- Home
- Entertainment
- Cine World
- Vishnu Manchu: ನಾನು ಪಕ್ಕಾ ಹಿಂದುತ್ವವಾದಿ, ನನ್ ಹೆಂಡ್ತಿ ಕ್ರಿಶ್ಚಿಯನ್: ಧಾರ್ಮಿಕ ವ್ಯತ್ಯಾಸದ ನಟ ವಿಷ್ಣು ಮಂಚು ಸಂದರ್ಶನ
Vishnu Manchu: ನಾನು ಪಕ್ಕಾ ಹಿಂದುತ್ವವಾದಿ, ನನ್ ಹೆಂಡ್ತಿ ಕ್ರಿಶ್ಚಿಯನ್: ಧಾರ್ಮಿಕ ವ್ಯತ್ಯಾಸದ ನಟ ವಿಷ್ಣು ಮಂಚು ಸಂದರ್ಶನ
ನಟ ವಿಷ್ಣು ಮಂಚು ಅವರು ʼಕಣ್ಣಪ್ಪʼ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಈ ವೇಳೆ ಅವರು ತಾವು ಹಿಂದು, ಹಿಂದುತ್ವವಾದಿ, ನನ್ನ ಹೆಂಡ್ತಿ ಕ್ರಿಶ್ಚಿಯನ್ ಎಂದು ಹೇಳಿದ್ದಾರೆ.

ವಿಷ್ಣು ಮಂಚು ಅವರು “ಭಗವಾನ್ ಶಿವನಿಗೆ ಕಣ್ಣಪ್ಪ ಮಾಂಸವನ್ನು ಅರ್ಪಿಸಿದನು. ಅದನ್ನು ಶಿವ ಸ್ವೀಕರಿಸಿದನು. ಕೆಲವರು ಇದನ್ನು ಪಾಪವೆಂದು ತಿಳಿಸಬಹುದು, ಆದರೆ ಕಣ್ಣಪ್ಪನಿಗೆ ಅದು ತಾನು ಊಟ ಮಾಡುತ್ತಿದ್ದ ಅತ್ಯುತ್ತಮ ದಿವ್ಯ ಭೋಜನವೆಂದು ಭಾಸವಾಯಿತು. ಅವನು ಅದನ್ನು ಶಿವನಿಗೆ ಸಮರ್ಪಿಸಿದ. ಅದು ಲೆಕ್ಕಾಚಾರವಲ್ಲ” ಎಂದು ಹೇಳಿದ್ದಾರೆ.
“ಮೂಲತಃ ಎರಡನೇ ಶತಮಾನದಲ್ಲಿ ಕೆಲವರು ನಾವು ಮಾತ್ರ ದೇವರನ್ನು ಪೂಜಿಸಬಹುದು; ನೀನು, ಶೂದ್ರ, ಶುಚಿ ಅಲ್ಲ ಎಂದು ನಂಬುತ್ತಾರೆ. ಆದರೆ ದೇವರ ದೃಷ್ಟಿಯಲ್ಲಿ ನಾವು ಎಲ್ಲರೂ ಸಮಾನರು. ಇದೇ ವಿಷಯವೇ ನನಗೆ ಇಷ್ಟವಾಯಿತು. ದೇವರು ಎಲ್ಲೆಡೆ ಇರುವನು. ನನ್ನ ಹೆಂಡತಿ ಕ್ರಿಶ್ಚಿಯನ್, ನಾನು ಕಠಿಣ ಹಿಂದೂ, ಆದರೆ ಅವಳು ಬೈಬಲ್ ಓದಿ ಅದನ್ನು ಪ್ರತಿನಿತ್ಯವೂ ಅದನ್ನು ಬೆಡ್ ಕೆಳಗಡೆ ಇಡುತ್ತಾಳೆ. ಅದು ಅವಳ ನಂಬಿಕೆ” ಎಂದಿದ್ದಾರೆ
“ವಿಷ್ಣು ಮಂಚು ಹಾಗೂ ವಿರಾನಿಕಾ ಅವರು 2006ರಲ್ಲಿ ಭೇಟಿಯಾದರು. “ನನ್ನ ಅಜ್ಜನ ಮನೆಯ ಪಾರ್ಟಿಯಲ್ಲಿ ವಿಷ್ಣುರನ್ನು ಮೊದಲು ನೋಡಿದೆ, ನಾನು ವಿಷ್ಣು ತಂದೆಯನ್ನು ನೋಡಲು ಹಾತೊರೆಯುತ್ತಿದ್ದೆ, ಆಗ ಕಾರ್‌ನಿಂದ ವಿಷ್ಣು ಇಳಿದರು. ಆಮೇಲೆ ನಾವಿಬ್ಬರೂ ಮಾತಾಡಿದೆವು, ಪ್ರೀತಿ ಹುಟ್ಟಿತು, ಮದುವೆಯಾದೆವು” ಎಂದು ವಿರಾನಿಕಾ ಅವರು ಈ ಹಿಂದೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು” ಎಂದು ವಿರಾನಿಕಾ ಹೇಳಿದ್ದರು.
2008ರಲ್ಲಿ ವಿಷ್ಣು ಮಂಚು, ವಿರಾನಿಕಾ ಮದುವೆಯಾದರು. ಇವರಿಬ್ಬರಿಗೆ ನಾಲ್ವರು ಮಕ್ಕಳಿದ್ದಾರೆ. ನಾಲ್ಕು ಮಕ್ಕಳಿದ್ದಾರೆ ಎಂದು ಈ ಜೋಡಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಅಂದಹಾಗೆ ವಿಷ್ಣು ಮನೋಜ್, ಸಹೋದರ ಮಂಚು ಮನೋಜ್ ನಡುವೆ ಯಾವಾಗಲೂ ಜಗಳ ಆಗುತ್ತಿರುತ್ತದೆ. ಹೀಗಾಗಿ ಇದು ಇವರ ಮಕ್ಕಳ ಮೇಲೆ ಪ್ರಭಾವ ಬೀರಿದೆಯಂತೆ.
ಅಂದಹಾಗೆ ವಿಷ್ಣು ಮಂಚು, ವಿರಾನಿಕಾ ಮಧ್ಯೆ ಧರ್ಮದ ವಿಚಾರವಾಗಿ ಎಂದೂ ಸಮಸ್ಯೆ ಆಗಿಲ್ಲ. ಪರಸ್ಪರ ಇಬ್ಬರೂ ಎರಡೂ ಧರ್ಮಗಳನ್ನು ಗೌರವಿಸ್ತಾರೆ, ಪಾಲಿಸ್ತಾರೆ.