'ಗೋವಿಂದಾಯ ನಮಃ' ಕೋಮಲ್ ಕುಮಾರ್ ಸಂಕಷ್ಟದ ವೇಳೆ ಪತ್ನಿ ಅನುಸೂಯಾ ಮಾಡಿದ್ದೇನು?
ಗೋವಿಂದಾಯ ನಮಃ ಚಿತ್ರದಲ್ಲಿ ಕೋಮಲ್ ಕುಮಾರ್ ಎದುರು ನಾಯಕಿಯಾಗಿ ಪಾರುಲ್ ಯಾದವ್ ನಟಿಸಿ ಕನ್ನಡಿಗರ ಮನಸೂರೆ ಮಾಡಿದ್ದರು. ಆ ಚಿತ್ರದ ಯಶಸ್ಸು ಕೋಮಲ್ ಹಾಗು ಪಾರುಲ್ ಇಬ್ಬರಿಗೂ ಮುಂದೆ ಬಹಳಷ್ಟು ಆಫರ್ ಸಿಗಲು ಕಾರಣವಾಗಿತ್ತು. ಆದರೆ..
ತ್ಯಾಗಕ್ಕೆ ಇನ್ನೊಂದು ಹೆಸರೇ ಹೆಣ್ಣು ಅಂತಾರೆ. ನಿಜವಾಗಿಯೂ ಗ್ರೇಟ್ ಎನ್ನಬಹುದಾದ ಅದೆಷ್ಟೋ ಹೆಣ್ಣುಮಕ್ಕಳು ನಮ್ಮನಿಮ್ಮ ನಡುವೆ ಇದ್ದಾರೆ ಎನ್ನುತ್ತಾರೆ. ಮನೆಯಲ್ಲಿ, ಸಂಸಾರದಲ್ಲಿ ಹಾಗೂ ಸಮಾಜದಲ್ಲಿ ಹೆಣ್ಣಿನ ಪಾತ್ರ ಮಹತ್ವದ್ದು ಎಂಬುದನ್ನು ಯಾರೂ ಅಲ್ಲಗಳೆಯಲಾಗದು. ಈ ಪೀಠಿಕೆಯೆಲ್ಲಾ ಈಗೇಕೆ ಎಂದರೆ, ಮುಂದಿದೆ ಇದಕ್ಕೇ ಸಮನ್ವಯವಾಗುವ ಸಂಗತಿ ಅದೇ ಆಗಿದೆ. ಕನ್ನಡದ ನಟರೊಬ್ಬರ ಪತ್ನಿ ತಮ್ಮ ಪತಿ ಕಷ್ಟದಲ್ಲಿದ್ದಾಗ ವಿದೇಶದಿಂದ ಓಡೋಡಿ ಬಂದಿರುವ ಘಟನೆ ನಡೆದಿದೆ. ಅದಕ್ಕಾಗಿಯೇ ಇದು!
ಹೌದು, ಆ ನಟನ ಹೆಂಡತಿ ಬೇರಾರು ಅಲ್ಲ, ಒಂದು ಕಾಲದ ಕನ್ನಡದ ಸೂಪರ್ ಹಿಟ್ ಮೂವಿ 'ಗೋವಿಂದಾಯ ನಮಃ' ಹೀರೋ ಪತ್ನಿ! ಆ ನಟ ಯಾರು ಎಂಬುದು ಈಗ ನಿಮಗೇ ಗೊತ್ತು, ಕಾಮಿಡಿ ಕಿಂಗ್ ಕೋಮಲ್ ಕುಮಾರ್. 2012ರಲ್ಲಿ ಬಿಡುಗಡೆ ಕಂಡು ಕನ್ನಡ ಸಿನಿರಂಗದಲ್ಲಿ ದಾಖಲೆ ಕಲೆಕ್ಷನ್ ಹಾಗೂ ಹೆಸರು ಮಾಡಿದ್ದ ಸಿನಿಮಾ ಕೋಮಲ್ ಕುಮಾರ್ (Komal Kumar) ನಟನೆಯ ಗೋವಿಂದಾಯ ನಮಃ. ಈ ಚಿತ್ರದಲ್ಲಿ (Govindaaya Namaha) ಬಳಕೆಯಾಗಿದ್ದ 'ಪ್ಯಾರ್‌ಗೇ ಆಗ್ಬಿಟ್ಟೈತೆ..' ಹಾಡುನ್ನು ಇಂದಿಗೂ ಗುನುಗುವವರಿದ್ದಾರೆ.
ಅನುಶ್ರೀ ಮುಂದೆ ಮೈಸೂರಿನ ಶಕ್ತಿಧಾಮದಲ್ಲಿ ಪತ್ನಿ ಗೀತಾಗೆ ಕಣ್ಣೀರು ಹಾಕಿಸಿದ ಶಿವಣ್ಣ!
ಗೋವಿಂದಾಯ ನಮಃ ಚಿತ್ರದಲ್ಲಿ ಕೋಮಲ್ ಕುಮಾರ್ ಎದುರು ನಾಯಕಿಯಾಗಿ ಪಾರುಲ್ ಯಾದವ್ ನಟಿಸಿ ಕನ್ನಡಿಗರ ಮನಸೂರೆ ಮಾಡಿದ್ದರು. ಆ ಚಿತ್ರದ ಯಶಸ್ಸು ಕೋಮಲ್ ಹಾಗು ಪಾರುಲ್ ಇಬ್ಬರಿಗೂ ಮುಂದೆ ಬಹಳಷ್ಟು ಆಫರ್ ಸಿಗಲು ಕಾರಣವಾಗಿತ್ತು. ಆದರೆ, ಕೆಲವು ವರ್ಷಗಳ ಬಳಿಕ ನಟ ಕೋಮಲ್ ಕುಮಾರ್ ಜಾದೂ ನಡೆಯಲಿಲ್ಲ. ನಟಸಿದ ಎಲ್ಲಾ ಚಿತ್ರಗಳು ಸೋಲು ಅನುಭವಿಸಿ ನಟ ಕೋಮಲ್ ಕುಮಾರ್ ಅವರು ಸತತ ಸೋಲುಗಳ ಸರದಾರ ಎನಿಸಿಕೊಂಡರು.
