- Home
- Entertainment
- Cine World
- ವೆಡ್ಡಿಂಗ್ ಆನಿವರ್ಸರಿಗೆ ಯಾರೂ ಮಾಡಿರದ ಹಾಗೆ ಪ್ಲ್ಯಾನ್ ಮಾಡಿರೋ Pushpa Movie ನಟಿ ಅನುಸೂಯ ಭಾರದ್ವಾಜ್!
ವೆಡ್ಡಿಂಗ್ ಆನಿವರ್ಸರಿಗೆ ಯಾರೂ ಮಾಡಿರದ ಹಾಗೆ ಪ್ಲ್ಯಾನ್ ಮಾಡಿರೋ Pushpa Movie ನಟಿ ಅನುಸೂಯ ಭಾರದ್ವಾಜ್!
ಟಾಲಿವುಡ್ ನಟಿ, ನಿರೂಪಕಿ ಅನಸೂಯ ಬಗ್ಗೆ ಯಾರಿಗೂ ಪರಿಚಯ ಅಗತ್ಯವಿಲ್ಲ. ಎಷ್ಟೇ ಟೀಕೆಗಳು ಬಂದರೂ ಅನಸೂಯ ತಮ್ಮ ಅಭಿಪ್ರಾಯಗಳನ್ನು ಧೈರ್ಯವಾಗಿ ಹೇಳುತ್ತಾರೆ. ಕೆಲವೊಮ್ಮೆ ತುಂಬಾ ದಿಟ್ಟವಾಗಿಯೂ ಮಾತನಾಡುತ್ತಾರೆ.

ಟಾಲಿವುಡ್ ನಟಿ ಮತ್ತು ನಿರೂಪಕಿ ಅನಸೂಯ ಬಗ್ಗೆ ಯಾರಿಗೂ ಪರಿಚಯ ಅಗತ್ಯವಿಲ್ಲ. ಎಷ್ಟೇ ಟೀಕೆಗಳು ಬಂದರೂ ಅನಸೂಯ ತಮ್ಮ ಅಭಿಪ್ರಾಯಗಳನ್ನು ಧೈರ್ಯವಾಗಿ ಹೇಳುತ್ತಾರೆ. ಕೆಲವೊಮ್ಮೆ ತುಂಬಾ ದಿಟ್ಟವಾಗಿಯೂ ಮಾತನಾಡುತ್ತಾರೆ. ದಿಟ್ಟವಾಗಿ ಮಾತನಾಡಿದಾಗ ಕೆಲವು ಸಂದರ್ಭಗಳಲ್ಲಿ ಅನಸೂಯ ಟ್ರೋಲ್ ಗೆ ಒಳಗಾಗುತ್ತಾರೆ.
ಇತ್ತೀಚೆಗೆ ಒಂದು ಟಿವಿ ಕಾರ್ಯಕ್ರಮದಲ್ಲಿ ಅನಸೂಯ ಮಾಡಿದ ಕಾಮೆಂಟ್ಸ್ ವೈರಲ್ ಆಗಿವೆ. ಗಂಡ-ಹೆಂಡತಿ ಸಂಬಂಧದ ಬಗ್ಗೆ ಅನಸೂಯ ದಿಟ್ಟವಾಗಿ ಕೆಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಅನಸೂಯ ತಮ್ಮ ಪತಿ ಸುಶಾಂತ್ ಭಾರದ್ವಾಜ್ ಜೊತೆ ಹಾಜರಾಗಿದ್ದರು. ಗಂಡನ ಜೊತೆ ಜಗಳ ಆಗುತ್ತಲೇ ಇರುತ್ತದೆ ಎಂದು ಅನಸೂಯ ಹೇಳಿದ್ದಾರೆ.
“ಇಂದಿಗೂ ನಾನು ನನ್ನ ಗಂಡನ ಜೊತೆ ಜಗಳವಾಡಿ ತವರಿಗೆ ಹೋಗುತ್ತೇನೆ. ಅದು ನನಗೆ ಒಂದು ಖುಷಿ. ನನ್ನ ಗಂಡ ಜಗಳವಾದಾಗ ಮಾತ್ರವಲ್ಲ, ಸಂತೋಷವಾಗಿದ್ದಾಗಲೂ ನೀನು ತವರಿಗೆ ಹೋಗು ಅಂತ ಹೇಳ್ತಾರೆ" ಎಂದು ಅನುಸೂಯ ಹೇಳಿದ್ದಾರೆ.
“ಮದುವೆ ವಾರ್ಷಿಕೋತ್ಸವ ಬಂದ್ರೆ ಮಕ್ಕಳನ್ನ ದೂರ ಇಡ್ತೀವಿ. ಅವರನ್ನ ಅಮ್ಮನ ಮನೆಗೆ ಕಳಿಸ್ತೀವಿ. ಆ ದಿನ ನಾನು ಮತ್ತು ನನ್ನ ಗಂಡ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಹತ್ತಿರವಾಗಿರುತ್ತೇವೆ” ಎಂದು ಅನಸೂಯ ಹೇಳಿದ್ದಾರೆ.
ಟಾಲಿವುಟ್‌ನ ಖ್ಯಾತ ನಟಿ ಅನಸೂಯ ದಿಟ್ಟವಾಗಿ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

