- Home
- Entertainment
- Cine World
- 40ನೇ ವಯಸ್ಸಿಗೆ ರಾಯಲ್ ಮದುವೆ ಆಯ್ತು, 2 ವರ್ಷಕ್ಕೆ ಪತ್ನಿಯಿಂದ ದೂರವಾದ್ರಾ ಸ್ಟಾರ್ ನಟ? ಛೇ....!
40ನೇ ವಯಸ್ಸಿಗೆ ರಾಯಲ್ ಮದುವೆ ಆಯ್ತು, 2 ವರ್ಷಕ್ಕೆ ಪತ್ನಿಯಿಂದ ದೂರವಾದ್ರಾ ಸ್ಟಾರ್ ನಟ? ಛೇ....!
ತೆಲುಗು ನಟ ಶರ್ವಾನಂದ್ (Sharwanand) ಅವರು ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಭಾರಿ ಚರ್ಚೆಯಾಗುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿರುವ ಮದುವೆಯ ಫೋಟೋಗಳನ್ನು ಕೂಡ ಅವರು ಡಿಲಿಟ್ ಮಾಡಿದ್ದಾರೆ.

ಕಾರಣ ಏನು?
ನಟ ಶರ್ವಾನಂದ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಪತ್ನಿ ರಕ್ಷಿತಾ ರೆಡ್ಡಿ ಜೊತೆಗಿನ ಮದುವೆಯ ಫೋಟೋಗಳನ್ನು ಡಿಲಿಟ್ ಮಾಡಿದ್ದಾರೆ. ಇವರ ಸಿನಿಮಾ, ಫ್ರೆಂಡ್ಸ್ ಫೋಟೋ ಬಿಟ್ಟರೆ ಇವರ ಪತ್ನಿ ಫೋಟೋ ಇಲ್ಲ. ಈ ನಡೆ ಸಾಕಷ್ಟು ಅನುಮಾನ ಮೂಡಿಸಿದೆ. ಕೆಲ ಸೆಲೆಬ್ರಿಟಿಗಳು ಇದ್ದಕ್ಕಿಂತ ಕುಟುಂಬದ ಜೊತೆಗಿನ ಫೋಟೋವನ್ನು ಡಿಲಿಟ್ ಮಾಡೋದುಂಟು. ಇನ್ನು ಕೆಲವರು ಡಿವೋರ್ಸ್ ಟೈಮ್‌ನಲ್ಲಿ ಈ ನಿರ್ಧಾರ ಮಾಡ್ತಾರೆ, ಇನ್ನೂ ಕೆಲವರು ಪತಿಯ ಸರ್‌ನೇಮ್ ಬದಲಿಸ್ತಾರೆ.
ಮಗಳು ಹುಟ್ಟಿದಳು, ಸಪರೇಟ್ ಜೀವನ
ಶರ್ವಾನಂದ್ ಅವರು 2023ರಲ್ಲಿ ಮದುವೆಯಾಗಿದ್ದರು. 2024ರಲ್ಲಿ ಲೀಲಾ ದೇವಿ ಮೈನಾನಿ ಎಂಬ ಮಗಳು ಜನಿಸಿದ್ದಳು. 2025ರಲ್ಲಿ ಪತಿ-ಪತ್ನಿ ದೂರ ದೂರ ಇದ್ದಾರೆ, ಸಪರೇಟ್ ಜೀವನ ಮಾಡ್ತಿದ್ದಾರೆ ಎಂದು ವದಂತಿಯಾಗಿತ್ತು. ಇವರು ಆ ಬಳಿಕ ಪತ್ನಿ ಬಗ್ಗೆ, ಮದುವೆ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ.
ಡಿವೋರ್ಸ್ ತಗೊಳ್ತಿದ್ದಾರಾ?
ಈಗ ಇವರಿಬ್ಬರು ಡಿವೋರ್ಸ್ ತಗೊಳ್ತಿದ್ದಾರೆ ಎನ್ನಲಾಗ್ತಿದೆ. ಅಂದಹಾಗೆ ಶರ್ವಾನಂದ ಅವರು 40ನೇ ವಯಸ್ಸಿಗೆ ಮದುವೆಯಾಗಿದ್ದರು. ಈಗ ಅವರಿಗೆ 42 ವರ್ಷ. ಒಟ್ಟಿನಲ್ಲಿ ವೈವಾಹಿಕ ಜೀವನದಲ್ಲಿ ಏನಾಗಿದೆ ಎಂದು ಅವರೇ ಹೇಳಬೇಕು.
ರಕ್ಷಿತಾ ಶೆಟ್ಟಿ ಯಾರು?
ರಕ್ಷಿತಾ ಶೆಟ್ಟಿ ಅವರು ಐಟಿ ಉದ್ಯೋಗಿ ಎನ್ನಲಾಗಿದೆ. ರಕ್ಷಿತಾ ಕುಟುಂಬಸ್ಥರು ರಾಜಕೀಯವಾಗಿ ಆಕ್ಟಿವ್ ಆಗಿದ್ದು, ತಂದೆ ಹೈಕೋರ್ಟ್ ವಕೀಲರು ಕೂಡ ಹೌದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

