗುವನ್ನು ದತ್ತು ಪಡೆಯುವ ತಮ್ಮ ಆಸೆಯನ್ನು ಬಹಿರಂಗಪಡಿಸಿದ್ದಾರೆ. ಬಾಲ್ಯದಲ್ಲಿ ತಾಯಿಯಾಗಲು ತುಂಬಾ ಆಸೆ ಇತ್ತು, ಮಗುವಿಗೆ ಹೆಸರನ್ನು ಕೂಡ ಆಗಲೇ ಯೋಚಿಸಿದ್ದೆ, ಆದರೆ ಈಗ ಗರ್ಭಿಣಿಯಾಗಲು ಆಸಕ್ತಿ ಇಲ್ಲ ಎಂದು ಪಾರ್ವತಿ ಹೇಳಿದ್ದಾರೆ. ತಾನು ತಾಯಿಯಾಗಲೆಂದೇ ಹುಟ್ಟಿದ್ದೇನೆ ಎಂದು ಒಮ್ಮೆ ಅನಿಸಿತ್ತು, ಆದರೆ ಅದೃಷ್ಟವಶಾತ್ ಆ ಆಲೋಚನೆಯಿಂದ ಹೊರಬರಲು ಸಾಧ್ಯವಾಯಿತು ಎಂದು ಪಾರ್ವತಿ ಹೇಳಿದರು.
ಬಾಲಿವುಡ್ ನಟಿ ಸುಶ್ಮಿತಾ ಸೇನ್ ರೋಲ್ ಮಾಡೆಲ್
"ನನ್ನ ಮಗುವಿಗಾಗಿ ನಾನು ಇಟ್ಟ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದೇನೆ. ಏಳು ವರ್ಷದವಳಿದ್ದಾಗಲೇ ದತ್ತು ಪಡೆಯಬೇಕೆಂದು ನಾನು ನಿರ್ಧರಿಸಿದ್ದೆ. ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರೇ ನನಗೆ ರೋಲ್ ಮಾಡೆಲ್ ಎಂದಿದ್ದಾರೆ. ಅವರ ಸಂದರ್ಶನ ನನ್ನ ಮೇಲೆ ಬಹಳ ಪ್ರಭಾವ ಬೀರಿದೆ. ಅಪ್ಪ-ಅಮ್ಮ ಆಗ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈಗ ಟ್ಯಾಟೂ ಎಲ್ಲ ನೋಡಿದ ಮೇಲೆ ನನ್ನ ನಿರ್ಧಾರ ಗಂಭೀರವಾಗಿದೆ ಎಂದು ಅವರಿಗೆ ಅರ್ಥವಾಗಿದೆ" ಎಂದು ಪಾರ್ವತಿ ತಿರುವೋತ್ ಹೇಳುತ್ತಾರೆ. ಹೌಟರ್‌ಫ್ಲೈಗೆ ನೀಡಿದ ಸಂದರ್ಶನದಲ್ಲಿ ಪಾರ್ವತಿ ಈ ಬಗ್ಗೆ ಮಾತನಾಡಿದ್ದಾರೆ.
ದೇಹವನ್ನು ಆ ಪಕ್ರಿಯೆಗೆ ಒಳಪಡಿಸಲ್ಲ
ಒಂದು ವೇಳೆ ನಾನು ತಾಯಿಯಾಗಲು ಸಿದ್ಧಳಾಗಬಹುದು. ಆದರೆ ಸದ್ಯಕ್ಕೆ ಮಗುವಿಗೆ ಜನ್ಮ ನೀಡುವ ವ್ಯಕ್ತಿಯಾಗಿ ನಾನು ನನ್ನನ್ನು ನೋಡುವುದಿಲ್ಲ. ನಾನು ಅಂಡಾಣು ಫ್ರೀಜ್ ಮಾಡಿಲ್ಲ. ನನ್ನ ದೇಹವನ್ನು ಆ ಪ್ರಕ್ರಿಯೆಗೆ ಒಳಪಡಿಸಲು ನಾನು ಬಯಸುವುದಿಲ್ಲ. ಎಲ್ಲರಿಗೂ ಅವರದೇ ಆದ ನಿರ್ಧಾರಗಳಿವೆ. ನನ್ನ ನಿರ್ಧಾರಗಳು ಹಲವು ಬಾರಿ ಬದಲಾಗಿವೆ. ಒಂದು ಹಂತದಲ್ಲಿ ನಾನು ತಾಯಿಯಾಗಬೇಕೆಂದು ಮಾತ್ರ ಬಯಸಿದ್ದೆ ಎಂದಿದ್ದಾರೆ.
ನಾಯಿಯಿಂದ ಕಲಿತುಕೊಂಡಿದ್ದೇನೆ
ತಾಯಿಯಾಗಬೇಕು ಅನ್ನೋ ಆಲೋಚನೆಯಿಂದ ಹೊರಬರಲು ಸಾಧ್ಯವಾದದ್ದಕ್ಕೆ ದೇವರಿಗೆ ಧನ್ಯವಾದ. ಈ ರೀತೀಯ ಆಲೋಚನೆಯ ಒಂದು ಸಣ್ಣ ಅಂಶವೂ ಈಗ ನನ್ನಲ್ಲಿಲ್ಲ. ಆದರೆ ಮಗುವನ್ನು ನೋಡಿಕೊಳ್ಳುವ, ಪ್ರೀತಿಸುವ ಮನಸ್ಸಿದೆ. ಅದು ನನಗೆ ನನ್ನ ನಾಯಿಯಿಂದ ಸಿಕ್ಕಿದೆ ಎಂದು ಪಾರ್ವತಿ ಹೇಳಿದ್ದಾರೆ.
ಮಗು ಪಡೆಯಲು ಸಂಗಾತಿ ಅಂಶವೂ ಬೇಕು
ಭವಿಷ್ಯದಲ್ಲಿ ಮಗು ಬೇಕು ಎನಿಸಿದರೆ, ಅದು ನನ್ನ ಸಂಗಾತಿಯ ಅಂಶವೂ ಇರಬೇಕು ಎನಿಸಿದಾಗ ಮಾತ್ರ. ಇಂದಿನ ಪರಿಸ್ಥಿತಿಯಲ್ಲಿ ಮಗುವಿಗೆ ಜನ್ಮ ನೀಡುವುದೆಂದರೆ ಅವರನ್ನು ಬೆಂಕಿಗೆ ತಳ್ಳಿದಂತೆ. ಅದಕ್ಕಾಗಿ ಹೆಚ್ಚು ಮಕ್ಕಳನ್ನು ಪಡೆಯಲು ನಾನು ಬಯಸುವುದಿಲ್ಲ ಎಂದು ಪಾರ್ವತಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