ಕಿಚ್ಚ ಸುದೀಪ್ ನಟನೆಯ 'ಕೆಂಪೇಗೌಡ' ಚಿತ್ರದ ಸೀಕ್ವೆಲ್ 'ಕೆಂಪೇಗೌಡ 2'ದಲ್ಲಿ (Kem[egowda 2) ನಟ ಕೋಮಲ್ ನಟಿಸಿದಾಗಲಂತೂ ಅವರಿಗೆ ಭಾರೀ ಟೀಕೆ ಕೇಳಿ ಬಂದಿದ್ದವು. ಈ ಚಿತ್ರದಲ್ಲಿ ಕೋಮಲ್ ಕುಮಾರ್ ಅವರು ಪೊಲೀಸ್ ಪಾತ್ರ ನಿರ್ವಹಿಸಿ ಹಲವರಿಂದ ಸ್ವತಃ 'ಕಾಮಿಡಿ'ಗೆ ಒಳಗಾಗಿದ್ದರು. ಕಾರಣ, ಖಡಕ್ ಪೊಲೀಸ್ ಆಫೀಸರ್ ಕೆಂಪೇಗೌಡ ಪಾತ್ರ ನಟ ಕೋಮಲ್ ಅವರಿಗೆ ಸರಿಹೊಂದುತ್ತಿಲ್ಲ ಅಂತ ಹಲವರು ಟೀಕೆ ಮಾಡಿದ್ದರು.
ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!
ಹೀಗೆ, ನಟ ಕೋಮಲ್ ಕುಮಾರ್ ಅವರ ಸಿನಿಮಾ ಕೆರಿಯರ್ ಅಯೋಮಯ ಎಂಬಂತಾಗಿತ್ತು. ಆಗಲೇ ವಿದೇಶದಲ್ಲಿ ಒಳ್ಳೆಯ ಕೆಲಸದಲ್ಲಿದ್ದ ಕೋಮಲ್ ಪತ್ನಿ ಅನುಸೂಯಾ ಅವರು ಗಂಡನ ಕಷ್ಟಕ್ಕೆ ಕರಗಿ, ಇಲ್ಲಿಯೇ ಅವರ ಜೊತೆಗಿರಲು ಓಡೋಡಿ ಬಂದರು ಎನ್ನಲಾಗಿದೆ. ಬೆಂಗಳೂರಿಗೆ ಬಂದ ಅವರು ಇಲ್ಲೊಂದು ಕಂಪನಿಗೆ ಸೇರಿಕೊಂಡು ಮನೆ ನಿರ್ವಹಿಸುವ ಜವಾಬ್ದಾರಿ ತೆಗೆದುಕೊಂಡರು. ಕಷ್ಟದಲ್ಲಿದ್ದ ಪತಿ ಹೆಗಲಿಗೆ ಹೆಗಲು ಕೊಟ್ಟು ಅನುಸೂಯಾ ಅವರು ಆಸರೆಯಾಗಿ ನಿಂತರು. ಕೋಮಲ್ ಕೂಡ ಸಂಸಾರಕ್ಕೆ ಒತ್ತಾಸೆಯಾಗಿ ನಿಂತರು ಎನ್ನಲಾಗಿದೆ.
ಬಳಿಕ, ಸಿನಿಮಾ ಅವಕಾಶಗಳ ಕೊರತೆ ಎದುರಿಸುತ್ತಿದ್ದರು ನಟ ಕೋಮಲ್. ಆದರೆ ಇತ್ತೀಚೆಗೆ ಮತ್ತೆ ಕನ್ನಡ ಸಿನಿಮಾ 'ಎಲಾಕುನ್ನಿ' ಮೂಲಕ ಸ್ಯಾಂಡಲ್‌ವುಡ್ ಪ್ರೇಕ್ಷಕರ ಮುಂದೆ ಬಂದರು ಕೋಮಲ್. ಎಲಾಕುನ್ನಿ ಸಿನಿಮಾ ಕೂಡ ಅಂತಹ ಯಶಸ್ಸನ್ನೇನೂ ಗಳಿಸಿಲ್ಲ. ಆದರೆ, ಕೋಮಲ್ ಅವರಿಗೆ ಕಷ್ಟಸುಖದಲ್ಲಿ ಸಮನಾಗಿ ಭಾಗಿಯಾಗುವ ಪತ್ನಿ ಜೊತೆಗಿದ್ದಾರೆ, ಹಾಗೂ ಕೋಮಲ್ ಕೂಡ ಸಂಸಾಸ ಸಾಗಿಸುವ ಜಾಣ್ಮೆ ಹೊಂದಿದ್ದಾರೆ ಎನ್ನಲಾಗುತ್ತಿದೆ. ಒಳ್ಳೆಯ ಲವ್ ಸ್ಟೋರಿ, ಗೋವಿಂದಾಯ ನಮಃ ಎನ್ನೋಣವೇ?
ಮುಚ್ಚುಮರೆ ಇಲ್ಲದೇ ನಟ ದರ್ಶನ್ ಕೇಸ್ ಬಗ್ಗೆ ಮುಕ್ತವಾಗಿ ಮಾತಾಡಿದ ಹಿರಿಯಣ್ಣ ಶಿವಣ್ಣ!