ರಾಮಾಯಣ ಚಿತ್ರದ 1 ನಿಮಿಷದ ಪಾತ್ರಕ್ಕಾಗಿ 5 ಕೋಟಿ ಪಡೆದ ನಟ
ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟಿಸುತ್ತಿರುವ ರಾಮಾಯಣ ಚಿತ್ರದಲ್ಲಿ ಯಶ್ ಕೇವಲ 15 ನಿಮಿಷ ಕಾಣಿಸಿಕೊಂಡರೂ, ₹50 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ರಣ್‌ಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ರಾಮಾಯಣ ಸಿನಿಮಾ ಇಡೀ ದೇಶದಲ್ಲಿ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾದ ಕ್ರೇಜ್ ಹೆಚ್ಚಾಗುತ್ತಿದೆ. ಶ್ರೀರಾಮಚಂದ್ರನ ಪಾತ್ರದಲ್ಲಿ ರಣ್‌ಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.
ರಾಮಾಯಣ ಚಿತ್ರದ ಕೆಲವು ಕಲಾವಿದರ ಸಂಭಾವನೆ ಲೀಕ್ ಆಗಿದೆ. ಎರಡು ಭಾಗದ ಸಿನಿಮಾಗಾಗಿ ರಣ್‌ಬೀರ್ ಕಪೂರ್ ಒಟ್ಟು 150 ಕೋಟಿ ರೂ. ಪಡೆದಿಯುತ್ತಿದ್ದಾರೆ ಎಂದು ವರದಿಯಾಗಿದೆ. ಇದೇ ಚಿತ್ರದಲ್ಲಿ 1 ನಿಮಿಷ ನಟನೆಗಾಗಿ ಬಾಲಿವುಡ್ ನಟ ಬರೋಬ್ಬರಿ 5 ಕೋಟಿ ರೂ. ಪಡೆಯುತ್ತಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ರಾಮಾಯಣದ ಮೊದಲ ಭಾಗದಲ್ಲಿ ಯಶ್ ಕೇವಲ 15 ನಿಮಿಷ ಮಾತ್ರ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು 2ನೇ ಭಾಗದಲ್ಲಿ ಯುಶ್ ಬಹುತೇಕ ಭಾಗವನ್ನು ಆವರಿಸಿಕೊಳ್ಳಲಿದ್ದಾರಂತೆ. ಮೊದಲ ಭಾಗದಲ್ಲಿ ರಾಮ ಮತ್ತು ಸೀತಾ ಜನನ, ಸೀತಾ ಸ್ವಯಂವರ, ಸೀತಾಪಹರಣ ಇರಲಿದೆ. ಎರಡನೇ ಭಾಗದಲ್ಲಿ ರಾವಣನ ಪಾತ್ರ ಮತ್ತು ರಾಮ-ರಾವಣನ ನಡುವಿನ ಯುದ್ಧದ ಸನ್ನಿವೇಶಗಳನನ್ನು ಒಳಗೊಂಡಿರಲಿದೆ.
1 ನಿಮಿಷಕ್ಕೆ 5 ಕೋಟಿ!
ಲಂಕಾಧಿಪತಿಯಾಗಿ ನಟಿಸುತ್ತಿರುವ ಯಶ್ ಮೊದಲ ಭಾಗಕ್ಕೆ 50 ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಮೊದಲ ಭಾಗದಲ್ಲಿ ಕೇವಲ 10 ರಿಂದ 15 ನಿಮಿಷ ಮಾತ್ರ ಯಶ್ ಕಾಣಿಸುತ್ತಿದ್ದಾರೆ. ಅಂದ್ರೆ ಯಶ್ ಸಂಭಾವನೆ 1 ನಿಮಿಷಕ್ಕೆ 5 ಕೋಟಿ ರು. ಎಂದಾಗುತ್ತದೆ.
ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿರುವ ರಾಮಾಯಣ ಮೊದಲ ಭಾಗದ ಚಿತ್ರೀಕರಣಕ್ಕೆ 900 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಎರಡನೇ ಭಾಗಕ್ಕೆ 700 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎನ್ನಲಾಗಿದೆ. ಯಶ್ ನಟನೆ ಜೊತೆಯಲ್ಲಿ ಸಿನಿಮಾಗೆ ಬಂಡವಾಳ ಹೂಡಿಕೆಯೂ ಮಾಡಿದ್ದಾರೆ.